ಬೆಳಗಾವಿ: ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಪೊಲೀಸರ ಮೂಲಕ ಡಿಜೆ ಹಾಕದಂತೆ ತೊಂದರೆ ಕೊಡುತ್ತಿದ್ದು, ಡಿಜೆ ಹಾಕಿಯೇ ಗಣೇಶ ಉತ್ಸವ ಆಚರಿಸುತ್ತೇವೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.
ಹುಕ್ಕೇರಿಯಲ್ಲಿ ಮಾತನಾಡಿ, ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಹಚ್ಚುವುದನ್ನು ರಾಜ್ಯ ಸರ್ಕಾರ ನಿಷೇಧ ಹೇರಿದೆ. ಡಿಜೆ ಹಾಕಿಯೇ ಗಣೇಶೋತ್ಸವ ಆಚರಿಸುವಂತೆ ಯುವಕ ಮಂಡಳಿಗೆ ಕರೆ ನೀಡಿರುವುದಾಗಿ ತಿಳಿಸಿದ್ದಾರೆ.
ಪೊಲೀಸರಿಗೆ ನಾವು ಬಗ್ಗದೇ ವರ್ಷಕ್ಕೊಮ್ಮೆ ಗಣೇಶ ಹಬ್ಬವನ್ನು ಡಿಜೆ ಹಚ್ಚಿಯೇ ಸಂಭ್ರಮದಿಂದ ಆಚರಿಸುತ್ತೇವೆ ಎಂದಿದ್ದಾರೆ. ಡಿಜೆ ಹಚ್ಚದಂತೆ ಸುಪ್ರೀಂ ಕೋರ್ಟ್ ಆದೇಶವಿದೆ ಅಂತಾ ಪೊಲೀಸರು ಹೇಳುತ್ತಾರೆ.
ಮಸೀದಿಗಳ ಮೈಕ್ ಗಳಲ್ಲಿ ಆಜಾನ್ ಕೂಗುತ್ತಾರಲ್ವಾ ಅದಕ್ಕೆ ಸುಪ್ರೀಂ ಕೋರ್ಟ್ ಆದೇಶ ಅನ್ವಯಿಸೋದಿಲ್ಲವಾ ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ. ಹಿಂದೂಗಳು ಸೌಮ್ಯ ಸ್ವಭಾವದವರು ಎಂಬ ಕಾರಣಕ್ಕೆ ಹಿಂದೂಗಳ ಆಚರಣೆಗೆ ಈ ರೀತಿ ತೊಂದರೆ ಉಂಟು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
Ad