Categories: ಗದಗ

ಸಹಾಯ ಯಾರು ಬೇಕಾದರೂ ಮಾಡಬಹುದು: ‘ನನ್ನ ಬಗ್ಗೆ ಅಸಹ್ಯ ಆಗಿದೆ’ ಎಂದ ಯಶ್​

ಗದಗ: ಬ್ಯಾನರ್​ ಕಟ್ಟಲು ಹೋದ ಅಭಿಮಾನಿಗಳು ನಿಧನರಾದ ಹಿನ್ನೆಲೆಯಲ್ಲಿ ಯಶ್​ ಅವರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ಆಗಮಿಸಿದ್ದಾರೆ. ಮೃತರಾದ ಹನುಮಂತ ಹರಿಜನ, ಮುರಳಿ ನಡವಿನಮನಿ ಮತ್ತು ನವೀನ್ ಅವರ ಕುಟುಂಬದ ಸದಸ್ಯರನ್ನು ಯಶ್​ ಭೇಟಿ ಮಾಡಿದ್ದಾರೆ.

ಮೃತರ ತಂದೆ-ತಾಯಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಯಶ್​ ಅವರು, ಅಭಿಮಾನಿಗಳ ಸಾವಿನ ಬಗ್ಗೆ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ ನಿಧನರಾಗಿದ್ದಕ್ಕೆ ಯಶ್​ ಅವರಿಗೆ ತೀವ್ರ ನೋವಾಗಿದೆ.

‘ಬ್ಯಾನರ್​ ಹಾಕಿ ಅಭಿಮಾನ ವ್ಯಕ್ತಪಡಿಸಬೇಕು ಎಂಬುದನ್ನು ನಾವು ಯಾರೂ ಇಷ್ಟಪಡುವುದಿಲ್ಲ. ಪ್ರತಿ ವರ್ಷ ಬರ್ತ್​ಡೇ ಬಂದಾಗ ಇಂಥ ಒಂದು ಘಟನೆ ನಡೆದರೆ ಬರ್ತ್​ಡೇ ಎಂದರೆ ನನಗೆ ಭಯ ಬಂದಿದೆ. ನಿಜ ಹೇಳಬೇಕು ಎಂದರೆ ನನ್ನ ಬಗ್ಗೆ ನನಗೆ ಅಸಹ್ಯ ಆಗಿದೆ. ಎಲ್ಲಿಂದಲೋ ಅವರು ಪ್ರೀತಿಯಿಂದ ಹರಸಿದರೆ ಸಾಕು. ಇದೇ ನಿಜವಾದ ಬರ್ತ್​ಡೇ’ ಎಂದು ಯಶ್​ ಹೇಳಿದ್ದಾರೆ.

‘10-15 ದಿನ ಮುಂಚೆ ಕೊವಿಡ್​ ಅಂತ ಶುರು ಮಾಡಿದರು. ನಮ್ಮ ಬರ್ತ್​ಡೇಯಿಂದ ಯಾರಿಗೂ ತೊಂದರೆ ಆಗಬಾರದು ಅಂತ ನಾನು ಈ ವರ್ಷ ಎಲ್ಲರ ಜೊತೆ ಆಚರಣೆ ಬೇಡ ಅಂತ ನಿರ್ಧರಿಸಿದೆ. ಬೇಡ ಎಂದರೂ ಅಭಿಮಾನಿಗಳು ಬೇಜಾರು ಮಾಡಿಕೊಳ್ಳುತ್ತಾರೆ. ಸಹಾಯ ಯಾರು ಬೇಕಾದರೂ ಮಾಡಬಹುದು. ಮನೆಗೆ ಮಗ ಬರುತ್ತಾನಾ? ಕುಟುಂಬದಲ್ಲಿ ಮಕ್ಕಳನ್ನು ಕಳೆದುಕೊಂಡವರು ಏನು ಹೇಳಲು ಸಾಧ್ಯ? ನಮ್ಮ ಮನೆಗಳಲ್ಲಿ ಸಾವಾದರೂ ಹಾಗೆ ಅಲ್ಲವೇ? ಆ ಹುಡುಗರು ಇನ್ನೂ ಚಿಕ್ಕ ವಯಸ್ಸಿನವರು’ ಎಂದಿದ್ದಾರೆ ಯಶ್​.

‘ಈ ಮೂಲಕ ನಾನು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ಬ್ಯಾನರ್​ ಕಟ್ಟುವುದು, ಬೈಕ್​ನಲ್ಲಿ ಚೇಸ್​ ಮಾಡುವುದನ್ನೆಲ್ಲ ಬಿಟ್ಟು ಬಿಡಿ. ನಿಜವಾಗಿಯೂ ನೀವು ಪ್ರೀತಿ ತೋರಿಸಬೇಕು ಎಂದರೆ ಒಳ್ಳೆಯ ಕೆಲಸ ಮಾಡಿ ನಿಮ್ಮ ಜೀವನದಲ್ಲಿ ಖುಷಿಯಾಗಿರಿ. ಅದೇ ಸಾಕು. ನನ್ನ ಬಗ್ಗೆ ಬೇಜಾರು ಮಾಡಿಕೊಂಡರೂ ಪರವಾಗಿಲ್ಲ ಅಂತ ನಾನು ದೂರ ಇರುತ್ತೇನೆ. ಪ್ರತಿಯೊಬ್ಬ ಅಭಿಮಾನಿಯೂ ಅವರವರ ಬದುಕಿನಲ್ಲಿ ಬೆಳೆದರೆ ಅದೇ ನಮಗೆ ಅವರು ಅಭಿಮಾನ ತೋರಿಸಿದಂತೆ’ ಎಂದು ಯಶ್​ ಹೇಳಿದ್ದಾರೆ. ಈಗ ನಾನು ಪರಿಹಾರ ಘೋಷಣೆ ಮಾಡುವುದು ದೊಡ್ಡ ವಿಷಯ ಅಲ್ಲ. ಏನು ಬೇಕಾದರೂ ನಾನು ಮಾತಾಡಬಹುದು. ಆದರೆ ನಿಜವಾಗಿ ಇವರ ಕುಟುಂಬಕ್ಕೆ ಏನು ಅವಶ್ಯಕತೆ ಇದೆಯೋ ಅದನ್ನು ಮಾಡೋಣ. ಅವರ ಕುಟುಂಬಕ್ಕೆ ಮಾಡಬೇಕಾಗಿದ್ದನ್ನು ನಾನು ಮಾಡುತ್ತೇನೆ ಎಂದಿದ್ದಾರೆ.

 

Ashitha S

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

4 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

5 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

5 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

5 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

5 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

6 hours ago