News Karnataka Kannada
Thursday, April 18 2024
Cricket
ಹುಬ್ಬಳ್ಳಿ-ಧಾರವಾಡ

ಜೈಲುಗಳೇ ಈಗ ಉಗ್ರಗಾಮಿ ತರಬೇತಿ ಕೇಂದ್ರಗಳಾಗಿವೆ: ಪ್ರಮೋದ್ ಮುತಾಲಿಕ್ ಆರೋಪ

You won't build a house worth Rs 10 crore: Muthalik at Soujanya protest
Photo Credit : News Kannada

ಧಾರವಾಡ: ಜೈಲುಗಳಲ್ಲಿ ಪಾಕಿಸ್ತಾನಿ, ಅಫಘಾನಿಸ್ತಾನಿ ಹಾಗೂ ಬಾಂಗ್ಲಾ ದೇಶದ ಅಪರಾಧಿಗಳನ್ನು ಇಡಲಾಗಿದೆ. ಅವರು ಜೈಲಿನ ಒಳಗಡೆ ಇದ್ದುಕೊಂಡೇ ಮುಸ್ಲಿಂ ಯುವಕರಿಗೆ ತರಬೇತಿ ನೀಡುತ್ತಿದ್ದಾರೆ. ಇದು ಆಘಾತಕಾರಿ ಸಂಗತಿ. ಜೈಲುಗಳೇ ಈಗ ಉಗ್ರಗಾಮಿ ತರಬೇತಿ ಕೇಂದ್ರಗಳಾಗಿವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿರುವ ಅವರು, ನಿನ್ನೆ ಬೆಂಗಳೂರಿನಲ್ಲಿ ಐದು ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಜೈಲಿನಲ್ಲಿ ಇರುವ ಈ ವ್ಯವಸ್ಥೆ ಬದಲಾಗಬೇಕು ಹಾಗೂ ಅವರ ಮೇಲೆ ಕ್ರಮ ಆಗಬೇಕು. ನಿನ್ನೆ ಸಿಕ್ಕ ಉಗ್ರರಿಗೆ 2017-18ರಲ್ಲಿ ಜೈಲಿನಲ್ಲಿ ಇದ್ದವರಿಂದಲೇ ತರಬೇತಿ ಆಗಿದೆ. ಅಲ್ಲಿಂದ ಉಗ್ರರ ಪರಿಚಯವಾಗಿ ಅವರನ್ನು ಕೃತ್ಯದಲ್ಲಿ ತೊಡಗಿಸುವ ಕೆಲಸವಾಗಿದೆ. ಬೆಳಗಾವಿ ಜೈಲಿನಿಂದಲೇ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಬಂದಿತ್ತು ಎಂದರು.

ಹೀಗೆ ಬೆದರಿಕೆ ಹಾಕಿದವರ ನಂಟು ಉಗ್ರರ ಜೊತೆ ಇತ್ತು ಎಂದು ಗೊತ್ತಾಗಿದೆ. ಜೈಲಿನಲ್ಲಿರುವ ಈ ಕೃತ್ಯ ತಡೆಯಬೇಕು. ಈಗ ಬಂಧಿಸಿರುವ ಉಗ್ರರ ಬಳಿ ಇರುವ ವೆಪನ್ಸ್‌ಗಳು ಉತ್ತರ ಪ್ರದೇಶದಿಂದ ಬಂದಿವೆ. ಯುಪಿಯಲ್ಲಿ ಕೂಡ ಐಸಿಸ್ ಉಗ್ರನ ಬಂಧನವಾಗಿದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಸಮೀಪದಲ್ಲಿದೆ. ಹೀಗಾಗಿ ಕುಕೃತ್ಯ ನಡೆಸುವ ಮತ್ತು ಭಯ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ನಿನ್ನೆ ಬಂಧನವಾದ ಉಗ್ರರು ಸ್ಥಳ ಸ್ಫೋಟ ಅಷ್ಟೇ ಅಲ್ಲ, ವ್ಯಕ್ತಿಗಳನ್ನು ಕೂಡ ಮುಗಿಸುವ ಯೋಚನೆ ಮಾಡಿದ್ದರು. ಇವರ ಮೇಲೆ ಉಗ್ರ ಕ್ರಮ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟಿಕರಣದ ಜೊತೆ ಉಗ್ರರ ತುಷ್ಟಿಕರಣ ಮಾಡಬಾರದು. ಪಕ್ಷ, ಜಾತಿ-ಮತ ತೋರದೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು