News Karnataka Kannada
Wednesday, May 01 2024
ವಿಜಯಪುರ

ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರವರ ೧೩೩ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವುದರೊಂದಿಗೆ ಆಚರಿಸಲಾಯಿತು.
Photo Credit : NewsKarnataka

ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರವರ ೧೩೩ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವುದರೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಲೋಣಿ ರವರು ಮಾತನಾಡುತ್ತಾ ಡಾ.ಬಾಬಾಸಾಹೇಬ ಅಂಬೇಡ್ಕರರವರು ಮಾನವಕುಲದ ಶ್ರೇಷ್ಠ ಚಿಂತಕ, ದೀನ ದಲಿತರ ಹಾಗೂ ದುರ್ಬಲ ವರ್ಗದವರ ವಿಮೋಚನೆಗಾಗಿ ಜನಿಸಿದ ಮಹಾನಾಯಕ. ಇಂತಹ ಮಹಾನ್ ಚೇತನ ಈ ಜಗತ್ತಿನಲ್ಲಿ, ಅದರಲ್ಲೂ ಜಾತಿ ವ್ಯವಸ್ಥೆ ತುಂಬಿ ತುಳುಕುತ್ತಿದ್ದ ಭಾರತದಲ್ಲಿ ಹುಟ್ಟಿದ್ದೇ ಒಂದು ಮಹಾ ವಿಷ್ಮಯ.

ಡಾ.ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಬ್ಬರಿಗಾಗಿಯೂ ಕೆಲಸ ಮಾಡಿದ್ದಾರೆ. ಇಂದು ದೇಶದ ಎಲ್ಲ ಜಾತಿಗಳ ಪ್ರತಿಯೊಬ್ಬರೂ ಕೂಡ ಡಾ.ಬಾಬಾಸಾಹೇಬ ಅಂಬೇಡ್ಕರರವರು ಮಾಡಿದ ಕೆಲಸದ ಫಲಾನುಭವಿಗಳಾಗಿದ್ದಾರೆ, ಅಷ್ಟೇ ಅಲ್ಲ ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಮಹಿಳೆಯರಿಗೆ ಹಕ್ಕುಗಳನ್ನು ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾರಣರಾದವರೇ ಅಂಬೇಡ್ಕರ್ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಅಧ್ಯಕ್ಷೆ ಕಾಂತಾ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರುಕ್ಸಾನಾ ಉಸ್ತಾದ, ಕಾಂಗ್ರೆಸ್ ಮುಖಂಡರಾದ ಡಿ.ಎಚ್. ಕಲಾಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಮಹಾದೇವಿ ಗೋಕಾಕ, ಸುಬಾಷ ಕಾಲೇಬಾಗ, ಪೀರಪ್ಪ ನಡುವಿನಮನಿ, ಅಫ್ಜಲ್ ಜಾನವೆಕರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಮೀರಅಹ್ಮದ ಬಕ್ಷಿ,

ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರತಿ ಶಹಾಪೂರ, ಜಿಲ್ಲಾ ಕಾಂಗ್ರೆಸ್ ಅಂಗ ಘಟಕಗಳ ಅಧ್ಯಕ್ಷರುಗಳಾದ ಶಬ್ಬೀರ ಜಾಗೀರದಾರ, ನಿಂಗಪ್ಪಾ ಸಂಗಾಪೂರ, ದೇವಾನಂದ ಲಚ್ಯಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಹಾಜಿಲಾಲ ದಳವಾಯಿ, ಚನಬಸಪ್ಪಾ ನಂದರಗಿ, ಶರಣಪ್ಪ ಯಕ್ಕುಂಡಿ, ಅಸ್ಫಾಕ ಮನಗೂಳಿ, ಹಾಜಿಲಾಲ ದಳವಾಯಿ,

ಸಂತೋಷ ಬಾಲಗಾಂವಿ, ಲಕ್ಷ್ಮೀ ಕ್ಷೀರಸಾಗರ, ಸತೀಶ ಅಡವಿ, ತಾಜುದ್ದೀನ ಖಲೀಫಾ, ಬಾಬು ಯಾಳವಾರ, ಅಕಬರ ನಾಯಕ, ಬಿ.ಎಸ್. ಬ್ಯಾಳಿ, ಕಾಶಿಬಾಯಿ ಹಡಪದ, ಲಾಲಸಾಬ ಕೊರಬು, ಎಮ್.ಎಮ್. ಮುಲ್ಲಾ, ಕೃಷ್ಣಾ ಲಮಾಣಿ, ಸಂಜಯ ಚವ್ಹಾಣ, ನಾಗೇಶ ತಾಳಿಕೋಟಿ, ಭಾರತಿ ಹೊಸಮನಿ, ಶಮಿಮಾ ಅಕ್ಕಲಕೋಟ, ಇಲಿಯಾಸಅಹ್ಮದ ಸಿದ್ದಿಕಿ, ಲಕ್ಷ್ಮಣ ಇಲಕಲ್, ಅಯುಬಖಾನ ನದಾಫ್, ನಿಸಾರ ಮುಜಾವರ, ಗಂಗಾಬಾಯಿ ಕಣಮುಚನಾಳ, ಅನ್ನಪೂರ್ಣ ಬೀಳಗಿಕರ, ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು