News Karnataka Kannada
Friday, April 19 2024
Cricket
ಬೆಂಗಳೂರು

ಕೇರಳ ಮೂಲದ ಹತ್ತು ದರೋಡೆಕೋರರ ಬಂಧನ

Untitled 100
Photo Credit :

ಬೆಂಗಳೂರು: ಬೆಂಗಳೂರಿನ ಮಾದಾವರದ ನಾಡಗೀರ್ ಕಾಲೇಜ್ ಬಳಿ 10 ಮಂದಿ ಕೇರಳ ಮೂಲದ ದರೋಡೆಕೋರರನ್ನು ಬಂಧಿಸಿದ್ದಾರೆ. ಕೇರಳ ಮೂಲದ ಆಭರಣ ವ್ಯಾಪಾರಿ 60 ವರ್ಷದ ಅಕೌಂಟೆಂಟ್ ನೀಡಿದ ದೂರಿನ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ತುಮಕೂರು ಹೆದ್ದಾರಿಯಲ್ಲಿ10 ಮಂದಿ ಕೇರಳ ಮೂಲದ ದರೋಡೆಕೋರರ ತಂಡವನ್ನು ಬಂಧಿಸಿದ್ದಾರೆ.

ಈ ಗ್ಯಾಂಗ್ ಕೇರಳದಿಂದ ಎಸ್‌ಯುವಿ ಬಾಡಿಗೆಗೆ ಪಡೆದು ವಾಹನಗಳ ನಂಬರ್ ಪ್ಲೇಟ್ ಬದಲಾಯಿಸುವ ಮೂಲಕ ರಾಜ್ಯಾದ್ಯಂತ ಡಕಾಯಿತಿಗಳನ್ನು ನಡೆಸುತ್ತಿದ್ದಾರೆ.

ಸಂತ್ರಸ್ತರಿಂದ 1 ಕೋಟಿ ರೂಪಾಯಿ ನಗದು ಹಾಗೂ ಇತರೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದರು.

ಹೆದ್ದಾರಿ, ಟೋಲ್ ಪ್ಲಾಜಾಗಳಲ್ಲಿನ 250ಕ್ಕೂ ಹೆಚ್ಚು ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ‘ದೂರುದಾರರ ಕಾರನ್ನು ದರೋಡೆಕೋರರ ಗ್ಯಾಂಗ್ ಬೆಂಗಳೂರು-ಹಾಸನ ರಸ್ತೆಯಲ್ಲಿ ಬಿಟ್ಟು ಹೋಗಿತ್ತು. ನಂತರ ನಾಗಮಂಗಲ, ಮೈಸೂರು, ಚಾಮರಾಜನಗರ ಮಾರ್ಗವಾಗಿ ದರೋಡೆಕೋರರ ಗ್ಯಾಂಗ್ ಸಂಚರಿಸಿದೆ.

ಚಾಮರಾಜನಗರ ಟೋಲ್ ಪ್ಲಾಜಾದಲ್ಲಿ ಎಸ್‌ಯುವಿ ನೋಂದಣಿ ಸಂಖ್ಯೆಯನ್ನು ಕರ್ನಾಟಕ ಆರ್‌ಟಿಒದಿಂದ ಕೇರಳ ಆರ್‌ಟಿಒ ಎಂದು ಬದಲಾಯಿಸಿದ್ದಾರೆ. ತಂಡವು ನಂತರ ಕೊಯಮತ್ತೂರು, ಪಾಲಕ್ಕಾಡ್, ಎರ್ನಾಕುಲಂ ಮತ್ತು ಕೇರಳದ ಇತರ ಸ್ಥಳಗಳಿಗೆ ತೆರಳಿ ಗ್ಯಾಂಗ್‌ನ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಕೇರಳ ಮೂಲದ ಶ್ರೀಧರ್ ಅಲಿಯಾಸ್ ಕೊಡಾಲಿ ಶ್ರೀಧರ್ ಎಂಬಾತ 90 ಲಕ್ಷ ನಗದು ದೋಚಿ ಪರಾರಿಯಾಗಿದ್ದಾನೆ. ಮಾರ್ಚ್ 11 ರಂದು ಬೆಳಿಗ್ಗೆ 6.10 ರಿಂದ 6.15 ರ ನಡುವೆ ಆರೋಪಿಗಳು ಕನ್ಯಾಕುಮಾರಿಯ ಕೋಣಂ ಗ್ರಾಮದ ಅಕೌಂಟೆಂಟ್ ಜೆ ಫ್ರಾಂಕ್ಲಿನ್ ಅವರು ತಮ್ಮ ಇತರ ಸಹೋದ್ಯೋಗಿಗಳೊಂದಿಗೆ ಹುಬ್ಬಳ್ಳಿಯಲ್ಲಿ ಚಿನ್ನಾಭರಣ ಖರೀದಿದಾರರಿಂದ ನಗದು ಸಂಗ್ರಹಿಸಿ ಹಿಂದಿರುಗುತ್ತಿದ್ದಾಗ ದರೋಡೆ ಮಾಡಿದ್ದರು. ಫ್ರಾಂಕ್ಲಿನ್ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳಿಂದ ಎರಡು ಎಸ್‌ಯುವಿಗಳು ಮತ್ತು 9.7 ಲಕ್ಷ ರೂಪಾಯಿ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು