ಗದಗ

ಸಿದ್ದರಾಮಯ್ಯ ಅವರ “ತೆರಿಗೆ ಭಯೋತ್ಪಾದನೆ” ಹೇಳಿಕೆಗೆ ಬೊಮ್ಮಾಯಿ ತಿರುಗೇಟು

ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ “ತೆರಿಗೆ ಭಯೋತ್ಪಾದನೆ” ಹೇಳಿಕೆಗೆ ಮಾಜಿ ಮುಖ್ಯಮಂತ್ರಿಯೂ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಯಾವಾಗಲೂ ಕಾಂಗ್ರೆಸ್ ಪಕ್ಷ ಬ್ಲ್ಯಾಕ್ ಮನಿಗೆ ಉತ್ತೇಜನ ನೀಡಿದೆ, ಕಾಂಗ್ರೆಸ್​ ಅಕ್ರಮವಾಗಿ 600 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದನ್ನು ಪ್ರಶ್ನೆ ಮಾಡಬಾರದು ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ಗೆ ಐಟಿ ನೋಟಿಸ್​ ಆರ್ಥಿಕ ಭಯೋತ್ಪಾದನೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಗದಗದಲ್ಲಿ ಮಾತನಾಡಿದ ಅವರು,  ಕಾನೂನು ಪ್ರಕಾರ ಇದ್ದರೆ ಕಾಂಗ್ರೆಸ್​ ನಾಯಕರಿಗೆ ಭಯ ಯಾಕೆ? ಕಾನೂನು ವಿರುದ್ಧ ಮಾಡಿದಾಗ ಮಾತ್ರ ಭಯ ಇರುತ್ತದೆ ಎಂದರು.

ಅಲ್ಲದೆ, ಆದಾಯ ತೆರಿಗೆ ಇಲಾಖೆ ತನ್ನ ಕೆಲಸ ಮಾಡುತ್ತಿದೆ. ಹಲವಾರು ವರ್ಷಗಳಿಂದ ನೋಟಿಸ್ ಕೊಟ್ಟರೂ ಇವರು ಉತ್ತರ ಕೊಟ್ಟಿಲ್ಲ ಎಂದರು.

ಐಟಿ ನೋಟಿಸ್ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ಸಿದ್ದರಾಮಯ್ಯ ಅವರು, ತೆರಿಗೆ ಭಯೋತ್ಪಾದನೆ ಯಿಂದ ಕಾಂಗ್ರೆಸ್ ಪಕ್ಷವನ್ನು ಮಣಿಸಬಹುದೆಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಭ್ರಮೆ. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಭಾರತೀಯ ಜನತಾ ಪಕ್ಷ ಸ್ವಾಯತ್ತ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮೊದಲಾದ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಣಿಯಲು ಹೊರಟಿದೆ.

ಈ ಹುನ್ನಾರದ ಭಾಗವಾಗಿಯೇ ನಮ್ಮ ಪಕ್ಷದ ವಿರುದ್ದ ‘’ತೆರಿಗೆ ಭಯೋತ್ಪಾದನೆ’’ಯಲ್ಲಿ ತೊಡಗಿದೆ. ಈ ರೀತಿ ನಮ್ಮ ಪಕ್ಷವನ್ನು ದುರ್ಬಲಗೊಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಆ ಪಕ್ಷದ ಭ್ರಮೆ ಎಂದಿದ್ದರು.

Ashika S

Recent Posts

ಜೊಮ್ಯಾಟೊದಲ್ಲಿ ಆರ್ಡರ್‌ : ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌

ಜೊಮ್ಯಾಟೊದಿಂದ ಆರ್ಡರ್‌ ಮಾಡಿದ ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌ ಸಿಕ್ಕಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

11 mins ago

ಅಂಜಲಿ‌ ಕೊಲೆಗೆ ಪೊಲೀಸರೇ ಹೊಣೆ : ದಿಂಗಾಲೇಶ್ವರ ಸ್ವಾಮೀಜಿ ಆರೋಪ

ಅಂಜಲಿ ಕೊಲೆಗೆ ಪೊಲೀಸರೆ ಹೊಣೆ ಅವರ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಕಿಡಿ ಕಾರಿದ್ದಾರೆ. ಅಂಜಲಿ…

15 mins ago

ಗೆಲ್ಲುತ್ತೀ ಎಂದು ಪಂಜುರ್ಲಿ ದೈವ ಹೇಳಿದೆ, ಹಿಂದೆ ಸರಿಯೊಲ್ಲ: ರಘುಪತಿ ಭಟ್

ಮೂರು ಬಾರಿ ಶಾಸಕನಾಗಿದ್ದ ತಮಗೆ ಪಕ್ಷದಲ್ಲಿ ಸಿಗಬೇಕಾಗಿದ್ದ ಮನ್ನಣೆ ಗೌರವ ಸಿಕ್ತಿಲ್ಲ. ಆದ್ದರಿಂದ ತಾನು ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ…

24 mins ago

ಕಾರಿನಲ್ಲಿ ಮಗು ಮರೆತು ಮದ್ವೆಗೆ ಹೋದ ದಂಪತಿ : ನರಳಿ ಪ್ರಾಣ ಬಿಟ್ಟ ಕಂದಮ್ಮ

ನಗರದ ಕೋಟದಲ್ಲಿ ಕಾರಿನಲ್ಲೇ ಮಗುವನ್ನು ಮರೆತು ದಂಪತಿ ಮದುವೆಗೆ ತೆರಳಿದ್ದು ಮಗು ನರಳಿ ನರಳಿ ಕಾರಿನಲ್ಲೆ ಪ್ರಾಣ ಬಿಟ್ಟಿರುವ ದಾರುಣ…

34 mins ago

ʼಸಮಸ್ಯೆ ಬಗೆಹರಿಸಿ ಇಲ್ಲ ಒಂದು ತೊಟ್ಟು ವಿಷ ಕೊಡಿʼ ಎಂದ ಗ್ರಾಮಸ್ಥರು

ಕಳೆದ 20 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು,…

34 mins ago

ಮೃತಪಟ್ಟ ನವಜಾತ ಶಿಶುವನ್ನು ಚರಂಡಿಗೆ ಎಸೆತ

ಮಹಿಳೆಯೊಬ್ಬಳು ಮೃತಪಟ್ಟ ನವಜಾತ ಶಿಶುವನ್ನು ಚರಂಡಿಗೆ ಎಸೆದು ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಲಕೊಪ್ಪರ ಗ್ರಾಮದಲ್ಲಿ ನಡೆದಿದೆ.

49 mins ago