ಬೆಳಗಾವಿ : ಸ್ನೇಹಂ ಸೇಲೋ ಟೇಪ್ ಕಾರ್ಖಾನೆಯಲ್ಲಿ ರಾತ್ರಿ ಭಯಾನಕ ಸ್ಫೋಟ ಸಂಭವಿಸಿರುವ ಘಟನೆ ಬೆಳಗಾವಿಯ ನಾವಗೆ ಗ್ರಾಮದ ಬಳಿ ನಡೆದಿದೆ.
ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟಗೊಂಡ ಕಾರಣ ಒಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹೊರಗಡೆ ಓಡಿ ಬಂದು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಭೀಕರ ಅಗ್ನಿ ದುರಂತದಲ್ಲಿ ಓರ್ವ ಕಾರ್ಮಿಕ ಕಾಣೆಯಾಗಿದ್ದಾರೆ.
ಧಗಧಗಿಸಿ ಹೊತ್ತಿ ಉರಿಯುತ್ತಿರುವ ಕಾರ್ಖಾನೆಯ ಅಗ್ನಿ ನಂದಿಸಲು ಅಗ್ನಿ ಶಾಮಕದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಜಿಲ್ಲಾಡಳಿತ ರಾತ್ರಿ ಇಡೀ ಕಾರ್ಖಾನೆ ಮುಂದೆ ಠಿಕಾಣಿ ಹೂಡಿತ್ತು.
ಕೆನ್ನಾಲೆಗಳು ನೋಡು ನೋಡುತ್ತಿದ್ದಂತೆ ಇಡೀ ಪ್ಯಾಕ್ಟರಿಯನ್ನ ಅವರಿಸಿ ಕ್ಷಣಾರ್ಧದಲ್ಲಿ ಪ್ಯಾಕ್ಟರಿ ಧಗಧಗಿಸಿ ಹೊತ್ತಿ ಉರಿದಿದೆ. ಬೆಂಕಿ ಆವರಿಸಿಕೊಳ್ತಿದ್ದಂತೆ ಕೆಲಸ ಮಾಡ್ತಿದ್ದ 35ಕ್ಕೂ ಹೆಚ್ಚು ಸಿಬ್ಬಂದಿ ಜೀವ ಉಳಿಸಿಕೊಳ್ಳಲು ಹೊರ ಓಡಿ ಬಂದಿದ್ದಾರೆ. ಇಷ್ಟೊತ್ತಿಗೆ ಬೆಂಕಿ ಕೆನ್ನಾಲಿಗೆ ತಗುಲಿ ಮೂವರು ಗಾಯಗೊಂಡಿದ್ದು, ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
15ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ನಿರತವಾಗಿದ್ದು. ಘಟನೆಯಲ್ಲಿ ಮಾರ್ಕಂಡೇಯ ನಗರ ನಿವಾಸಿ ಕಾರ್ಖಾನೆ ಕಾರ್ಮಿಕ ಯಲ್ಲಪ್ಪ ಗೂಂಡ್ಯಾಗೋಳ ಬೆಂಕಿ ಅನಾಹುತದ ನಂತರ ಕಾಣೆ ಆಗಿದ್ದಾರೆ. ಮಾಹಿತಿ ಕಲೆ ಹಾಕುತ್ತಿದ್ದಾರೆ.