ರಾಜ್ಯಾದ್ಯಂತ ಮಧ್ಯಾಹ್ನದ ಬಿಸಿಯೂಟದ ಜೊತೆ ಮಕ್ಕಳಿಗೆ ಮೊಟ್ಟೆ ವಿತರಣೆ

ಬೆಂಗಳೂರು: ರಾಜ್ಯಾದ್ಯಂತ ಮಧ್ಯಾಹ್ನದ ಬಿಸಿಯೂಟದಲ್ಲಿ ಡಿಸೆಂಬರ್ ನಿಂದ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಇತ್ತೀಚಿಗೆ ತಮಿಳುನಾಡಿಗೆ ಭೇಟಿ ನೀಡಿತ್ತು.

ಈಗಾಗಲೇ ಮಧ್ಯಾಹ್ನದ ಬಿಸಿಯೂಟವನ್ನು ಶಾಲೆಗಳಲ್ಲಿ ನೀಡುತ್ತಿದ್ದು, ಮೊಟ್ಟೆಯನ್ನು ಡಿಸೆಂಬರ್‍ನಿಂದ ನೀಡಲಾಗುತ್ತದೆ. ಡಿಸೆಂಬರ್‍ನಿಂದ 46 ದಿನಗಳ ಕಾಲ ಏಳು ಜಿಲ್ಲಾಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಫೆಬ್ರವರಿವರೆಗೆ ಮೊಟ್ಟೆ ನೀಡಲು ಮುಂದಾಗಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಅಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ ನಿಂದ  ಫೆಬ್ರವರಿವರೆಗೆ ರಾಜ್ಯ ಸರ್ಕಾರ, ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡುವ 46 ದಿನಗಳ ಪ್ರಾಯೋಗಿಕ ಅಧ್ಯಯನ ಮಾಡಲಾಗುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಯಾದಗಿರಿ, ರಾಯಚೂರು, ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲಾಗಳಲ್ಲಿ 1ರಿಂದ 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸುವ ಬಗ್ಗೆ ಪ್ರಾಯೋಗಿಕ ಅಧ್ಯಯನ ನಡೆಸಲು ಮುಂದಾಗಿದೆ. ಸರ್ಕಾರ 14 ಲಕ್ಷದ 44 ಸಾವಿರದ 322 ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ವಿತರಿಸುವ ಯೋಜನೆಯಿದೆ.

ಬಿಸಿಯೂಟದಲ್ಲಿ ಮೊಟ್ಟೆ ನೀಡುವ ಯೋಜನೆಗೆ 39.53 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರವು ತನ್ನ ಫ್ಲೆಕ್ಸಿಫಂಡ್ ಘಟಕದ ಅಡಿಯಲ್ಲಿ ಭರಿಸುತ್ತದೆ. ಈ ತಂಡವು ಧಾರವಾಡ ಮತ್ತು ಕಲಬುರಗಿ ವಿಭಾಗಗಳನ್ನು ಪ್ರತಿನಿಸುವ ಶಿಕ್ಷಣ ಇಲಾಖೆ ಅಕಾರಿಗಳನ್ನು ಅಧ್ಯಯನಕ್ಕೆ ಸೇರಿಸುತ್ತದೆ ಎಂದು ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.

ಮೊಟ್ಟೆ ತಿನ್ನದವರಿಗೆ ಬದಲಿ ಧಾನ್ಯ:

ಈ ಮಧ್ಯೆ, ಇಲಾಖೆಯು ಮೊಟ್ಟೆ ಬದಲಿಗೆ ಸಸ್ಯಾಹಾರಿಗಳಿಗೆ ಪರ್ಯಾಯ ಪೌಷ್ಠಿಕ ಆಹಾರ ನೀಡಲು ಮುಂದಾಗುತ್ತಿದೆ. ಯಾವುದನ್ನು ನೀಡಬೇಕು ಎಂಬುದನ್ನು ಸದ್ಯದಲ್ಲೇ ಅಂತಿಮಗೊಳಿಸಲಾಗುವುದು. ಹೆಚ್ಚಾಗಿ ಹಾಲು, ಕ್ಯಾಲ್ಸಿಯಂ ಆಧಾರಿತ, ಧಾನ್ಯ, ರಾಗಿಯ ಆಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

Swathi MG

Recent Posts

ದೇವಾಲಯಕ್ಕೆ ಹೋಗುತ್ತಿದ್ದ ಕಾರಿಗೆ ಅಪರಿಚಿತ ವಾಹನ ಡಿಕ್ಕಿ: 6 ಜನ ಮೃತ್ಯು

ದೇವಾಲಯಕ್ಕೆ ಹೋಗುತ್ತಿದ್ದ ಕಾರಿಗೆ ಅಪರಿಚಿತ ವಾಹನವೊಂದು ಭಯಾನಕವಾಗಿ ಡಿಕ್ಕಿಯಾದ ಪರಿಣಾಮ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ…

1 min ago

ಮಲೆಯೂರು ಪಿಎಸಿಸಿ ಬ್ಯಾಂಕ್‌ನಲ್ಲಿ ಗಿರವಿ ಇಟ್ಟಿದ್ದ ಚಿನ್ನಾಭರಣ ವಾಪಸ್

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘವು ರೈತರೊಂದಿಗೆ ನಡೆಸಿದ ನಿರಂತರ ಹೋರಾಟಕ್ಕೆ ಫಲ ದೊರೆತಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ತಾಲೂಕಿನ…

8 mins ago

ಗಬ್ಬೆದ್ದು ನಾರುತ್ತಿರುವ ಚರಂಡಿ: ಅಂಬೇಡ್ಕರ್ ನಾಮಫಲಕದ ಬಳಿಯೇ ದುರ್ನಾತ

ಗಬ್ಬೆದ್ದು ನಾರುತ್ತಿರುವ ಚರಂಡಿಯ ಅವ್ಯವಸ್ಥೆಯಿಂದಾಗಿ ಗ್ರಾಮಸ್ಥರು ಮೂಗು, ಬಾಯಿ ಮುಚ್ಚಿಕೊಂಡೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ…

25 mins ago

ಪ್ರಜ್ವಲ್ ರೇವಣ್ಣ ಸಹ ಅರೆಸ್ಟ್ ಆಗಲೇಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅವರ ಪೆನ್‍ಡ್ರೈವ್ ಪ್ರಕರಣ ಹಾಗೂ ರೇವಣ್ಣ ಬಂಧನದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,…

33 mins ago

ಮಳೆರಾಯನಿಗಾಗಿ ದೇವರ ಮೊರೆ ಹೋದ ತುಮಕೂರು ಜನತೆ

ಬಿಸಿಲ ತಾಪಕ್ಕೆ ಜನ ಜೀವನ ತತ್ತರಿಸಿ ಹೋಗಿದ್ದು, ಇದೀಗ ಮಳೆರಾಯನ ಕಣ್ಣಾಮುಚ್ಚಾಲೆ ಆಟ ನಿಲ್ಲಿಸಲೆಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ…

34 mins ago

ಕರ್ನಾಟಕದ ಮಾನ-ಮರ್ಯಾದೆ ರಸ್ತೆಗಳಲ್ಲಿ ಪೆನ್‌ಡ್ರೈವ್ ಮೂಲಕ ಹರಾಜಾಗುತ್ತಿದೆ

ಪ್ರಜ್ವಲ್ ವಿಚಾರದಲ್ಲಿ ಬಿಜೆಪಿ  ಡಬಲ್ ಸ್ಟ್ಯಾಂಡ್ ತೆಗೆದುಕೊಂಡಿದೆ. ಪ್ರಜ್ವಲ್ ದೇಶ ಬಿಟ್ಟು ಹೋಗಲು ಕೇಂದ್ರದ ಸಪೋರ್ಟ್ ಇದೆ ಎಂದು ಯುವ…

52 mins ago