ರಾಜಧಾನಿ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಹೆಚ್ಚಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಕ್ಕೆ ಆಟೋ ದರ ಏರಿಕೆ ಬಿಸಿಯೂ ತಾಗಲಿದೆ.
ಈ ನಿಯಮಗಳು ಡಿ.1 ರಿಂದ ಜಾರಿಗೆ ಬರಲಿವೆ. ಕನಿಷ್ಠ ಬಾಡಿಗೆ ದರ ಮೊದಲ ಎರಡು ಕಿ.ಮೀ.ಗೆ 25 ರೂ.ನಿಂದ 30 ರೂ.ಗೆ ಏರಿಕೆ ಮಾಡಲಾಗಿದೆ.
ಆನಂತರ ಪ್ರತಿ ಕಿ.ಮೀಗೆ 15 ರೂ. ದರ ನಿಗದಿಪಡಿಸಲಾಗಿದೆ. ಆಟೋದಲ್ಲಿ ಮೂವರು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರಲಿದೆ.
ರಸ್ತೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಇತ್ತೀಚೆಗೆ ಪ್ರಯಾಣ ದರ ಏರಿಕೆ ವಿಚಾರವಾಗಿ ಸಭೆ ನಡೆಸಿದ್ದು, ಸಭೆಯಲ್ಲಿ ತೀರ್ಮಾನಿಸಲಾಗಿದೆ.
2013ರಲ್ಲಿ ಸರ್ಕಾರವು ಆಟೋ ದರಗಳನ್ನು ಕೊನೆಯ ಬಾರಿಗೆ ಪರಿಷ್ಕರಿಸಿದ್ದು, ಡಿ.1ರಿಂದ ಹೊಸ ದರಗಳು ಜಾರಿಗೆ ಬರಲಿವೆ.