ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬಹುಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ವಿಲ್ಸನ್ ಗಾರ್ಡನ್ನಲ್ಲಿ ಇರುವ ಮನೆ ಕುಸಿದುಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಎರಡು ವರ್ಷದ ಹಿಂದೆಯೇ ಈ ಕಟ್ಟಡ ಸ್ವಲ್ಪ ವಾಲಿದ್ದು, ಈ ಬಗ್ಗೆ ಮನೆ ಮಾಲೀಕರಿಗೆ ತಿಳಿಸಲಾಗಿದೆ. ಆದರೆ ರಿಪೇರಿ ಕಾರ್ಯ ಮಾಡಿ, ಮನೆ ಮಾಲೀಕ ಸುಮ್ಮನಾಗಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಮನೆ ಕುಸಿತ ಆಗುತ್ತಿದ್ದಂತೆಯೇ ಮನೆಯವರೆಲ್ಲ ಹೊರಗೆ ಬಂದಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸುವ ವೇಳೆ ಮನೆ ಸಂಪೂರ್ಣವಾಗಿ ಕುಸಿದಿದೆ.
ಮನೆ ಕುಸಿತದಿಂದ ಅಕ್ಕಪಕ್ಕದ ಮನೆಗೂ ಹಾನಿಯಾಗಿದೆ. ಅಲ್ಲದೆ ಕಟ್ಟಡದಲ್ಲಿದ್ದ ನಿವಾಸಿಗಳು ತಮ್ಮ ವಸ್ತುಗಳು, ದಾಖಲೆಗಳನ್ನು ಕಳೆದುಕೊಂಡಿದ್ದಾರೆ.