Ad

ಬೆಳಗಾವಿಯಲ್ಲಿ ಮಾರ್ಕಂಡೇಯ ನದಿಗೆ ಬಿದ್ದ ಬೈಕ್‌ : ಓರ್ವನ ರಕ್ಷಣೆ, ಮತ್ತೋರ್ವ ನಾಪತ್ತೆ

ಧಾರಾಕಾರ ಮಳೆ ಹಿನ್ನೆಲೆ ನಿಯಂತ್ರಣ ತಪ್ಪಿ ಉಕ್ಕಿಹರಿಯುವ ಮಾರ್ಕಂಡೇಯ ನದಿಗೆ ಬೈಕ್ ಬಿದ್ದಿರುವ ಘಟನೆ ನಡೆದಿದೆ.

ಬೆಳಗಾವಿ: ಧಾರಾಕಾರ ಮಳೆ ಹಿನ್ನೆಲೆ ನಿಯಂತ್ರಣ ತಪ್ಪಿ ಉಕ್ಕಿಹರಿಯುವ ಮಾರ್ಕಂಡೇಯ ನದಿಗೆ ಬೈಕ್ ಬಿದ್ದಿರುವ ಘಟನೆ ನಡೆದಿದೆ.

ಬೆಳಗಾವಿ ತಾಲೂಕಿನ ಅಲತ್ತಗಾ ಗ್ರಾಮದ ಓಂಕಾರ ಅರುಣ ಪಾಟೀಲ (23), ನಾಪತ್ತೆಯಾದವ, ಜ್ಯೋತಿನಾಥ್ ಪಾಟೀಲ ಈಜಿ ದಡ ಸೇರಿದವ. ಬೈಕ್‌ನಲ್ಲಿ ಹೋಗುತ್ತಿದ್ದ ಸಹೋದರರ ಪೈಕಿ ಓರ್ವನ ರಕ್ಷಣೆ ಮಾಡಿದ್ದು ಮತ್ತೋರ್ವ ನಾಪತ್ತೆ ಆಗಿದ್ದಾನೆ.

ನಾಪತ್ತೆಯಾದ ಮತ್ತೋರ್ವ ಸಹೋದರನ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳಕ್ಕೆ ಬೆಳಗಾವಿ ನಗರ ಡಿಸಿಪಿ ಪಿ.ವಿ ಸ್ನೇಹಾ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಕಾಕತಿ‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Ad
Ad
Nk Channel Final 21 09 2023