ಬೆಂಗಳೂರು

ಅಪ್ಪು ನಿಧನಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ: ಡಾ ರಮಣ ರಾವ್ ಸ್ಪಷ್ಟನೆ

ಪುನೀತ್ ರಾಜಕುಮಾರ ಅವರ ನಿಧನಕ್ಕೆ ಚಿಕಿತ್ಸೆ ನೀಡೋ ವಿಚಾರದಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ. ಇದೇ ಕಾರಣದಿಂದಾಗಿ ಅವರು ಸಾವನ್ನಪ್ಪುವಂತೆ ಆಗಿದೆ ಎನ್ನುವಂತ ಮಾತು ಕೇಳಿ ಬರುತ್ತಿದ್ದು, ಎಲ್ಲ ಆರೋಪ ಮತ್ತು ಸಂದೇಹಗಳಿಗೆ ಡಾ ರಮಣ ರಾವ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತಂತೆ ಸ್ಪಷ್ಟ ಪಡಿಸಿರುವಂತ ಡಾ.ರಮಣರಾವ್, ಅಕ್ಟೋಬರ್ 29, 2021ರಂದು ನಟ ಪುನೀತ್ ರಾಜ್ ಕುಮಾರ್ ಅವರನ್ನು ಬೆಳಿಗ್ಗೆ 11.15ಕ್ಕೆ ಕ್ಲಿನಿಕ್ ಗೆ ಕರೆದುಕೊಂಡು ಬರಲಾಗಿತ್ತು. ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸಾಕಷ್ಟು ಬೆವರುತ್ತಿದ್ದ ಕಾರಣ, ಇಸಿಜಿ ಮಾಡಲಾಯಿತು. ಅದರಲ್ಲಿ ಹೃದಯ ಸಂಬಂಧಿ ಸಮಸ್ಯೆ ಉಂಟಾಗಿರೋದು ತಿಳಿದು ಬಂದಿತ್ತು. ಹೀಗಾಗಿ ತಕ್ಷಣವೇ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.

ಪುನೀತ್ ಅವರನ್ನು ಅವರ ಕಾರಲ್ಲೇ ಕಳಿಸಿದ್ದ್ಯಾಕೆ, ಅಂಬ್ಯುಲೆನ್ಸ್ನಲ್ಲಿ ಯಾಕೆ ಕಳಿಸಲಿಲ್ಲ ಅಂತ ಕೇಳಿದಾಗ ಡಾ ರಾವ್ ಅವರು, ಪುನೀತ್ ಅವರು ಬೇಗ ಅಸ್ಪತ್ರೆಗೆ ಸೇರುವುದು ಅವಶ್ಯಕವಾಗಿತ್ತು. ಆಂಬ್ಯುಲೆನ್ಸ್ ಗೆ ಫೋನ್ ಮಾಡಿದ್ದರೆ ಅವರು ಆಸ್ಪತ್ರೆ ತಲುಪಲು ಕನಿಷ್ಟ ಅರ್ಧಗಂಟೆ ಬೇಕಾಗುತಿತ್ತು. ಹಾಗಾಗೇ ಅವರನ್ನು ಕಾರಲ್ಲಿ ಕಳಿಸಿದೆ ಎಂದು ಡಾ ರಾವ್ ಹೇಳಿದರು. ಒಂದು ಪಕ್ಷ ತಮ್ಮ ಮಗ ಅಂಥ ಪರಿಸ್ಥಿತಿಯಲ್ಲಿದಿದ್ದರೆ ಏನು ಮಾಡುತ್ತಿದ್ದರೋ ಅದೆಲ್ಲವನ್ನು ಪುನೀತ್ಗೆ ಮಾಡದ್ದಾಗಿ ಅವರು ಹೇಳಿದರು.

ಡಾ.ರಮಣರಾವ್ ಅವರು ದೊಡ್ಮನೆ ಕುಟುಂಬದ ವೈದ್ಯರಾಗಿದ್ದಾರೆ. ಅವರ ಬಳಿಗೆ ನಟ ಪುನೀತ್ ರಾಜ್ ಕುಮಾರ್ ಅವರು ಜಿಮ್ ನಲ್ಲಿ ಮಾಡಿ ಬಂದ ಬಳಿಕ ಸುಸ್ತಾಗುತ್ತಾ ಇದೆ ಎಂದು ಚಿಕಿತ್ಸೆಗಾಗಿ ತೆರಳಿದ್ದರು. ಅವರನ್ನು ಪರೀಕ್ಷಿಸಿದ್ದಂತ ಡಾ.ರಮಣರಾವ್ ಅವರು, ಕೂಡಲೇ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಇದರಿಂದ ಚಿಕಿತ್ಸೆಯಲ್ಲಿ ಲೋಪವಾಗಿದೆ ಎಂಬುದಾಗಿ ಪುನೀತ್ ಅಭಿಮಾನಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಡಾ.ರಮಣರಾವ್ ವಿರುದ್ಧ ದೂರು ನೀಡಿದ್ದಾರೆ.

Sneha Gowda

Recent Posts

ತಾಲ್ಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿವ್ಯವಸ್ಥೆ ಪರಿಶೀಲಿಸಿದ ಡಿವೈಎಸ್ಪಿ

ಲೋಕಾಯುಕ್ತದ ಕಲಬುರಗಿ ಡಿವೈಎಸ್ಪಿ ಆಯಂಟನಿ ಜಾನ್ ಹಾಗೂ ಇತರೆ ಅಧಿಕಾರಿಗಳು ಗುರುವಾರ ನಗರದಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ…

38 seconds ago

ಪವಿತ್ರಾ ಜಯರಾಂ ಮೃತಪಟ್ಟ ಬೆನ್ನಲ್ಲೇ ನಟ ಚಂದು ಆತ್ಮಹತ್ಯೆ

ಇತ್ತೀಚೆಗಷ್ಟೇ ತ್ರಿನಯನಿ ಧಾರಾವಾಹಿಯ ನಟಿ ಪವಿತ್ರಾ ಜಯರಾಂ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ  ತೆಲುಗು ಧಾರಾವಾಹಿ ನಟ…

12 mins ago

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

8 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

8 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

9 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

9 hours ago