ಮುಂದಿನ 5 ವರ್ಷಗಳಲ್ಲಿ ಗ್ರೀನ್ ಎನರ್ಜಿ ಪಾರ್ಕ್

ಬೆಂಗಳೂರು: ಮುಂದಿನ 5 ವರ್ಷಗಳಲ್ಲಿ 10 ಗಿಗಾ ವ್ಯಾಟ್ (10 ಸಾವಿರ ಮೆಗಾ ವ್ಯಾಟ್) ಹಸಿರು ಇಂಧನ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದ್ದು, 8 ಜಿಲ್ಲೆಗಳಲ್ಲಿ ಹೈಬ್ರಿಡ್ ವಿದ್ಯುತ್ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಇಂದನ ಸಚಿವ ಸುನೀಲ್ ಕುಮಾರ್ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಆಶಯದಂತೆ ರಾಜ್ಯ ಸರ್ಕಾರ ಹಸಿರು ಇಂಧನ ಉತ್ಪಾದನೆಗೆ ಒತ್ತು ನೀಡಲು ಉದ್ದೇಶಿಸಿದೆ. ತುಮಕೂರು, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಗದಗ, ಬಾಗಲಕೋಟೆ, ಹಾವೇರಿ ಮತ್ತು ವಿಜಯಪುರದಲ್ಲಿ ಗಾಳಿ ಮತ್ತು ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ, ಸ್ಟೋರೇಜ್ ಕೇಂದ್ರ ಒಳಗೊಂಡ ಹೈಬ್ರಿಡ್ ವಿದ್ಯುತ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಇಲಾಖೆಯಿಂದ ಸಮೀಕ್ಷೆ ಕೂಡಾ ಮಾಡಲಾಗಿದೆ. ಪಾವಗಡದಲ್ಲಿ ಇರುವ ಸೌರಶಕ್ತಿ ಪಾರ್ಕ್ ನಲ್ಲಿ ಪ್ರಾಯೋಗಿಕವಾಗಿ 50 ಮೆಗಾ ವ್ಯಾಟ್ ಸ್ಟೋರೇಜ್ ಕೇಂದ್ರ ಸ್ಥಾಪಿಸಲಾಗುವುದು. ಭವಿಷ್ಯದಲ್ಲಿ ಸೌರಶಕ್ತಿ ವಿದ್ಯುತ್ ಪಾರ್ಕ್ ಸ್ಥಾಪಿಸಲು ಮುಂದೆ ಬರುವ ಖಾಸಗಿಯವರಿಗೆ ಸ್ಟೋರೇಜ್ ವ್ಯವಸ್ಥೆ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.

ಆರು ವರ್ಷಗಳ ನಂತರ ಎಲ್ಲಾ ಶಾಖೋತ್ಪನ್ನ ವಿದ್ಯುತ್ ಘಟಕಗಳು ಕಾರ್ಯಾರಂಭ ಮಾಡುತ್ತಿವೆ. ಪ್ರಸ್ತುತ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ. ಸಾಕಷ್ಟು ದಾಸ್ತಾನು ಹೊಂದಲಾಗಿದೆ. ಕೇಂದ್ರದ ಜೊತೆ ಮಾತುಕತೆ ನಡೆಸಿ ವಿದ್ಯುತ್ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಸದ್ಯ ಎಲ್ಲಾ ಕಡೆ ಮಳೆಯಾಗುತ್ತಿರುವುದರಿಂದ ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಬಳಕೆ ಕಡಿಮೆಯಾಗಿದೆ ಎಂದು ತಿಳಿಸಿದರು.

ಅದೇ ರೀತಿ, ಟ್ರಾನ್ಸ್‍ಫಾರ್ಮರ್ ನಿರ್ವಹಣಾ ಅಭಿಯಾನದಲ್ಲಿ ಈವರೆಗೆ 1,80,000 ಟ್ರಾನ್ಸ್‍ಫಾರ್ಮರ್‍ಗಳನ್ನು ನಿರ್ವಹಣೆ ಮಾಡಲಾಗಿದೆ. ಅಭಿಯಾನ ನಾಳೆ ಮುಕ್ತಾಯಗೊಳ್ಳುತ್ತದೆಯಾದರೂ ನಿರ್ವಹಣೆ ಪ್ರಕ್ರಿಯೆ ನಿರಂತರವಾಗಿರಲಿದೆ ಎಂದರು.

Ashika S

Recent Posts

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ : ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು…

2 mins ago

ಮೋದಿ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್

ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…

9 mins ago

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಸೈಬರ್ ವಂಚನೆ: ಓರ್ವ ವಶಕ್ಕೆ

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…

21 mins ago

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

31 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

52 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

1 hour ago