News Karnataka Kannada
Sunday, April 21 2024
Cricket
ಬೆಂಗಳೂರು

 ಪತಿಯಿಂದ ಹಣಕ್ಕಾಗಿ ಕಿರುಕುಳ : ಪತ್ನಿ ಆತ್ಮಹತ್ಯೆ

Untitled 101
Photo Credit :

ಬೆಂಗಳೂರು: ಪತಿಯ ಕಿರುಕುಳದಿಂದ ಬೇಸತ್ತ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ತ್ಯಾಗರಾಜನಗರದಲ್ಲಿ  ನಡೆದಿದೆ.

ವಂದನಾ(25) ಆತ್ಮಹತ್ಯೆ ಮಾಡಿಕೊಂಡ‌ ಮಹಿಳೆ. ನಗರದ ಕೋರ್ಟ್ ರಸ್ತೆಯ ನಿವಾಸಿ ಗೌತಮ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು.

ಮೃತ ವಂದನಾ ಎಂಎಸ್ ಸಿ ಪದವೀಧರೆಯಾಗಿದ್ದು‌ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.

ಚೈನ್ ಸ್ಮೋಕರ್ ಆಗಿದ್ದ ವಂದನಾ ಪತಿ, ಗೌತಮ್ ಮದುವೆ ನಂತರ ಧೂಮಪಾನತ್ಯಜಿಸುವುದಾಗಿ ಆಕೆಗೆ ಭರವಸೆ ನೀಡಿದ್ದನು, ಆದರೆ ನಂತರ ಅವನು ಮಾದಕ ವ್ಯಸನಿಯಾದ. ಜೊತೆಗೆ ಡ್ರಗ್ಸ್ ಖರೀದಿಸಲು ಅವಳ ಸಂಬಳವನ್ನು ನೀಡುವಂತೆ ಪೀಡಿಸಲು ಪ್ರಾರಂಭಿಸಿದನು.

ಗೌತಮ್ ತಿಂಗಳಿಗೆ 12,000 ರೂಪಾಯಿ ಸಂಪಾದಿಸುತ್ತಿದ್ದ ಆ ಹಣವನ್ನು ಡ್ರಗ್ಸ್ ಗಾಗಿ ಖರ್ಚು ಮಾಡುತ್ತಿದ್ದರು. ಹೆಚ್ಚಿನ ಹಣಕ್ಕಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಸಿಗರೇಟ್ ನಿಂದ ಆಕೆಯ ಮುಖವನ್ನು ಸುಟ್ಟಿದ್ದ.

ಮದುವೆ ವೇಳೆ ಆಕೆಯಿಂದ 2 ಲಕ್ಷ ರೂ ಪಡೆದಿದ್ದ. ಕಳೆದ ಎರಡು ತಿಂಗಳಿಂದ ಆಕೆ ಹಣ ನೀಡಲು ನಿರಾಕರಿಸಿದಾಗ ಆತ ಆಕೆಯ ಲ್ಯಾಪ್‌ಟಾಪ್‌ ಅನ್ನು ತುಂಡು ತುಂಡಾಗಿ ಒಡೆದಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು