ನಾನು ನಾಮಪತ್ರ‌ ಮಾತ್ರ ವಾಪಸು ತೆಗೆದುಕೊಂಡಿದ್ದೇನೆ: ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ: 20 ದಿನಗಳಿಂದ ನಾವು ಹೋರಾಟ ಪ್ರಾರಂಭ ಮಾಡಿದ್ವಿ. ಹೋರಾಟಕ್ಕೆ ಧರ್ಮಯುದ್ದ ಅಂತಾ ಕರೆದಿದ್ದೆವು. ಸ್ವಾಭಿಮಾನದ ಚುನಾವಣೆ ಎಂದು ನಾವು ಹೇಳಿದ್ದೆವು, ನಾನು ನಾಮಪತ್ರ ವಾಪಸ್ ಪಡೆದಿದ್ದೇನೆ. ಆದ್ರೆ ಧರ್ಮಯುದ್ದದಿಂದ ಹಿಂದೆ ಸರಿದಿಲ್ಲ ಎಂದ ಫ.ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಾಮಪತ್ರ ಸಲ್ಲಿಕೆ ಮಾಡಿದ ನಂತರವೂ ಎರಡು ಪಕ್ಷದ ನಾಯಕರು ನಮ್ಮ ಜೊತೆ ಚರ್ಚೆ ಮಾಡಿದ್ರು. ನಿನ್ನೆ ಸಿಎಮ್, ಡಿಸಿಎಮ್, ಮಾಜಿ ಸಿಎಮ್ ಕೂಡ ಮಾತಾಡಿದ್ರು. ಎಲ್ಲ ವಿಚಾರಕ್ಕೆ ನಾನು ಉತ್ತರ ಕೊಟ್ಟಿದ್ದೆ.

ನಮ್ಮ ಗುರುಗಳು ನನಗೆ ನಾಮಪತ್ರ ವಾಪಸ್ ಪಡೆಯಲು ಸೂಚನೆ ಕೊಟ್ಟಿದ್ರು. ಹೀಗಾಗಿ ವಾಪಸ್ ಪಡೆದಿದ್ದೇನೆ. ನಮ್ಮ ಧರ್ಮಯುದ್ದ ಮುಂದುವರೆಯುತ್ತದೆ. ಚುನಾವಣೆ ಒಂದು ಹೊರತು ಪಡಿಸಿ ಎಲ್ಲ ವರ್ಗದಲ್ಲಿ ಧರ್ಮಯುದ್ದ ಮುಂದುವರೆಯುತ್ತದೆ. ನಮ್ಮ ಧರ್ಮಯುದ್ಧಲ್ಲಿ ಯಾರೂ ಬೇಡ ಅಂತಾ ಹೇಳಿದ್ವಿ ಅವರ ವಿರುದ್ದ ಹೋರಾಟ ಮುಂದುವರಿಯುತ್ತೆ ಎಂದರು.

ಎರಡು ಪಕ್ಷದವರೂ ಸಪೋರ್ಟ್ ಮಾಡಿ ಅನ್ನೋ ಬೇಡಿಕೆ ಇದೆ.ಹಿಂದೆ ಯಾರೂ ನನಗೆ ಸಪೋರ್ಟ್ ಮಾಡಿದ್ದರೋ, ಅವರ ಜೊತೆ ನಾನು ಸಭೆ ಮಾಡ್ತೀನಿ. ರಾಜಕೀಯದಲ್ಲಿ ಬದಲಾವಣೆ ಸರ್ವೆ ಸಾಮಾನ್ಯ.

ನನ್ನನ್ನು ಹಿಂದಕ್ಕೆ ಸರಿಸೋ ವ್ಯಕ್ತಿ ರಾಜಕೀಯ ರಂಗದಲ್ಲಿ‌ ಇಲ್ಲ ಎಂದಿದ್ದೆ, ಈಗಲೂ ಅದಕ್ಕೆ ಬದ್ದ. ನಾನು ರಾಜಕೀಯ ನಾಯಕರ ಮಾತು ಕೇಳಿ ವಾಪಸ್ ಪಡೆದಿಲ್ಲ. ನನ್ನ ಗುರಿ ಮುಟ್ಟುವರೆಗೂ ಹೂಮಾಲೆ ಧರಿಸುವುದಿಲ್ಲ. ಧರ್ಮಯುದ್ದದಲ್ಲಿ ಜಯ ಸಿಗೋ ವರೆಗೂ ಮಾಲೆ ಧರಿಸಲ್ಲ. ನಾನು ಬಿಜೆಪಿ ಅಭ್ಯರ್ಥಿಗೆ ವಿರೋಧ ಮಾಡಿದ್ದೇನೆ.

