ರಸ್ತೆ ಗುಂಡಿ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ಗೌರವ್ ಗುಪ್ತ ಪಣ

ಬೆಂಗಳೂರು: ರಸ್ತೆ ಗುಂಡಿ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ಪಣತೊಟ್ಟಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ದಿನನಿತ್ಯವೂ ಗುಂಡಿ ಮುಚ್ಚುವ ಪ್ರಕ್ರಿಯೆಯಲ್ಲಿ ತೊಡಗುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಳೆಗಾಲದ ಹಿನ್ನೆಲೆಯಲ್ಲಿ ಅಲ್ಲಲ್ಲಿ ರಸ್ತೆಗುಂಡಿಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ, ದಿನನಿತ್ಯವೂ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಯಾವುದೇ ರಸ್ತೆಯಲ್ಲಿ ಗುಂಡಿ ಕಂಡುಬಂದರೆ ಒಂದರೆಡು ದಿನಗಳಲ್ಲಿಯೇ ಮುಚ್ಚಬೇಕು ಎಂದು ಸೂಚನೆ ನೀಡಲಾಗಿದೆ.

ಅಲ್ಲದೆ, ಒಂದು ಸಾವಿರ ಕೋಟಿ ರೂ.ವೆಚ್ಚದಲ್ಲಿ ರಸ್ತೆ ಪುನರ್ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ರಸ್ತೆಗಳು ಸುಗಮ ಸಂಚಾರಕ್ಕೆ ಸಿದ್ಧಗೊಳ್ಳಲಿವೆ ಎಂದು ತಿಳಿಸಿದರು.

ಇನ್ನೂ ಗುಂಡಿ ಮುಚ್ಚಲು ನೀಡಿರುವ ಅಂತಿಮ ಗಡುವಿನ ಬಗ್ಗೆ ಮಾತನಾಡಿದ ಅವರು ಇದು ಕೇವಲ ಒಂದು ದಿನದ ಪ್ರಕ್ರಿಯೆಯಲ್ಲ, ಅದಕ್ಕೆ ಅಂತಿಮ ಗಡುವನ್ನು ನಿರ್ಧರಿಸಲಾಗದು, ಮಳೆಯಿಂದಾಗಿ ಹೊಸದಾಗಿ ಮುಚ್ಚಿದ ಗುಂಡಿಗಳು ಕೂಡ ಮತ್ತೆ ಹಾಳಾಗುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ರಸ್ತೆಗುಂಡಿಗಳನ್ನು ನೋಡಿ, ಅವುಗಳನ್ನು ಶೀಘ್ರವೇ ಮುಚ್ಚಬೇಕೆಂದು ಸೂಚಿಸಿದ್ದರು. ರಸ್ತೆಗಳ ಗುಂಡಿಗಳನ್ನು ಮುಚ್ಚಲು ಒಂದು ತಿಂಗಳ ಸಮಯಾವಕಾಶ ಕೇಳಿದ್ದಾರೆಂದು ಆಯುಕ್ತರು ತಿಳಿಸಿದ್ದಾರೆ.

Sampriya YK

Recent Posts

ಸಿಡಿಲು ಬಡಿದು 10 ದಿನದ ಹಿಂದೆ ಮದುವೆಯಾಗಿದ್ದ ಯುವಕ ಮೃತ್ಯು

ಹತ್ತು ದಿನದ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ…

15 mins ago

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು

ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ಅರಣ್ಯಗಳಲ್ಲಿ ಕಾಡ್ಗಿಚ್ಚಿನ ಭಯವೂ ಶುರುವಾಗಿದ್ದು, ಇದೀಗ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ…

8 hours ago

ಗುಂಡ್ಲುಪೇಟೆಯಲ್ಲಿ ಮಳೆಗೆ ನೆಲಕ್ಕುರುಳಿದ ಮರಗಳು

ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಮಳೆ ಗಾಳಿಗೆ ಬಾಳೆ ಸೇರಿದಂತೆ ಗಿಡ ಮರಗಳು ನೆಲಕ್ಕುರುಳಿವೆ. ಸುಮಾರು ಒಂದು ಗಂಟೆಗಳ ಕಾಲ…

8 hours ago

ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಪದವೀಧರರಿಗೆ ಅವಕಾಶ

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಜೂ. 03 ರಂದು ಮತದಾನ ನಡೆಯಲಿದ್ದು, ಅರ್ಹ ಪದವೀಧರರು ಮತದಾರರ…

9 hours ago

ಹಿಂದೂ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ಅನ್ಯ ಕೋಮಿನ ಯುವಕನ ಬಂಧನ

ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿಯ ನವನಗರ…

9 hours ago

ಮೈಸೂರಿಗೆ ತಂಪೆರೆದ ವರುಣ, ಸೃಷ್ಟಿಸಿದ್ದು ಹತ್ತಾರು ಅವಾಂತರ!

ಬಿರು ಬಿಸಿಲಿನಿಂದ ಬಸವಳಿದಿದ್ದ ಸಾಂಸ್ಕೃತಿಕ ನಗರಿ ಜನರಿಗೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ನಗರಕ್ಕೆ ತಂಪೆರೆಯಿತಾದರೂ…

9 hours ago