ನಮ್ಮ ಘನತೆ ಹೆಚ್ಚಾಗಲು ಕಾರ್ಯವೈಖರಿ ಬಹಳ ಮುಖ್ಯ : ನಿವೃತ್ತ ಡಿಜಿಪಿ ಭಾಸ್ಕರರಾವ್

ಬೆಂಗಳೂರು : ಉತ್ತಮ ಕೆಲಸ ಮಾಡಿದವರನ್ನ ಗುರುತಿಸಿ ಸಮಾಜದಲ್ಲಿ ಅವರನ್ನ ಪ್ರೋತ್ಸಾಹಿಸಿ ಮತ್ತಷ್ಟು ಹುರಿದುಂಬಿಸುವ ಕಾರ್ಯ ನಡೆಯುತ್ತಿದೆ ಇದು ನಿರಂತರವಾಗಿರಲಿ , ನಮ್ಮ ಘನತೆ ಹೆಚ್ಚಾಗಲು ನಮ್ಮ ಕರ್ತವ್ಯ ಪ್ರಜ್ಞೆ ಮತ್ತು ಕಾರ್ಯವೈಖರಿ ಬಹಳಮುಖ್ಯವಾಗಿರುತ್ತದೆ ಅದನ್ನ ಪತ್ರಕರ್ತರು ರೂಢಿಸಿಕೊಳ್ಳಬೇಕು ಎಂದು ನೀವೃತ್ತ ಎಡಿಜಿಪಿ ಬಾಸ್ಕರ್ ರಾವ್ ಕರೆನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉದ್ಘಾಟನೆಯನ್ನ ಜ್ಯೋತಿ ಬೆಳಗಿ ನೆರವೇರಿಸಿ ಮಾತನಾಡಿದ ಅವರು ಒಳ್ಳೆಯ ಬರಹಗಾರರು ಸಿಗುವುದು ಬಹಳಕಷ್ಟ , ಒಂದು ಸುದ್ದಿ ಅರ್ಥಗರ್ಬಿತವಾಗಿರಬೇಕು ಒಳ್ಳೆಯ ಕ್ವಾಲಿಟಿ ರಿಪೋರ್ಟ್ ಸಮಾಜಕ್ಕೆ ಮಾದರಿಯಾಗಬೇಕು ಅಂತಹ ಪ್ರತಿಭೆ ಹುಟ್ಟುಹಾಕುವ ಕೆಲಸ ಕೂಡ ನಡೆಯಬೇಕಿದೆ, ಇಲ್ಲವಾದರೆ ಕೇವಲ ಸುದ್ದಿಹಬ್ಬಿಸುವ ಕೆಲಸವಾಗುತ್ತೆ ಎಂದರು.

ನಿಜವಾದ ಕಾರ್ಯನಿರತ ಪತ್ರಕರ್ತರು ತನಿಖಾವರದಿ ಸೇರಿದಂತೆ ಎಲ್ಲ ರೀತಿಯ ಸುದ್ದಿನೀಡುತ್ತಾರೆ ಕೆಲವೊಮ್ಮೆ ವೃತ್ತಿ ಬದುಕು ಚಾಲೆಂಜಿಂಗ್ ಆಗಿರುತ್ತೆ ಅಲ್ಲದೆ ಶ್ರಮಕೂಡ ಹೆಚ್ಚಿರುತ್ತೆ ಎಲ್ಲರೂ ಬಾಷಾ ಹಿಡಿತದ ಜೊತೆಗೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಿ ಎಂದು ಇದೇ ವೇಳೆ ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ನಂತರ‌ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಗ್ ಬಾಸ್ ಖ್ಯಾತಿಯ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರ್ಗಿ ಮಾತನಾಡಿ ಹೊಸ ಸಂಘ ಆರಂಭವಾಗುತ್ತಿದೆ ಇದು‌ ಸಂತಸದ ವಿಚಾರ, ನನ್ನ ಎಲ್ಲಾ ಸೋಷಿಯಲ್ ವರ್ಕ್ ಗಳನ್ನ ಪತ್ರಕರ್ತರೇ ಬೆಳಕಿಗೆ ತಂದಿದ್ದು , ನನ್ನೆಲ್ಲಾ ಹೋರಾಟಕ್ಕೆ ಮಾದ್ಯಮ ಸಹಕರಿಸಿದೆ. ನಿಮಗೆ ಅಭಿನಂದನೆಗಳು

ಕ್ಕೆ ಶುಭವಾಗಲಿ ಎಂದರು.

