News Karnataka Kannada
Monday, April 15 2024
Cricket
ಹಾವೇರಿ

ಓದಿಕೋ ಎಂದ ಪೋಷಕರು:ದುಡುಕಿ ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿ

Dead
Photo Credit : IANS

ಹಾವೇರಿ: ಪರೀಕ್ಷೆ ಇದೆ ಓದಿಕೋ ಎಂದು ಹೇಳಿದ ಪೋಷಕರ ಮಾತಿಗೆ ಬೇಸತ್ತ ಪಿಯುಸಿ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾದ ಘಟನೆ ಹಾವೇರಿ ತಾಲೂಕಿನ ಹೊಸಮೆಲ್ಮೂರಿ ಗ್ರಾಮದಲ್ಲಿ ನಡೆದಿದೆ.

ಫಕ್ಕೀರೇಶ ಅರಳಿ ಮೃತ ಪಿಯುಸಿ ವಿದ್ಯಾರ್ಥಿ. ಓದುವುದನ್ನು ಬಿಟ್ಟು ಏನು ಮಾಡುತ್ತಿದ್ದೀಯ ಎಂದು ಪೋಷಕರು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಈತ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡಿದ್ದಾನೆ.

ನಿನ್ನೆ ಪಿಯುಸಿ ಪರೀಕ್ಷೆ ಬರೆದು ಬಂದ ಬಳಿಕ ಸುಮ್ಮನೆ ಕುಳಿತಿದ್ದ ವೇಳೆ ಈತನ ತಂದೆ-ತಾಯಿ ಓದಿಕೋ ಎಂದು ಹೇಳಿದ್ದಾರೆ. ಇಷ್ಟಕ್ಕೆ ತಮ್ಮ ಜಮೀನಿಗೆ ಹೋಗಿ ನೇಣು ಬಿಗಿದುಕೊಂಡಿದ್ದಾನೆ. ಸ್ಥಳಕ್ಕೆ ಗುತ್ತಲ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು