News Karnataka Kannada
Friday, April 19 2024
Cricket
ವಿಜಯಪುರ

ವಿಜಯಪುರ ನಗರದಲ್ಲಿ ನಡೆದ ಪಾದಯಾತ್ರೆ, ಪ್ರಚಾರ ಸಭೆಗೆ ಆಲಗೂರ್ ಚಾಲನೆ

ನಗರದ ವರ್ಡ್ ನಂ.೩೨, ೩೩, ೩೪ರಲ್ಲಿ ನಡೆದ ಪಾದಯಾತ್ರೆ ಹಾಗೂ ಪ್ರಚಾರ ಸಭೆಗಳಿಗೆ ಕಾಂಗ್ರೆಸ್ ಪಕ್ಷದ ಪ್ರೊ.ರಾಜು ಆಲಗೂರ ಚಾಲನೆ ನೀಡಿದರು. ಇದರೊಂದಿಗೆ ಕಾಂಗ್ರೆಸ್ ಪಕ್ಷದ ಪ್ರಚಾರ ನಗರದಲ್ಲಿ ಅಧಿಕೃತವಾಗಿ ಶುಭಾರಂಭವಾಯಿತು.
Photo Credit : NewsKarnataka

ವಿಜಯಪುರ: ನಗರದ ವರ್ಡ್ ನಂ.೩೨, ೩೩, ೩೪ರಲ್ಲಿ ನಡೆದ ಪಾದಯಾತ್ರೆ ಹಾಗೂ ಪ್ರಚಾರ ಸಭೆಗಳಿಗೆ ಕಾಂಗ್ರೆಸ್ ಪಕ್ಷದ ಪ್ರೊ.ರಾಜು ಆಲಗೂರ್  ಚಾಲನೆ ನೀಡಿದರು. ಇದರೊಂದಿಗೆ ಕಾಂಗ್ರೆಸ್ ಪಕ್ಷದ ಪ್ರಚಾರ ನಗರದಲ್ಲಿ ಅಧಿಕೃತವಾಗಿ ಶುಭಾರಂಭವಾಯಿತು.

ಈ ವೇಳೆ ಮಾತನಾಡಿದ ರಾಜು ಆಲಗೂರ್ ಅವರು, ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಸ್ಪಂದನೆಯಿದ್ದು, ಈ ಸಲ ಮತದಾರರು ಬದಲಾವಣೆ ಬಯಸಿದ್ದು ನಿಚ್ಚಳವಾಗಿದೆ. ರಾಜ್ಯದ ಸಿದ್ದರಾಮಯ್ಯನವರ ಸರಕಾರದ ಸಾಧನೆ ಮನೆ ಮನೆ, ಮನ ಮನ ಮುಟ್ಟಿದೆ. ಜಿಲ್ಲೆಯೊಂದರಲ್ಲೇ ನಾಲ್ಕು ಲಕ್ಷದಷ್ಟು ಮಹಿಳೆಯರು ಸರಕಾರ ನೀಡಿದ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸಾಮಾನ್ಯರ ಬದುಕು ಸುಂದರವಾಗುದ್ದು, ಗ್ಯಾರಂಟಿ ಯೋಜನೆಗಳು ಎಲ್ಲರ ಸ್ಥಿತಿ ಬದಲಾವಣೆ ಮಾಡಿದೆ. ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಯರಿಗೆ ತಿಂಗಳಿಗೆ ಒಂದು ಲಕ್ಷ ರೂ. ಸಿಗವುದು ಸೇರಿದಂತೆ ಹತ್ತು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ‌. ಇದರಿಂದ ಬಡವರ ಜೀವನ ಮಟ್ಟ ಸುಧಾರಿಸಲಿದೆ ಎಂದು ಹೇಳಿದರು.

ಬಬಲೇಶ್ವರ ನಾಕಾದಿಂದ ಪಾದಯಾತ್ರೆ ಆರಂಭಗೊಂಡು, ಜೋರಾಪುರಪೇಠ, ದರ‍್ಗಾದೇವಿ ಹಾಗೂ ಶಂಕರಲಿಂಗ ದೇವಸ್ಥಾನ, ಹೊಸ ನಿಲ್ದಾಣ, ಇಬ್ರಾಹಿಂ ರೋಜಾ ಪ್ರದೇಶದಲ್ಲಿ ಸಂಚರಿಸಲಾಯಿತು. ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್‌ಹಮೀದ ಮುಶ್ರೀಫ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಮಹ್ಮದರಫೀಕ ಟಪಾಲ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ನಗರಸಭೆ ಮಾಜಿ ಸದಸ್ಯ ಅಬ್ದುಲ್‌ರಜಾಕ ಹೊರ್ತಿ, ಬಿಡಿಎ ಅಧ್ಯಕ್ಷ ಕನ್ನಾನ ಮುಶ್ರೀಫ್, ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಗಂಗಾಧರ ಸಂಬಣ್ಣಿ, ಚಂದ್ರಕಾಂತ ಶೆಟ್ಟಿ, ಆಜಾದ ಪಟೇಲ, ಸಂಗನಗೌಡ ಹರನಾಳ, ಮಹಾದೇವಿ ಗೋಕಾಕ, ಅಫ್ಜಲ ಜಾನವೆಕರ, ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಕೆಪಿಸಿಸಿ ಸಂಯೋಜಕ ವಿನೋದ ವ್ಯಾಸ, ಉಪ ಮಹಾಪೌರ ದಿನೇಶ ಹಳ್ಳಿ, ಮಹಾನಗರ ಪಾಲಿಕೆ ಸದಸ್ಯರುಗಳಾದ ಆರತಿ ಶಹಾಪೂರ, ಅಲ್ತಾಫ್ ಇಟಗಿ, ಅಪ್ಪು ಪೂಜಾರಿ, ಸದ್ದಾಮ ನಾಡೆವಾಲೆ, ಆಸೀಫ್ ಶಾನವಾಲೆ, ಇದ್ರೂಸ ಬಕ್ಷಿ, ಅಂಗ ಘಟಕಗಳ ಅಧ್ಯಕ್ಷರಾದ ವಿದ್ಯಾರಾಣಿ ತುಂಗಳ, ನಿಂಗಪ್ಪ ಸಂಗಾಪೂರ, ಬಾಪುಗೌಡ ಪಾಟೀಲ, ಅಮಿತ ಚವ್ಹಾಣ,

ಆನಂದ ಜಾಧವ, ಮೆಂಡೆಗಾರ, ಲಾಲಸಾಬ ಕೊರಬು, ವಿಜಯಕುಮಾರ ಘಾಟಗೆ, ವಸಂತ ಹೊನಮೊಡೆ, ಅಷ್ಫಾಕ ಮನಗೂಳಿ, ಐ.ಎಂ. ಇಂಡಿಕರ, ಫಿರೋಜ ಶೇಖ, ಪಯಾಜ ಕಲಾದಗಿ, ಅಬ್ದುಲ್‌ಪೀರಾ ಜಮಖಂಡಿ, ಸಂತೋಷ ಬಾಲಗಾಂವಿ, ಹಾಜಿಲಾಲ ದಳವಾಯಿ, ಗಣೇಶ ಕಬಾಡೆ, ಪರಶುರಾಮ ಹೊಸಮನಿ, ಇಲಿಯಾಸಅಹ್ಮದ ಸಿದ್ದಿಕಿ, ಜಾಫರ ಸುತಾರ, ಅಕ್ರಮ ಮಾಶ್ಯಾಳಕರ, ಗಂಗೂಬಾಯಿ ಧುಮಾಳೆ, ದೀಪಾ ಕುಂಬಾರ, ಭಾರತಿ ಹೊಸಮನಿ, ಜಯಶ್ರೀ ಭಾರತೆ, ರಾಜೇಶ್ವರಿ ಚೋಳಕೆ, ಸಮಿಮಾ ಅಕ್ಕಲಕೋಟ, ಸವಿತಾ ಧನರಾಜ, ಕಾಶಿಬಾಯಿ ಹಡಪದ, ಅವಿನಾಶ ಹೇರಲಗಿ, ವಿಜಯಕುಮಾರ ಕಾಳೆ, ಪ್ರದೀಪ ಸೂರ್ಯವಂಶಿ, ತಾಜುದ್ದೀನ ಖಲೀಫಾ, ಅಡಿವೆಪ್ಪ ಸಾಲಗಲ್, ಸದಾಶಿವ ಹಟಗಾರ, ಸಿದ್ದು ತೊರವಿ, ಅಶೋಕ ನಾಯ್ಕೋಡಿ, ಕುಲದೀಪಸಿಂಗ ಪೋತಿವಾಲಾ, ವರ್ಷಾ ಭೋವಿ, ಅನಿಲ ಸೂರ್ಯವಂಶಿ, ರಮೇಶ ಕೊಕಟನೂರ, ಹಾಜಿ ಪಿಂಜಾರ, ಶಕೀರ ಖಾಜಿ, ಭಡೇಗರ, ಇಸಾಕ ಗುಲಬರ್ಗಾ, ಸುಂದರಪಾಲ ರಾಠೋಡ, ರೋಜೆವಾಲೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು