News Karnataka Kannada
Monday, April 22 2024
Cricket
ಬೆಂಗಳೂರು

ಚಾಕುವಿನಿಂದ ಇರಿದು ಅಕೌಂಟೆಂಟ್ ಕೊಲೆ

Untitled 181
Photo Credit :

ಬೆಂಗಳೂರು, : ಅಕೌಂಟೆಂಟ್‍ರೊಬ್ಬರನ್ನು ಮನೆಯಲ್ಲೇ ಇರಿದು ಕೊಲೆ ಮಾಡಿರುವ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಎಂಕೆ ನಗರದ ಶಂಕರ್ ರೆಡ್ಡಿ (35) ಕೊಲೆಯಾಗಿರುವ ಅಕೌಂಟೆಂಡ್.ಖಾಸಗಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿರುವ ಶಂಕರ್ ರೆಡ್ಡಿ ಅವರಿಗೆ ಪತ್ನಿ ಹಾಗೂ 6 ಮತ್ತು 4 ವರ್ಷದ ಇಬ್ಬರು ಮಕ್ಕಳಿದ್ದಾರೆ.

ನಿನ್ನೆ ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಶಂಕರ್‍ರೆಡ್ಡಿ ಅವರನ್ನು ಮನೆಯಲ್ಲೇ ಚಾಕುವಿನಿಂದ ಕುತ್ತಿಗೆ ಇರಿದು ಕೊಲೆ ಮಾಡಲಾಗಿದೆ. ಇವರ ಪತ್ನಿ ಹೇಳಿಕೆ ಪ್ರಕಾರ ರಾತ್ರಿ ಮನೆಗೆ ಯಾರೋ ಒಬ್ಬ ಬಂದು ನನ್ನ ಮೇಲೆ ಹಲ್ಲೆ ಮಾಡಿದ. ನಾನು ಮೂರ್ಛೆ ಹೋದೆ. ಪ್ರಜ್ಞೆ ಬಂದು ನೋಡಿದಾಗ ನನ್ನ ಪತಿ ಕೊಲೆಯಾಗಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.

ಯಶವಂತಪುರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೊಲೆ ಮಾಡಿ ಪರಾರಿಯಾಗಿರುವ ವ್ಯಕ್ತಿ ಯಾರು ಎಂಬ ಬಗ್ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು