News Karnataka Kannada
Sunday, April 21 2024
Cricket
ಬೆಂಗಳೂರು

ಏಪೋರ್ಟ್ ಮೆಟ್ರೋ ಲೈನ್ ಗೆ ಬೇಡಿಕೆ ಇಟ್ಟ ಸ್ಥಳೀಯರು

Untitled 17
Photo Credit :

ಬೆಂಗಳೂರು : ನಮ್ಮ ಬೆಂಗಳೂರು ಮೆಟ್ರೊ ಯೋಜನೆಯಡಿ ವಿಮಾನ ನಿಲ್ದಾಣ ಮಾರ್ಗ ಕಾಮಗಾರಿ ಘೋಷಿಸಲಾಗಿದ್ದು, ಚಿಕ್ಕಜಾಲದ ಸ್ಥಳೀಯರು ಮೆಟ್ರೊ ನಿಲ್ದಾಣ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದಾರೆ.

ಏರ್‌ಪೋರ್ಟ್ ಲೈನ್ ಕಾಮಗಾರಿಯ ಯೋಜನೆಯಲ್ಲಿ ಚಿಕ್ಕಜಾಲ ನಿವಾಸಿಗಳು ಬೇಡಿಕೆಯಿಟ್ಟಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಬಂದು ಸೇರುವ ಚಿಕ್ಕಜಾಲ ಮೆಟ್ರೋ ನಿಲ್ದಾಣ ಒದಗಿಸಬೇಕೆಂಬುದು ನಿವಾಸಿಗಳ ಒತ್ತಾಯವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿತಮಿತ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲೂ ಲೈನ್ ಕಾರಿಡಾರ್ ಫೇಸ್ -2 (ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರ) ಫೇಸ್ -2ಬಿ (ಕೆಆರ್ ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಕಾಮಗಾರಿಗಳು ನಡೆಯಲಿವೆ. ಇದನ್ನು ನಗರ ಭೂಸಾರಿಗೆ ನಿರ್ದೇಶನಾಲಯ ಮತ್ತು ಬಿಎಂಆರ್‌ಸಿಎಲ್ ಜಂಟಿಯಾಗಿ ರೂಪಿಸುತ್ತಿವೆ.
ಬ್ಲೂ ಲೈನ್ ಕಾರಿಡಾರ್ ಬಗ್ಗೆ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಇಲ್ಲಿ ಚಿಕ್ಕಜಾಲದ ನಿವಾಸಿಗಳು ಭೇಟಿ ನೀಡಿ ತಮಗೆ ನಿಲ್ದಾಣವೊಂದನ್ನು ಒದಗಿಸಬೇಕು ಎಂದು ಸಭೆಯಲ್ಲಿ ಕೋರಿಕೆ ಸಲ್ಲಿಸಿದ್ದಾರೆ.

ಚಿಕ್ಕಜಾಲದ ಸಾಫ್ಟವೇರ್ ಉದ್ಯೋಗಿ ಹಾಗೂ ನಿವಾಸಿ ಎನ್. ಮನೋಜ್ ಮಾತನಾಡಿ, ‘ಜಿಕ್ಕಜಾಲ ಪ್ರದೇಶವು ಒಂದು ತಾಲೂಕು ಕೇಂದ್ರವಾಗಿದೆ. ಚಕ್ಕಜಾಲದಲ್ಲಿ ಶಾಲೆಗಳು ಕಾಲೇಜುಗಳು, ಆಸ್ಪತ್ರೆಗಳು ಮತ್ತು ಪೋಲಿಸ್ ಠಾಣೆಗಳ ಜನನಿಬಿಡ ಪ್ರದೇಶವಾಗಿದೆ. ಇಲ್ಲೊಂದು ಮೆಟ್ರೊ ನಿಲ್ದಾಣವಾದರೆ ಸಾರ್ವಜನಿಕರಿಗೆ ಅಪಾರ ಪ್ರಯೋಜನವಾಲಿದೆ,” ಎಂದು ಅವರು ಅಧಿಕಾರಿಗಳಿಗೆ ಮನವಿ ಮಾಡಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು