ಮೆಟ್ರೋ ಸಂಪರ್ಕ ಒದಗಿಸಲು ಬಿಎಂಟಿಸಿಯಿಂದ 643 ವಿದ್ಯುತ್ ಚಾಲಿತ ಬಸ್ ಗಳು

ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಸಂಪರ್ಕ ಕಲ್ಪಿಸಲು ಮುಂದಿನ 6 ತಿಂಗಳಲ್ಲಿ 643 ವಿದ್ಯುತ್ ಚಾಲಿತ ಬಸ್ ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿದೆ.

ಈ ಬಗ್ಗೆ ಮಾತನಾಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಅವರು, ಭಾರತ್ ಸ್ಟೇಜ್ 6ರ ಡೀಸೆಲ್ ವಾಹನಗಳು ತಾಂತ್ರಿಕ ಅಗತ್ಯತೆಗಳನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲಿ 565 ಬಸ್ ಗಳನ್ನು ಬಿಎಂಟಿಸಿ ಪಡೆಯಲಿದೆ ಎಂದರು.

ಸದ್ಯ ಮೂರನೇ ಹಂತದ ಪರಿಶೀಲನೆ ನಡೆಯುತ್ತಿದ್ದು, ಇದರ ಅನುಮೋದನೆ ಬಳಿಕ ಮೂರು ತಿಂಗಳಲ್ಲಿ ಬಸ್ ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿದೆ. ಜತೆಗೆ ಜೆಬಿಎಂ ನಿಂದ 90 ಎಲೆಕ್ಟ್ರಿಕ್ ಬಸ್ ಗಳು ಹಾಗೂ ಅಶೋಕ್ ಲೇಲ್ಯಾಂಡ್ ನಿಂದ 300 ಬಸ್ ಗಳನ್ನು ಮುಂದಿನ 6 ತಿಂಗಳಲ್ಲಿ ಪಡೆಯಲಿದ್ದೇವೆ ಎಂದರು.

ಈ ಪೈಕಿ ಬಹುತೇಕ ಬಸ್ ಗಳನ್ನು ನಮ್ಮ ಮೆಟ್ರೋ ಸಂಪರ್ಕ ಹೊಂದಲು ಬಳಸಲಾಗುತ್ತದೆ ಎಂದರು. ಬಿಎಂಟಿಸಿ ತನ್ನ ಹಳೆಯ ಬಸ್ ಗಳನ್ನು ಹರಾಜಿಗೆ ಹಾಕಿ ಹೊಸ ಬಸ್ ಗಳನ್ನು ಖರೀದಿ ಮಾಡುತ್ತಿದೆ. ಈಗ ನಗರದಲ್ಲಿ 5,141 ಬಸ್ ಗಳು ಪ್ರತಿದಿನ ಸಂಚರಿಸುತ್ತಿವೆ.

Sneha Gowda

Recent Posts

ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ಯುವಕನೊಬ್ಬನಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಮಣ್ಣೂರ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.

12 mins ago

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೀನಾಳ ಕೊಲೆ ಖಂಡಿಸಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ

ಇತ್ತೀಚೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸೂರ್ಲಬ್ಬಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕು. ಮೀನಾಳ ಕೊಲೆಯನ್ನು ಖಂಡಿಸಿ ಧಾರವಾಡ ಜಿಲ್ಲಾ ಅಹಿಂದ…

26 mins ago

ಜೀವಂತವಾಗಿರುವ ಮಹಿಳೆ ಸತ್ತಿರೋದಾಗಿ ಘೋಷಿಸಿರುವ ಆಹಾರ ಇಲಾಖೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಅಂಜಿನಮ್ಮ ಎನ್ನುವ ಮಹಿಳೆಯೋರ್ವರು, ಆಹಾರ ಇಲಾಖೆಯ ಯಡವಟ್ಟಿನಿಂದ ಅವರು ಸೌಕರ್ಯಗಳಿಂದ ವಂಚಿಯರಾಗಿದ್ದಾರೆ.

27 mins ago

ಡಿಮ್ಹಾನ್ಸ್ ಸಂಸ್ಥೆಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ

ಶ್ರೀ ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲರಿಗೂ ಸಮಾನತೆ ಇರಬೇಕೆಂಬ ಒಳ್ಳೆಯ ಆಲೋಚನೆಯನ್ನು ಇಟ್ಟುಕೊಂಡು ಜಾತಿ ಪದ್ದತಿ ನಿರ್ಮೂಲನೆ ಮಾಡಲು,…

50 mins ago

ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನೊರ್ವನ ಮೇಲೆ ಹಲ್ಲೆ

ಕ್ಷುಲ್ಲಕ ವಿಚಾರಕ್ಕೆ ಯುವಕನೊರ್ವನ ಮೇಲೆ ಗುಂಪೊಂದು ಜಾತಿ ನಿಂದನೆ ಮಾಡಿ, ಹಲ್ಲೇ ಮಾಡಿರುವ ಘಟನೆ ಗೋಪ್ಪನಕೊಪ್ಪದ ಗೊಲ್ಲರ ಓಣಿಯಲ್ಲಿ ನಡೆದಿದೆ.

1 hour ago

ಉಡುಪಿ ಆರ್ ಟಿಒ ಕಚೇರಿಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

ಆರ್ ಟಿಒ ಕಚೇರಿಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಇಂದು ಉಡುಪಿ…

2 hours ago