ನವಲಗುಂದ: ಸಾಮೂಹಿಕ ವಿವಾಹದಿಂದ ಅನಗತ್ಯವಾದ ದುಂದು ವೆಚ್ಚಗಳಿಗೆ ಕಡಿವಾಣ – ಕೆ.ಎನ್.ಗಡ್ಡಿ

ನವಲಗುಂದ: ಸಾಮೂಹಿಕ ವಿವಾಹಗಳನ್ನು ಮಾಡುವುದರಿಂದ ಅನಗತ್ಯವಾದ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು ಎಂದು ಮಾಜಿ ಸಚಿವ ಕೆ.ಎನ್.ಗಡ್ಡಿ ಅಭಿಪ್ರಾಯಪಟ್ಟರು.

ಸಮಾಜಿ ಸೇವೆ, ಜನಪರ ನಾಡಿಮಿಡತಕ್ಕಾಗಿ ಶ್ರಮಿಸಿದ ದಿ ಸಿದ್ಧಲಿಂಗಪ್ಪ (ಅಣ್ಣಪ್ಪ) ಸಹೋದರ ದಿ ಮಹಾಂತಪ್ಪ ವೀರಪ್ಪ ಜಿನಗಾ ಇವರ ಸ್ಮರಣಾರ್ಥ ಅಂಗವಾಗಿ ನಗರ ಜವಳಿ ಪೇಟೆಯಲ್ಲಿ ನೆಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಇಂದು ಕೋವೀಡ್ ನಂತರ ಆರ್ಥಿಕ ಪರಿಸ್ಥಿತಿ ಸರಿಯಲ್ಲ ಕಾರಣ ಇಂತಹ ಸಾಮೂಹಿಕ ವಿವಾಹಗಳನ್ನು ಆಯೋಜನೆ ಮಾಡಿದ್ದು ಒಳ್ಳೆಯ ವಿಚಾರ ಎಂದರು. ನವ ಜೋಡಿಗಳು ಇಂದು ಹೊಸ ಜೀವನದ ಪ್ರಯಾಣ ಸುಖಕರವಾಗಲಿ ನೂರುಕಾಲ ಬಾಳಲಿ ಎಂದರು.

ಸಾನಿಧ್ಯವಹಿಸಿ ಮಾತನಾಡಿದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ನವ ಜೋಡಿಗಳ ಬದಕು ಹರುಷ ತರಲಿ, ಬಾಳಿನಲ್ಲಿ ಸಂಶಯ ಎಂಬ ಪದ ದೂರ ಇಟ್ಟು ತವರು ಮನೆ ಹೆಸರು ತರವ ಕಾರ್ಯ ಮಾಡಿ ಎಂದು ನವ ವಧುಗಳಿಗೆ ಕಿವಿಮಾತು ಹೇಳಿದರು. ಸತೀಶ್ ಜಿನಗಾ ಕುಟುಂಬದ ಕಾರ್ಯ ಶ್ಲಾಘನೀಯ. ಇನ್ನು ಹೆಚ್ಚು ಸಮಾಜಿಕ ಸೇವೆಗಳನ್ನು ಮಾಡುವ ಶಕ್ತಿ ಕೊಡಲಿ ಎಂದರು.

ದಿವ್ಯ ಸಾನಿಧ್ಯ ಹಿರೇಮಠದ ಸಿದ್ದೇಶ್ವರ ಮಹಾಸ್ವಾಮಿಜಿಗಳು, ರಾಮದುರ್ಗದ ಶಾಂತವೀರ ಮಹಾಸ್ವಾಮಿಗಳು, ನಾಗಲಿಂಗ ಸ್ವಾಮಿ ಮಠದ ವಿರೇಂದ್ರ ಮಹಾಸ್ವಾಮಿಗಳು, ಹಾವನೂರ ದಳವಾಯಿಮಠದ ಶಿವಕುಮಾರ ಮಹಾಸ್ವಾಮಿಗಳು ಸಾನುಧ್ಯವಹಿಸಿ ಮಾತನಾಡಿದರು.

ಪತ್ರಿಕೆ ಹಂಚುವ ಪ್ರತಿಭಾವಂತ ವಿದ್ಯಾರ್ಥಿ ಸಂಜು ಗುರಿಕಾರ ೧೦ ಸಾವಿರದ ಚಕ್ ನ್ನು ಸತೀಶ್ ಹಾಗೂ ಮಾಂತೇಶ ಜಿನಗಾ ವಿತರಿಸಿದರು. ಸಮಾಜದ ಸೇವೆ ಮಾಡಿದ ಗಣ್ಯರಾದ ಎಸ್ ಎಮ್ ಪಟ್ಟಣಶೆಟ್ಟಿ, ಅಣ್ಣಪ್ಪ ಬಾಗಿ, ಬಸಪ್ಪ ಬೆಂಡಿಗೇರಿ, ನಿಂಗಪ್ಪ ಚವಡಿ, ವಿಜಯಕಮಾರ ಅತಗೂರ, ಸನ್ಮಾನಿಸಲಾಯಿತು. ಗುರುವಂದನಾ ಸಮಿತಿಯಿಂದ ಮಾತಶ್ರೀ ಪಾರ್ವತಿ ಜಿನಗಾ ಮಕ್ಕಳಾದ ಸತೀಶ್ ಹಾಗೂ ಮಾಂತೇಶ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಸಂಗು ಜಿನಗಾ, ಪ್ರಕಾಶ ಸಿಗ್ಗಿ, ಚಿನ್ನಪ್ಪ ಕೆಸರಪ್ಪನವರ, ಫಕ್ಕಿರೇಶ ಹೂಗಾರ, ಶಿವಕುಮಾರ ಹಿರೇಮಠ, ಸೌಕತ್ ಕಲಾರಿ, ಈರಣ್ಣ ಚವಡಿ, ಅಜಯ್ ಜಿನಗಾ, ಸುನೀಲ ದೋಂಗಡೆ, ಮಂಜು ಅರಕೇರಿ ಉಸ್ಮಾನ ಬಬರ್ಚಿ, ಜಯಾ ಜಿನಗಾ, ಎ.ಬಿ ಕೊಪ್ಪದ, ಗಣೇಶ ಹೋಳೆಯಣ್ಣವರ, ಮಾಂತೇಶ ನಾಗಾವಿ, ಅನೀಲ ಶಿದ್ರಾಮಶೆಟ್ಟರ, ಮಹಿಳಾ ಕಲ್ಯಾಣ ಇಲಾಖೆಯ ಶಂಕ್ರಮ್ಮ ಹಿರೇಮಠ, ಮಂಜುಳಾ ಒಂಟೇಲಿ, ಭಾಗವಹಿಸಿದ್ದರು.

Ashika S

Recent Posts

ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

14 mins ago

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸಂಸ್ಕಾರ ಕಲಿಸಿ : ರವಿ ಶಾಸ್ತ್ರಿ

ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ…

37 mins ago

ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಲೋಕಾರ್ಪಣೆ

ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ…

41 mins ago

ʼಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನ ಎದುರಿಸಬೇಕಾಗುತ್ತದೆʼ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಬೇಕಾಗಬಹುದು ಎಂದು ಶಿವಸೇನಾ…

47 mins ago

ವಕೀಲ ಬಾಬಶೆಟ್ಟಿ ಹತ್ಯೆಗೆ 5 ಲಕ್ಷ ಸುಪಾರಿ: ಪ್ರಮುಖ ಆರೋಪಿ ಬಂಧನ

ಐದು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು, ವಕೀಲನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು…

59 mins ago

ದೇಶಾದ್ಯಂತ 24 ಗಂಟೆ ವಿದ್ಯುತ್‌ ಪೂರೈಕೆ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

2024ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌…

1 hour ago