News Karnataka Kannada
Sunday, April 14 2024
Cricket
ಗದಗ

ಗ್ರಾಮ ಸ್ವರಾಜ್ಯ ನಮ್ಮೆಲ್ಲರ ಮನಸ್ಸಿಗೆ ತುಂಬಾ ಹತ್ತಿರವಾದ ವಿಷಯ: ಡಾ ಅತುಲ್ ಜೈನ್

Gadaga Programme
Photo Credit : News Kannada

ಗದಗ: ನಮ್ಮೆಲ್ಲರ ಮನಸ್ಸಿಗೆ ತುಂಬಾ ಹತ್ತಿರವಾದ ವಿಷಯ ಈ ಗ್ರಾಮ ಸ್ವರಾಜ್ಯ. ನಾವು ಇದರಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ನಾವು ಈಸ್ವರಾಜ್ಯ ಎಂಬ ಪರಿಕಲ್ಪನೆಯ ಸಾಕ್ಷಾತ್ ಧರ್ಶನವನ್ನು ಮಾಡಿದ್ದೇವೆ. ನಮ್ಮ ಪ್ರಕಾರ ಸ್ವರಾಜ್ಯ ಅನ್ನುವಂಥದ್ದು ಅಧಿಕಾರವಲ್ಲ. ನಮ್ಮ ಸ್ವಯಂ ಆಡಳಿತ, ನಾವು ಎನ್ನುವುದು ಸ್ವರಾಜ್ಯದಲ್ಲಿ ಮುಖ್ಯವಾಗಿರುತ್ತದೆ ಎಂದು ನವದೆಹಲಿಯ ದೀನ್ ದಯಾಳ್ ಸಂಶೋಧನಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಅತುಲ್ ಜೈನ್ ಹೇಳಿದರು.

ದೀನ ದಯಾಳ್ ಪಂಡಿತರ ಪ್ರಕಾರ ಸ್ವಾರಾಜ್ಯ ಎನ್ನುವುದು ಒಂದು ಪತ್ರ. ಇದು ಸ್ವರಾಜ್ಯದ ಒಂದು ಅದ್ಭುತ ಸ್ವರೂಪವಾಗಿದೆ. ಒಂದು ಸಮಾಜದ, ರಾಷ್ಟ್ರದ ಬೆಳವಣಿಗೆಗೆ ಪತ್ರವು ಮುಖ್ಯ ಪಾತ್ರವಹಿಸುತ್ತದೆ. ಸ್ವರಾಜ್ಯ ಎಂದಾಗ ಜನಸಾಮಾನ್ಯರ ಮನಸ್ಸಿನಲ್ಲಿ ಕೇವಲ 73- 74ನೇ ಕಾಯಿದೆಗಷ್ಟೇ ಸೀಮಿತವಾಗಿದೆ. ಆದರೆ ನಿಜವಾಗಿಯೂ ನಮ್ಮ ಸ್ವರಾಜ್ಯ ಎನ್ನುವುದು ನಮ್ಮ ಸ್ವಭಾವದ ಮೇಲೆ ಆಧರಿತವಾಗಿದೆ ಎಂದರು.

ನಾನು ಈ ಸಭಾ ಕಾರ್ಯಕ್ರಮದಲ್ಲಿ ಪ್ರಬುದ್ಧ ಭಾರತದ ವಿರಾಟ ರೂಪವನ್ನು ಸೂಕ್ಷ್ಮ ರೂಪದಲ್ಲಿ ನೋಡಿ ಮನಸ್ಸಿಗೆ ಬಹಳ ಆನಂದವಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ ವಿಷ್ಣುಕಾಂತ. ಎಸ್ ಚಟಪಲ್ಲಿ ವಿಶ್ವವಿದ್ಯಾಲಯದ ಗುರಿ ಹಾಗೂ ಇಲ್ಲಿ ನಡೆಯುವಂತಹ ವಿಚಾರಗಳಲ್ಲಿ ವ್ಯತ್ಯಾಸಗಳಿಲ್ಲ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಒಳಗೊಂಡಿದೆ ಎಂದರು.

