ಬೆಂಗಳೂರು ; ಕೋವಿಡ್ ಮೂರನೇ ಅಲೆ ಹಿನ್ನೆಲೆ, ಸೋಮವಾರದಿಂದ(ಆ.16) ಬಿಬಿಎಂಪಿ ವ್ಯಾಪ್ತಿಯಲ್ಲಿ ವೈದ್ಯರ ನಡೆ ಮನೆ ಬಾಗಿಲಿನ ಕಡೆ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 54 ವಾರ್ಡ್ಗಳಲ್ಲಿ ಅಭಿಯಾನ ಆರಂಭಿಸಲಾಗುತ್ತದೆ. ಕೊರೋನಾ 3ನೇ ಅಲೆ ತಡೆಯಲು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.
ಪ್ರತೀ ವಾರ್ಡ್ಗೆ 5 ವೈದ್ಯಕೀಯ ಸಿಬ್ಬಂದಿ ಇರುವ ತಂಡವೊಂದನ್ನು ನಿಯೋಜನೆ ಮಾಡಲಾಗುತ್ತದೆ. ಒಂದು ವೈದ್ಯಕೀಯ ತಂಡ ಪ್ರತಿನಿತ್ಯ ಕನಿಷ್ಠ 50 ಮನೆಗೆ ಭೇಟಿ ಕೊಡಬೇಕು. ಪ್ರತೀ ತಂಡದಲ್ಲಿ ಓರ್ವ ವೈದ್ಯ, ಸೇರಿ ಮೂರರಿಂದ ನಾಲ್ಕು ಸಿಬ್ಬಂದಿ ಇರಲಿದ್ದಾರೆ.ಪ್ರತೀ ಮನೆಯಲ್ಲಿರುವ ಪ್ರತಿಯೊಬ್ಬರ ಮಾಹಿತಿಯನ್ನೂ ಈ ತಂಡ ಸಂಗ್ರಹಿಸಲಿದೆ. ಯಾರಿಗೆ ದೀರ್ಘಕಾಲದ ಅನಾರೋಗ್ಯವಿದೆ? ಕೋವಿಡ್ ಲಕ್ಷಣಗಳಿದ್ಯಾ? ಹೀಗೆ ಪ್ರತಿಯೊಬ್ಬರ ಆರೋಗ್ಯದ ಮಾಹಿತಿಯನ್ನು ವೈದ್ಯಕೀಯ ತಂಡ ಸಂಗ್ರಹಿಸಲಿದೆ.
ಬಿಬಿಎಂಪಿ ಯಿಂದ ವೈದ್ಯರ ನಡೆ ಮನೆ ಬಾಗಿಲಿನ ಕಡೆ ಅಭಿಯಾನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.