ರಾಜ್ಯದ ನಾಯಕರು ಅವರ ಪರ ಮಾತಾಡಿದ್ರು. ನಿನ್ನೆ ಮದ್ಯರಾತ್ರಿ ನನ್ನ ಜೊತೆ ಬಿಜೆಪಿ ಶಾಸಕರಿದ್ದಾರೆ. ನನ್ನನ್ನು ಬೆಂಬಲಿಸಿದ ಯಾವುದೇ ವ್ಯಕ್ತಿಯನ್ನು ನಾನು ಬಿಟ್ಟುಕೊಡಲ್ಲ. ಬಿಟ್ಟುಕೊಡೋ ಪ್ರಸಂಗ ಬರಲ್ಲ. ಅವರನ್ನು ರಕ್ಷಣೆ ಮಾಡೋ ತಾಕತ್ ನನಗೆ ಇದೆ. ಮಠಾಧಿಪತಿ ಸ್ವಾತಂತ್ರ್ಯ ನಲ್ಲ, ಈ ಮಾತು ನಾನು ಹೇಳಿದ್ದೆ ಎಂದರು.

Chaitra Kulal

Recent Posts

ಬಸವೇಶ್ವರ ಹಾಗೂ ಮಹಾನಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಆಚರಣೆ

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಜಗಜ್ಯೋತಿ ಬಸವೇಶ್ವರ ಹಾಗೂ ಮಹಾನಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ತಹಸೀಲ್ದಾ‌ರ್ ಮಲ್ಲಿಕಾರ್ಜುನ ಹೆಗ್ಗಣ್ಣವರವರು…

14 mins ago

ಶ್ರೀನಿವಾಸ್ ಪ್ರಸಾದ್ ಗೆ ನುಡಿ ನಮನ ಸಲ್ಲಿಸಿ ಕಣ್ಣೀರಿಟ್ಟ ಬದನವಾಳು ಗ್ರಾಮಸ್ಥರು

ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಸಂಸದ ದಿವಂಗತ ವಿ. ಶ್ರೀನಿವಾಸ್ ಪ್ರಸಾದ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪ್ರಸಾದ್ ನೆನೆದು…

26 mins ago

ಮೈಸೂರಿನ ಸ್ಪಂದನ ಸೇವಾ ಸಂಸ್ಥೆಯಿಂದ ʼಅಕ್ಷಯ ಅನ್ನʼ ಕಾರ್ಯಕ್ರಮ

ಅಕ್ಷಯ ತೃತೀಯ ಅಂದ್ರೆ ಜನರು ಒಡವೆ ವಸ್ತ್ರ ತಗೋಬೇಕು. ಇದರಿಂದ ನಮ್ಮ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಈ‌…

38 mins ago

ಮರುಬಿಡುಗಡೆಗೆ ತಯಾರಾಗಿದೆ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿದ ‘ಎ’ ಸಿನೆಮಾ

ಚುನಾವಣೆ ಹಾಗೂ ಐಪಿಎಲ್ ಕಾರಣದಿಂದ ಹೊಸ ಸಿನಿಮಾಗಳ ಬಿಡುಗಡೆ ಇಲ್ಲವಾದ ಕಾರಣ ಮತ್ತೆ ಹಳೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರುಗಳು…

42 mins ago

ಬಸವೇಶ್ವರ ಉದ್ಯಾನವನಕ್ಕೆ ‘ಸಾಂಸ್ಕೃತಿಕ ನಾಯಕ’ ಮರು ನಾಮಕರಣ

ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಬಸವೇಶ್ವರ ಉದ್ಯಾನವನಕ್ಕೆ 'ಸಾಂಸ್ಕೃತಿಕ ನಾಯಕ', ಮರು ನಾಮಕರಣದ ಉದ್ಘಾಟನೆಯನ್ನು ಕರ್ನಾಟಕ ಕಾಲೇಜಿನ ಪೌರ ಕಾರ್ಮಿಕ ಮಹಿಳೆ…

48 mins ago

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಸಾಗಾಟ: ಚಾಲಕನಿಗೆ ತರಾಟೆ

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ದ ಘಟನೆಯೊಂದು ಉಡುಪಿ ಜಿಲ್ಲೆಯ ಗಡಿಭಾಗ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ.

58 mins ago