ನಮ್ಮ ಕಾರ್ಯಗಳನ್ನ ಸಮಾಜಮುಖಿ ಮಾಡುವಲ್ಲಿ ಮಾಧ್ಯಮ ಬಹಳ‌ಮುಖ್ಯವಾಗಿರುತ್ತೆ, ಹೆಚ್ಚು ಕಮಿಟ್ ಆಗದೆ ಬದ್ದತೆ ರೂಡಿಸಿಕೊಳ್ಳುತ್ತಿರುವ ರಂಗ ಪತ್ರಿಕಾರಂಗವಾಗಿದೆ ಎಂದು ಭಾವಿಸುತ್ತೇನೆ ವೃತ್ತಿ ಬದುಕಲ್ಲಿ ಇದೆಲ್ಲಾ ತಾವು ಬದ್ದತೆ ಮತ್ತು ಪ್ರಾಮಾಣಿಕತೆ ಮುಂದುವರಿಸಿಕೊಳ್ಳಿ ಎಂದು ಕರೆ‌ ನೀಡಿದರು.

ಪತ್ರಕರ್ತರ ಹಿತದೃಷ್ಟಿ ಗಮನದಲ್ಲಿ ಹೋರಾಟ‌ ಮಾಡುವ ಸಂಘಟನೆಗಳಿವೆ ಆದರೆ ಸೌಲಭ್ಯ ಕಲ್ಪಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೇವೆ. ದೀಪದ ಕೆಳಗಿನ‌ಕತ್ತಲಂತೆ ಪತ್ರಕರ್ತರ ಬದುಕಿದೆ ನಮ್ಮ‌ಬದುಕು ಹಸನಾಗಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಸಂಘಟನೆ‌ ಅವಶ್ಯಕತೆ ಇದೆ ಎಲ್ಲರನ್ನೂ ಒಟ್ಟುಗೂಡಿಸಿ‌ ಕೊಂಡೊಯ್ಯುವ ನಿಟ್ಟಿನಲ್ಲಿ ಹುಟ್ಟಿಕೊಂಡಿದ್ದು ಜವಾಬ್ದಾರಿಯುತವಾಗಿ ಮುನ್ನಡೆಯುತ್ತೆವೆ ಎಂದು ಹುಲಿ ಅಮರನಾಥ್ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ ) ಅಧಿಕೃತವಾಗಿ ಚಾಲನೆ ನೀಡಲಾಯಿತು ಇದೇ ವೇಳೆ ಹಿರಿಯ ಪತ್ರಕರ್ತರಾದ ಮುಳ್ಳಳ್ಳಿ ಸೂರಿ, ಎಂ.ಪಿ. ಹೊಂಬಾಳ್ , ಲಿಂಗರಾಜು ಡಿ ನೊಣವಿನಕೆರೆ. ಗಣೇಶ್ ಬೊಕಾಸಿ ಶಿವರುದ್ರ ಶಾಮರಾವ್ ಪಾಟೀಲ್ ಸೇರಿದಂತೆ ಹಲವರನ್ನ ಗೌರವಿಸಲಾಯಿತು.

ವೇದಿಕೆಯಲ್ಲಿ ಉದ್ಯಮಿ ಕಿರಣ್ , ಕಿರಣ್ ರಾವ್ , ನಿಖಿಲ್ ಮಂಜು ಸೇರಿದಂತೆ ಹಲವು ಮಂದಿ ಹಾಜರಿದ್ದರು. ಪತ್ರಕರ್ತ ಥಾಮಸ್ ನಿರೂಪಿಸಿದರು.
ಇದೆ ಸಂಧರ್ಭದಲ್ಲಿ ಪ್ರಜಾಟಿವಿ ಅರುಣ್ , ರವಿಕೀರ್ತಿ
ಸದಾನಂದ ಗಂಡಸಿ, ಬಿಟಿವಿ ಪ್ರಸನ್ನ ದೇವನೂರು, ಕೆಂದೂಳಿ ಪತ್ರಿಕೆ ಸಂಪಾದಕ ತುರುವನೂರು ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

Ashika S

Recent Posts

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

31 mins ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

33 mins ago

ಪೊಲೀಸ್‌ ಕಸ್ಟಡಿಯಲ್ಲಿಯೇ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

56 mins ago

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

1 hour ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

1 hour ago

ಜೀವ -ಜಲ ಉಳಿಸಲು ಸ್ವಯಂ ಪ್ರೇರಣೆಯ ಪಾಲ್ಗೊಳ್ಳುವಿಕೆ ಮುಖ್ಯ: ಪ್ರಭಾಕರ ಶರ್ಮಾ

ನೀರಿನ ಮಿತ ಬಳಕೆ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು  ಸ್ವಯಂ ಪ್ರೇರಿತರಾಗಿ ತಮ್ಮ ಇತಿ ಮಿತಿಯಲ್ಲಿ ಸಣ್ಣ ಕೊಡುಗೆಗಳನ್ನು ನೀಡುವ ಮೂಲಕ…

1 hour ago