ಮೂರನೇ ಅಲೆ ಎದುರಿಸಲು ಕಂಟೈನ್‌ ಮೆಂಟ್‌ ಝೊನ್‌ ಹೆಚ್ಚಳಕ್ಕೆ ಮುಂದಾದ ಬಿಬಿಎಂಪಿ

ಬೆಂಗಳೂರು, – ಕೊರೊನಾ ಎರಡನೆ ಅಲೆಗೆ ಹೋಲಿಸಿದರೆ ಸದ್ಯ ಪ್ರಕರಣ ಸಂಖ್ಯೆ ಕಡಿಮೆಯಾಗುತ್ತಿದೆ. ಮೂರನೆ ಅಲೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮೈಕ್ರೋ ಕಂಟೈನ್ಮೆಂಟ್‍ಗಳ ಹೆಚ್ಚಳ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು. ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮೇಲ್ವಿಚಾರಣೆಯಾಗಲಿದೆ. ಕಂಟೈನ್ಮೆಂಟ್ ಐಸೊಲೇಷನ್ ಮೇಲೆ ನಿಗಾ ಇಡಬೇಕಾಗಿದೆ ಎಂದು ಹೇಳಿದರು.
ಮೊಬೈಲ್ ಟ್ರೇಸಿಂಗ್ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಾರಿಯಾಗಬೇಕಾಗಿದೆ. ಕೊರೊನಾ ಪಾಸಿಟಿವ್ ಪೇಶೆಂಟ್ ಮೇಲೆ ನಿಗಾ ಇಡುವ ಕೆಲಸವಾಗುತ್ತಿದೆ. ರೋಗಿಗಳ ಸ್ಕ್ರೀನಿಂಗ್ ಉತ್ತಮ ರೀತಿಯಲ್ಲಿ ಮಾಡಲಾಗುತ್ತಿದೆ. ಆಸ್ಪತ್ರೆಗೆ ಸದ್ಯ 20 ರಿಂದ 30 ಜನ ಮಾತ್ರ ದಾಖಲಾಗುತ್ತಿದ್ದಾರೆ ಎಂದು ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇತ್ತು. ಗಡಿ ಪ್ರದೇಶದ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಆ ಭಾಗದಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ರಾಜ್ಯ ಪ್ರವೇಶಿಸುವವರು ಆರ್‍ಟಿಪಿಸಿಆರ್ ನೆಗೆಟಿವ್ ಇರಬೇಕು. ಒಂದು ವ್ಯಾಕ್ಸಿನ್ ಡೋಸ್ ಆಗಿರಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ ಎಂದರು.
ಮೂರನೆ ಹಂತದ ವೈಟ್ ಟಾಪಿಂಗ್ ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಅನುಮತಿ ನೀಡಿದರೆ ಪಟ್ಟಿ ಪ್ರಕಾರ ಕಾಮಗಾರಿ ನಡೆಯಲಿದೆ ಎಂದು ಅವರು ಹೇಳಿದರು.
ಘನತ್ಯಾಜ್ಯವನ್ನು ಸದ್ಯ ಪಾಲಿಕೆ ನಿರ್ವಹಿಸುತ್ತಿದೆ. ಜಾಹೀರಾತು ಹೊಸ ನಿಯಮ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಸ್ಮಾರ್ಟ್ ಸಿಟಿ ಕಾಮಗಾರಿ ಪ್ರತ್ಯೇಕ ಕಂಪೆನಿ ಮೂಲಕ ನಡೆಯುತ್ತಿದೆ. ನಿತ್ಯ ಪ್ರಗತಿ ಕಾಣುತ್ತಿದೆ. ಜುಲೈ ಅಂತ್ಯದೊಳಗೆ ಎಲ್ಲ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ. ಶಿವಾನಂದ ವೃತ್ತ, ಸ್ಟೀಲ್ ಬ್ರಿಡ್ಜ್ ಕಾಮಗಾರಿ ಕ್ಷಿಪ್ರವಾಗಿ ನಡೆಯುತ್ತಿದೆ ಎಂದು ಹೇಳಿದರು.

Indresh KC

Recent Posts

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರ ಬಂಧನ

ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್‌ ಕೊಲೆ ಪ್ರಕರಣ ಹಿನ್ನಲೆ  ಈ  ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.ರಾಯಲ್ ಕೆನಡಿಯನ್ ಮೌಂಟೆಡ್…

14 mins ago

ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಮಹಿಳೆ ನಾಪತ್ತೆ

ತನ್ನ ತಾಯಿಯೊಂದಿಗೆ ನಗರದ ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಯುವತಿ ಕಾಣೆಯಾದ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

33 mins ago

ಪ್ರಜ್ವಲ್‌ ವಿಡಿಯೋ ಪ್ರಕರಣ: ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಸಿದ್ದರಾಮಯ್ಯಗೆ ರಾಹುಲ್‌ ಪತ್ರ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತೆಯರ ನೆರವಿಗೆ ನಿಲ್ಲಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು…

43 mins ago

ಪ್ರವಾಸಕ್ಕೆ ಬಂದಿದ್ದ ಬಾಲಕಿ ಭದ್ರಾ ನದಿಯಲ್ಲಿ ಮುಳುಗಿ ದಾರುಣ ಸಾವು

ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿಯೊಬ್ಬಳು ಸ್ನಾನ ಮಾಡಲೆಂದು ನದಿಗೆ ಇಳಿದಿದ್ದಾಗ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ದಾರುಣ ಘಟನೆ ಕಳಸ ತಾಲೂಕಿನ…

46 mins ago

ರೋಹಿತ್‌ ವೇಮುಲ ದಲಿತನಲ್ಲ : ಮರು ತನಿಖೆಗೆ ತೆಲಂಗಾಣ ಸಿಎಂ ಭರವಸೆ

2016 ರಲ್ಲಿ ನಡೆದ ರೋಹಿತ್‌ ವೇಮುಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಗೆ ವೇಮುಲ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು…

1 hour ago

ಗರ್ಭಿಣಿಯ ಮರ್ಯಾದೆ ಗೇಡು ಹತ್ಯೆ: ಇಬ್ಬರು ಆರೋಪಿಗಳಿಗೆ 4.19 ಲಕ್ಷ ರೂ. ದಂಡ, ಗಲ್ಲು ಶಿಕ್ಷೆ

ಗರ್ಭಿಣಿಯನ್ನು ಮರ್ಯಾದೆ ಗೇಡು ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ವಿಜಯಪುರ ಜಿಲ್ಲೆಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ…

1 hour ago