ಬೆಳಗಾವಿ: ತರಬೇತಿ ವೇಳೆ ಬೋಟ್ ಮಗುಚಿ ಇಬ್ಬರು ಜೂನಿಯರ್ ಕಮಾಂಡೋಗಳು ಸಾವನ್ನಪ್ಪಿರುವಂತಹ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಘಡ ತಾಲೂಕಿನ ಹಾಜಗೋಳಿ ಬಳಿ ನಡೆದಿದೆ. ರಾಜಸ್ಥಾನದ ವಿಜಯಕುಮಾರ್(28) ಮತ್ತು ಪಶ್ಚಿಮ ಬಂಗಾಳದ ದಿವಾಕರ್ ರಾಯ್(26) ಮೃತ ಜೂನಿಯರ್ ಕಮಾಂಡೋಗಳು. ತಿಲಾರಿ ಡ್ಯಾಂ ಹಿನ್ನೀರಿನಲ್ಲಿ ನದಿ ದಾಟುವ ತರಬೇತಿ ನೀಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಒಟ್ಟು ಆರು ಜನರಿದ್ದ ಬೋಟ್ನಿಂದ ನಾಲ್ವರು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಜೆಎಲ್ವಿಂಗ್ ಕಮಾಂಡೋ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Ad