News Karnataka Kannada
Tuesday, April 23 2024
Cricket
ವಿಜಯಪುರ

ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿದರೆ ಈ ಸಲ ಬದಲಾವಣೆ ಸಾಧ್ಯ: ಆಲಗೂರ

Vj
Photo Credit : NewsKarnataka

ವಿಜಯಪುರ :  ಮತದಾರರಲ್ಲಿ ರಾಜಕೀಯ ಪ್ರಜ್ಞೆ ಮೂಡಿದರೆ, ದೇಶದಲ್ಲಿ ಮತ್ತು ನಮ್ಮ ಲೋಕಸಭೆ ಕ್ಷೇತ್ರದಲ್ಲೂ ಬದಲಾವಣೆ ನಿಶ್ಚಿತ ಎಂದು ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ  ಪ್ರೊ.ರಾಜು ಆಲಗೂರ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಮುಳಸಾವಳಗಿಯಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಮಾತನಾಡಿ, ತಮಗೊಂದು ಅವಕಾಶ ನೀಡಿದರೆ ಜಿಲ್ಲೆಯ ಅಭಿವೃದ್ಧಿಗೆ ಬದ್ಧ ಎಂದರು. ರಾಜ್ಯ ಸರಕಾರದ ಕೆಲಸ ಕೇದ್ರದಲ್ಲೂ ಮುಂದುವರಿಯಲಿವೆ. ಕೆಲಸ ಮಾಡುವವರಿಗೆ ಆದ್ಯತೆ ನೀಡಿ ಎಂದು ಮನವಿ ಮಾಡಿದರು.

ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಮಾತನಾಡಿ, ಮೋದಿ ಮತ್ತು ಸದ್ಯದ ಸಂಸದರು ಬರೀ ಮಾತೇ ಆಡುತ್ತಾರೆ. ದಶಕದಿಂದ ದೇಶಕ್ಕಾಗಲೀ ವಿಜಯಪುರ ಲೋಕಸಭೆ ಕ್ಷೇತ್ರಕ್ಕಾಗಲಿ ನಯಾ ಪೈಸೆಯ ಲಾಭವಾಗಿಲ್ಲ ಎಂದು ಹೇಳಿದರು. ರಾಜ್ಯ ಸರಕಾರ ಹೇಳಿದಂತೆ ನಡೆದುಕೊಂಡಿದೆ ಎನ್ನುವುದಕ್ಕೆ ಗ್ಯಾರಂಟಿಗಳು ಲಾಗೂ ಆಗಿದ್ದೇ ಸಾಕ್ಷಿ. ಹೆಣ್ಣುಮಕ್ಕಳು, ಯುವಕರಲ್ಲದೇ ಎಲ್ಲ  ಜನಕ್ಕೆ ಪ್ರತಿ ತಿಂಗಳು ಆರು ಸಾವಿರ ರೂ.ನಷ್ಟು ಹಣ ಬಂದು, ರ‍್ಥಿಕ ಸ್ಥಿತಿ ಸುಧಾರಿಸಿದೆ. ಬಡವರ, ದೀನರ ಬದುಕು ಹಸನಾಗಿದೆ. ಸದ್ಯ ಕಾಂಗ್ರೆಸ್‌ನ ಲೋಕಸಭೆ ಅಭ್ರ‍್ಥಿಗೆ ಮತ ನೀಡಿದರೆ ಜಿಲ್ಲೆ ಮತ್ತಷ್ಟು ಏಳ್ಗೆ ಸಾಧಿಸಲಿದೆ. ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನಷ್ಟು ಗ್ಯಾರಂಟಿಗಳು ಜಾರಿಗೆ ಬರಲಿವೆ. ಹೆಣ್ಣುಮಕ್ಕಳಿಗೆ ತಿಂಗಳಿಗೆ ಲಕ್ಷ ರೂ. ಸಿಗಲಿವೆ. ಹಾಗಾಗಿ ತಾವುಗಳು ಮೋದಿಯ ಮೋಡಿಗೆ ಬಲಿಯಾಗಬೇಡಿ ಎಂದು ಎಚ್ಚರಿಸಿದರು.

ಪೂಜ್ಯ ಲಿಂಗರಾಯ ಮಹಾರಾಜ, ಹಾಳಾಸಾಬ ರ‍್ಗಾದ ಅಬ್ದುಲ್ಬಶೇಕರು ಮುಜಾವರ, ಸುಭಾಶ ಛಾಯಾಗೋಳ, ಬಿ.ಎಸ್. ಪಾಟೀಲ ಯಾಳಗಿ, ಬಾಪುಗೌಡ ಪಾಟೀಲ, ಡಾ.ಪ್ರಭುಗೌಡ ಲಿಂಗದಳ್ಳಿ, ಬಶೀರ್ ಬೇಪಾರಿ, ಬಾಳನಗೌಡ ಪಾಟೀಲ, ಸೋಮನಾಥ ಕಳ್ಳಿಮನಿ, ಸರಿತಾ ನಾಯಕ, ಎಂ.ಜಿ. ಯಂಕಂಚಿ, ಪರುಶರಾಮ ದಿಂಡವಾರ, ಸಾಬು ಹುಸನಳ್ಳಿ, ಸೈಯದ್ ರೂಗಿ, ಬಸವನಗೌಡ ಪಾಟೀಲ, ಸುರೇಶಗೌಡ ಪಾಟೀಲ, ಎಂ.ಎಂ. ಪಟೇಲ, ಸದಾಶಿವ ರ‍್ಜಗಿ, ಡಿ.ಎಲ್. ಚವ್ಹಾಣ, ವಿಠ್ಠಲ ದೇಗಿನಾಳ, ಅಡಿವೆಪ್ಪ ಕೊಂಡಗೂಳಿ, ಸುಭಾಷ, ರಾಜು ಸಿಂಧಕೇರಿ, ಸುನಂದಾ ಹೊನ್ಬಳ್ಳಿ, ಅಂಬಣ್ಣ ಆನೇಗುಂದಿ, ಮೂಲಿಮನಿ ಸಾಹುಕಾರ್ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು