Bengaluru 22°C
Ad

ರಾಜ್ಯದ ಜೇನುತುಪ್ಪದ ಬ್ರಾಂಡ್ ಹೆಸರು ʼಝೇಂಕಾರ್ʼ

ರಾಜ್ಯದ ಜೇನುತುಪ್ಪವನ್ನು ಜನಪ್ರಿಯಗೊಳಿಸಲು, ಗ್ರಾಹಕರಿಗೆ ಗುಣಮಟ್ಟದ ಜೇನುತ್ತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ತೋಟಗಾರಿಕೆ ಇಲಾಖೆಯು “ಝೇಂಕಾರ್” ಬ್ರ್ಯಾಂಡ್ ಹೆಸರನ್ನು ಸೂಚಿಸಿ “ಜೀವನೋಲ್ಲಾಸಕ್ಕೆ ಜೇನು’’ ಎಂಬ ಟ್ಯಾಗ್‍ಲೈನ್ ನೀಡಿ ಲೋಗೋ ಮತ್ತು ಪ್ಯಾಕಿಂಗ್ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸಿ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ ಅಧಿಕೃತ ಅನುಮೋದನೆ ಪಡದಿರುತ್ತದೆ.

ಬೆಂಗಳೂರು: ರಾಜ್ಯದ ಜೇನುತುಪ್ಪವನ್ನು ಜನಪ್ರಿಯಗೊಳಿಸಲು, ಗ್ರಾಹಕರಿಗೆ ಗುಣಮಟ್ಟದ ಜೇನುತ್ತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ತೋಟಗಾರಿಕೆ ಇಲಾಖೆಯು “ಝೇಂಕಾರ್” ಬ್ರ್ಯಾಂಡ್ ಹೆಸರನ್ನು ಸೂಚಿಸಿ “ಜೀವನೋಲ್ಲಾಸಕ್ಕೆ ಜೇನು’’ ಎಂಬ ಟ್ಯಾಗ್‍ಲೈನ್ ನೀಡಿ ಲೋಗೋ ಮತ್ತು ಪ್ಯಾಕಿಂಗ್ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸಿ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ ಅಧಿಕೃತ ಅನುಮೋದನೆ ಪಡದಿರುತ್ತದೆ. ತೋಟಗಾರಿಕಾ ಇಲಾಖೆಯೇ ಈ ಬ್ರಾಂಡ್‍ನ ಮಾಲೀಕತ್ವವನ್ನೂ ಸಹ ಹೊಂದಿರುತ್ತದೆ.

Ad

ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ಷರತ್ತು ಮತ್ತು ನಿಬಂಧನೆಗಳೊಂದಿಗೆ ಸದರಿ ಬ್ರ್ಯಾಂಡ್ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ಜೇನುತುಪ್ಪ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

Ad

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಜಾಲತಾಣ https://horticulturedir.karnataka.gov.in ಅಥವಾ ಇ – ಮೇಲ್ ವಿಳಾಸ [email protected] ಅಥವಾ ಅಪರ ನಿರ್ದೇಶಕರು, ತಾಳೆಬೆಳೆ ವಿಭಾಗ, ತೋಟಗಾರಿಕೆ ನಿರ್ದೇಶನಾಲಯ, ಲಾಲ್‍ಬಾಗ್, ಬೆಂಗಳೂರು ಹಾಗೂ ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ.

Ad
Ad
Ad
Nk Channel Final 21 09 2023