ಕರ್ನಾಟಕದಲ್ಲಿ ಪಂಚಾಯತ್ ರಾಜ್ ಚಿಂತನೆಯನ್ನು ಆರಂಭಿಸಿದ ಮತ್ತು ವಿಶ್ವವಿದ್ಯಾನಿಲಯದ ಸ್ಥಾಪನೆ ಮಾಡಿದ ಒಂದು ವಿಶಿಷ್ಟ ಸ್ಥಾನ ಪಡೆದಿದೆ ಎಂದು ಹೇಳಿದರು.

ಗ್ರಾಮೀಣ ಬೇರು ಜಾಗತಿಕ ಮೇರು ನಮ್ಮ ಧ್ಯೇಯ ವಾಕ್ಯವಾಗಿದೆ.ಯಾವುದೇ ಸಂದರ್ಭ ಬಂದರೂ ನಾವು ನಮ್ಮ ಬೇರನ್ನು ಅಥವಾ ಬೆಳೆದು ಬಂದ ಹಾದಿಯನ್ನು ಮರೆಯಬಾರದು ಅದೇರೀತಿ ಎತ್ತರಕ್ಕೆ ಬೆಳೆಯಬೇಕು.

ವಿಶ್ವವಿದ್ಯಾಲಯಗಳಲ್ಲಿ ಸಾಮಾನ್ಯವಾಗಿ ಯಾವುದಾದರೂ ಒಂದು ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ವಿಚಾರಗಳು ಸಂಶೋಧನಾ ಕಾರ್ಯಗಳು ತರಬೇತಿ ಕಾರ್ಯಗಳು ಎಲ್ಲವೂ ಒಂದೇ ಕಡೆ ದೊರಕುತ್ತದೆ ಎಂದು ನುಡಿದರು.

ಕಾರ್ಯಕ್ರಮದ ಆರಂಭದಲ್ಲಿ ಸಬರ್ಮತಿ ಆಶ್ರಮದಲ್ಲಿ  ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ನಡೆಸಲಾಯಿತು. ಸಭಾಕಾರ್ಯಕ್ರಮದಲ್ಲಿ ಎಂಬಿಎ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಕಾರ್ಯಕ್ರಮವು ಜರುಗಿತು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರೊ ಬಸವರಾಜ ಎಲ್ ಲಕ್ಕಣ್ಣವರ ಸ್ವಾಗತ ಕೋರಿದರು. ಪ್ರಜ್ಞಾ ಪ್ರವಾಹ ದಕ್ಷಿಣ ಕೇ0ದ್ರ ಸಂಯೋಜಕರು ರಘುನಂದನ್ ಪ್ರಸ್ತಾವಿಕವಾಗಿ ಮಾತನಾಡಿದರು

ಕಾರ್ಯಾಗಾರದ ಮೊದಲನೇ ಗೋಷ್ಠಿಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ತಂಡವಾರು ಚರ್ಚೆಯನ್ನು ‌ ನಡೆಸಲಾಯಿತು. ಅದೇ ರೀತಿ ಎರಡನೇ ಗೋಷ್ಠಿಯಲ್ಲಿ ತಂಡವರು ವಿಷಯ ಪ್ರಸ್ತುತಿಯನ್ನು ನಡೆಸಲಾಯಿತು. ಮೂರನೇ ಗೋಷ್ಠಿಯಲ್ಲಿ ಮುಕ್ತ ಚಿಂತನೆಗೆ ಅವಕಾಶವನ್ನು ಕಲ್ಪಿಸಿಕೊಡಲಾಯಿತು.

ಹಾಗೆ ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಅಬ್ದುಲ್ ಖಾದರ್ ನಡಕಟ್ಟಿ ಯವರಿಗೆ ಸನ್ಮಾನ ಹಾಗೂ ಕಾರ್ಯಯೋಜನೆ ಪ್ರಸ್ತುತಿಯನ್ನು ನಡೆಸಲಾಯಿತು. ಕಾರ್ಯಾಗಾರದ ಸಂಯೋಜಕರು ಡಾ. ಸಂತೋಷ್ ಶೆಟ್ಟಿ ವಂದಿಸಿದರು.

ಡಾ ಸುನಂದ ಆರ್ ಕಳಕಣ್ಣವರ ಇವರು ವಂದಿಸಿ. ಲಿಂಗರಾಜ ನೀಡು ಮಣಿ ಹಾಗೂ ನಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು