News Karnataka Kannada
Thursday, May 02 2024
ಬೆಂಗಳೂರು

ಪೆಟ್ರೋಲ್, ಡಿಸೇಲ್ ದರ ಇಳಿಕೆ

Petrol Desiel
Photo Credit :

ಬೆಂಗಳೂರು: ಪ್ರತಿದಿನ ಬೆಳಿಗ್ಗೆ ವಾಹನಸವಾರರಿಗೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಿಂದಾಗಿ ತಲೆನೋವಾಗಿತ್ತು. ಆದರೆ ಇಂದು ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವೂ ಬೆಲೆ ಇಳಿಕೆ ಮಾಡಿರುವುದು ಕೊಂಚ ನೆಮ್ಮದಿ ಸಿಕ್ಕಂತಾಗಿದೆ.ಕೇಂದ್ರ ಸರ್ಕಾರ ಪೆಟ್ರೋಲ್ ದರ 10 ರೂ.

ಹಾಗೂ ಡೀಸಲ್ ದರವನ್ನು 5 ರೂಪಾಯಿ ಕಡಿಮೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರವು ತೈಲ ಬೆಲೆ ಕಡಿಮೆ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಧಾರ ಪ್ರಕಟಿಸಿದ್ದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಬಕಾರಿ ತೆರಿಗೆಯ ಜೊತೆಯಲ್ಲಿ ರಾಜ್ಯ ಸರ್ಕಾರವು ಮಾರಾಟ ತೆರಿಗೆಯನ್ನು ಶೇಕಡಾ 35 ರಿಂದ ಶೇಕಡಾ 25.9ಕ್ಕೆ ಮತ್ತು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 24 ರಿಂದ ಶೇಕಡಾ 14.34ಕ್ಕೆ ಇಳಿಸಿವೆ. ಇದರಿಂದ ನ.3ರಂದು ಇದ್ದ ಪೆಟ್ರೋಲಿನ ಚಿಲ್ಲರೆ ಮಾರಾಟ ದರವು 113.93 ರೂಪಾಯಿಯಿಂದ 100.63 ರೂಪಾಯಿಗೆ ಬಂದಿದ್ದು, ಒಟ್ಟಾರೆ ದರ ಕಡಿತ 13.30 ರೂಪಾಯಿ ಆಗಲಿದೆ. ಇನ್ನು ನ.3 ರಂದು ಇದ್ದ ಡೀಸೆಲ್​​​ ನ ಚಿಲ್ಲರೆ ಮಾರಾಟ ದರವು 104.50 ರೂಪಾಯಿಯಿಂದ 85.03 ರೂಪಾಯಿಗೆ ಇಳಿಕೆ ಆಗಲಿದೆ. ಒಟ್ಟಾರೆ 19.47 ರೂಪಾಯಿ ದರ ಕಡಿತ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು