ಬೆಂಗಳೂರು : 2021-22 ನೇ ಸಾಲಿನ ಶೈಕ್ಷಣಿಕ ಅವಧಿ ವಿಳಂಬ ಹಾಗೂ ಪಠ್ಯಕ್ರಮ ಪರಿಪೂರ್ಣಗೊಳಿಸಲು ಕಾಲಾವಕಾಶದ ಅವಶ್ಯಕತೆ ಇರುವುದರಿಂದ ಈ ಬಾರಿಯೂ ಎಸ್ಎಸ್ಎಲ್ ಸಿ ಪರೀಕ್ಷೆ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರತಿ ವರ್ಷ ಮಾರ್ಚ್ ಕೊನೆಯ ವಾರದಿಂದ ಏಪ್ರಿಲ್ ಮೊದಲ ವಾರದೊಳಗೆ ಎಸ್ಎಸ್ಎಲ್ ಸಿ ಪರೀಕ್ಷೆ ಮುಗಿಯುತ್ತಿತ್ತು. ಈ ಬಾರಿ ನವೆಂಬರ್ ಮುಗಿಯುತ್ತಿದ್ದರೂ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಈ ಬಾರಿಯೂ ಎಸ್ಎಸ್ಎಲ್ ಸಿ ಪರೀಕ್ಷೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಶೈಕ್ಷಣಿಕ ಅವಧಿ ವಿಳಂಬ ಮತ್ತು ಪಠ್ಯ ಕ್ರಮ ಪೂರ್ಣಗೊಳಿಸಲು ಕಾಲವಾಕಶದ ಹಿನ್ನೆಲೆಯಲ್ಲಿ 2022 ರ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಮೇ ಜೂನ್ ವೇಳೆಗೆ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.