ಕುಂದಗೋಳ: ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ – ಎಂ.ಆರ್. ಪಾಟೀಲ

ಕುಂದಗೋಳ: ನಾನು ಕೆಲಸ ಮಾಡಿ, ನಂತರ ಜನರ ಮುಂದೆ ಹೋಗಿದ್ದೆ. ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ. ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ನೂತನ ಶಾಸಕ ಎಂ.ಆರ್. ಪಾಟೀಲ ಹೇಳಿದ್ದಾರೆ.

ಕುಂದಗೋಳ ಪಟ್ಟಣದ ಶಿವಾನಂದ ಮಠದ ಸಭಾಂಗಣದಲ್ಲಿ ಕುರುಬ ಸಮಾಜದಿಂದ ಗುರುವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕುರುಬ ಸಮಾಜ ಸೇರಿದಂತೆ ಎಲ್ಲಾ ಸಮಾಜದ ಮುಂಖಡರು ನನ್ನ ಕೈ ಹಿಡಿದಿದ್ದೀರಿ. ತಮ್ಮ ಸಮಸ್ಯೆಗಳಾಗಲಿ, ಇತರೆ ಕೆಲಸ ಕಾರ್ಯಗಳೇ ಇರಲಿ ದಿನದ 24 ಗಂಟೆಯೂ ಸ್ಪಂದಿಸುತ್ತೇನೆ’ ಎಂದು ಭರವಸೆ ನೀಡಿದರು.

ಪಟ್ಟಣದ ಹಿರೇಮಠದ ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ, ಶಿವಾನಂದ ಮಠದ ಶ್ರೀ ಮಹಾಂತಸ್ವಾಮಿಗಳು ಆಶೀರ್ವಚನ ನೀಡಿದರು. ಇದೇ ವೇಳೆ ಪಟ್ಟಣದ ಕನಕದಾಸ ಯುವ ಸದಸ್ಯರು, ಮುಸ್ಲಿಂ ಮುಖಂಡರು, ತಾಲ್ಲೂಕಿನ ಹಲವಾರು ಗ್ರಾಮದ ನಾಗರಿಕರು ಶಾಸಕರನ್ನು ಸನ್ಮಾನಿಸಿದರು. ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಚುಳಕಿ, ಗುಳಪ್ಪ ಹಾಲಿ, ಕಲ್ಲಪ್ಪ ಬಂಡಿವಡ ಇತರರು ಉಪಸ್ಥಿತರಿದ್ದರು.

Ashika S

Recent Posts

ದುಡಿದ ಕಾರ್ಯಕರ್ತರಿಗೆ ಅಭಿನಂದನೆ, ಗೆಲ್ಲುವ ವಿಶ್ವಾಸ ಇದೆ: ಬಿಜೆಪಿ ಅಭ್ಯರ್ಥಿ ಕೋಟ

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಯಾಗಿ ಎಲ್ಲಾ ಎಂಟು ಕ್ಷೇತ್ರಗಳಲ್ಲಿ ಓಡಾಡಿದ್ದು ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಾರ್ಯಕರ್ತರು…

11 mins ago

ಜಗತ್ತಿನ ಏಕೈಕ ಸುಳ್ಳು ಪ್ರಧಾನಿ ನರೇಂದ್ರ ಮೋದಿ -ಸಿ.ಎಮ್.ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. 19 ವರ್ಷದಲ್ಲಿ ಮಾರುಕಟ್ಟೆಯಲ್ಲಿ ಸುಳ್ಳು ಮಾರಿಕೊಂಡು ಹೊರಟಿದ್ದಾರೆ. ಅವರನ್ನು ನಂಬಿ…

15 mins ago

ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಮೇಯರ್ ವಾಹನದಲ್ಲಿ 2 ಕೋಟಿ ರೂ.ಪತ್ತೆ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅತ್ಯಂತ ಸನ್ನದ್ಧ ಸ್ಥಿತಿಯಲ್ಲಿರುವ ಇಲ್ಲಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಾರೊಂದರಲ್ಲಿ ಸಾಗಾಟ ಮಾಡುತ್ತಿದ್ದ 2…

28 mins ago

ಕುಡಿದ ನಶೆಯಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿ ಪರಾರಿ: ಆರೋಪಿಗಳು ಪೊಲೀಸರ ವಶಕ್ಕೆ

ಬಾರ್‌ನಲ್ಲಿ ಕುಡಿಯಲು ಹೋದವರು ಮತ್ತಿನಲ್ಲಿ ಗಲಾಟೆ ಮಾಡಿಕೊಂಡು ನಶೆಯ ಗುಂಗಿನಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

38 mins ago

ಕೇಳಿದಷ್ಟು ಬರ ಪರಿಹಾರ ನೀಡಿಲ್ಲ ಎಂದು ನಾಳೆ ವಿಧಾನಸೌಧದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ನೀಡಿದೆ. ಕೇಳಿದಷ್ಟು ಬರ ಪರಿಹಾರ ನೀಡಿಲ್ಲ ಎಂದು ನಾಳೆ…

1 hour ago

ಅಂಬುಲೆನ್ಸ್‌ನ ನಿಯಂತ್ರಣ ತಪ್ಪಿ ಸರಣಿ ಅಪಘಾತ: ಚಾಲಕ ಪೊಲೀಸರ ವಶಕ್ಕೆ

ಅಂಬುಲೆನ್ಸ್‌ ಚಾಲಕನಿಗೆ ನಿಯಂತ್ರಣ ಸಿಗದೆ ಮೂರು ಕಾರು ಮತ್ತು ಒಂದು ಬೈಕ್‌ಗೆ ಸರಣಿಯಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ…

2 hours ago