ಹುಬ್ಬಳ್ಳಿ-ಧಾರವಾಡ

ಗಣೇಶ ಹಬ್ಬ ಹಿನ್ನಲೆ ಈದ್ ಮಿಲಾದ್ ಮೆರವಣಿಗೆ ಮುಂದು ಹಾಕಿದ ಮುಸ್ಲಿಂ ಭಾಂದವರು

ಹುಬ್ಬಳ್ಳಿ: ಶಾಂತಿ ಸೌಹಾರ್ದತೆಗಾಗಿ ಮೆರವಣಿಗೆ ಮುಂದಕ್ಕೆ ಹಾಕಲು ಕಮೀಟಿ ನಿರ್ಧಾರ ಮಾಡಲಾಗಿದೆ. ಇದೇ 28 ಕ್ಕೆ ಪವಿತ್ರ ಈದ್ ಮಿಲಾದ್ ಹಬ್ಬ ಇದೆ ಅಂದೇ ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ ಮಾಡಲಾಗುವುದು 28 ಕ್ಕೆ ಹಬ್ಬ ಆಚರಿಸಲಾಗುವುದು ಆದರೆ 29 ಕ್ಕೆ ಮರೆವಣಿಗೆ ಮಾಡಲಾಗುವುದು ಎಂದು ಅಂಜುಮನ್ ಕಮೀಟಿ ನಿರ್ಧಾರ ಮಾಡಿದೆ ಎಂದು ಅಂಜುಮನ್ ಕಮೀಟಿ ಅಧ್ಯಕ್ಷ ಯುಸೂಫ್ ಸವಣೂರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಬೇಡಾ ಎಂದು ತೀರ್ಮಾನಕ್ಕೆ ಬಂದ ಅಂಜುಮನ್ ಕಮೀಟಿಯಲ್ಲಿ ನಿರ್ಧಾರ ಮಾಡಲಾಗಿದೆ. ಮುಸ್ಲಿಂ ಗುರುಗಳು, ಅಂಜುಮನ್ ಕಮೀಟಿಯ 52 ಸದಸ್ಯರಿಂದ ಮೀಟಿಂಗ್ ಮಾಡಿ ತೀರ್ಮಾನ ಮಾಡಲಾಗಿದೆ. ಈದ್ ಮಿಲಾದ್ ನಮಗೆ ದೊಡ್ಡ ಹಬ್ಬ. ಮೆರವಣಿಗೆ ‌ಮುಂದಕ್ಕೆ ಹಾಕಿರೋದಾಗಿ ಖಚಿತ ಪಡಿಸಿದೆ. ಆದ್ರೆ ಮೆರವಣಿಗೆಗೆ ಯಾವುದೇ ಸಮಯ ನಿರ್ಬಂಧ ಇಲ್ಲ ಎಂದು ಇಗಾಗಲೇ ಪೊಲೀಸರಿಗೆ ಹೇಳಿದ್ದೇವೆ.

ಯಾಕಂದ್ರೆ ನಾವು ಬಿಜೆಪಿ ಸರ್ಕಾರದಲ್ಲಿ ಬಹಳ ಸಫರ್ ಆಗಿದ್ದೇವೆ. ಶಾಂತಿ ಕಾರಣಕ್ಕಾಗಿ ನಾವು ಮೆರವಣಿಗೆ ಮುಂದಕ್ಕೆ ಹಾಕುತ್ತಿದ್ದೇವೆ. ಗಣೇಶ ವಿಸರ್ಜನೆ ವೇಳೆ ಪರಸ್ಪರ ಗಲಾಟೆ ಆಗಬಾರದು ಅನ್ನೋ ಕಾರಣಕ್ಕೆ ಮೆರವಣಿಗೆ ಮುಂದಕ್ಕೆ ಹಾಕಿದ್ದೇವೆ. ನಾವು ದೊಡ್ಡ ನಿರ್ಧಾರ ತಗೆದುಕೊಂಡಿದ್ದೇವೆ ಎಂದ ಅವರು ಹಬ್ಬ ಮಾಡಲಿ, ಅವರಿಗೆ ಗಣೇಶ ಹಬ್ಬದ ಶುಭಾಶಯಗಳು. ನಮ್ಮ‌ ಮುಸ್ಲಿಂ ಸಮುದಾಯ ಎಲ್ಲರೂ ಒಪ್ಪಿಗೆ ಕೊಟ್ಟಿದ್ದಾರೆ ಎಂದರು.

Ashika S

Recent Posts

ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ರೋಟರಿಗೆ ಸಿಲುಕಿ ಬಾಲಕ ಸಾವು

ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ರೋಟರಿಗೆ ಬಾಲಕ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

10 mins ago

ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ಗೆ ಎನ್‌ ಶಶಿಕುಮಾ‌ರ್ ನೇಮಕ ಸಾಧ್ಯತೆ

ಅವಳಿ ನಗರದಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟ್ ಕಡಿವಾಣ ಹಾಕುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನ‌ರ್ ರೇಣುಕಾಸುಕುಮಾರ ಅವರನ್ನು ಬದಲಾವಣೆ ಮಾಡಬೇಕು ಅಂತ…

27 mins ago

ಜರ್ಮಿನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್​ ರೇವಣ್ಣ

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು…

48 mins ago

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

1 hour ago

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

1 hour ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

2 hours ago