ನಾಳೆಯವರೆಗೆ ಕಾಯುತ್ತೇನೆ , ಹೈಕಮಾಂಡ್‌ಗೆ ಗಡುವು ನೀಡಿದ ಶೆಟ್ಟರ್‌ ಹೇಳಿದ್ದೇನು

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜೊತೆ ಮಾತುಕತೆ ನಡೆಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶೆಟ್ಟರ್, ನಾಳೆವರೆಗೆ ಗಡುವು ನೀಡಿದ್ದೇನೆ. ಟಿಕೆಟ್ ಸಿಗುವುದೆಂಬ ವಿಶ್ವಾಸವಿದೆ. ಬಿಜೆಪಿ ನಾಯಕರು ಹುಬ್ಬಳ್ಳಿ ಜನತೆ ಭಾವನೆಗಳನ್ನು ಗೌರವಿಸುತ್ತಾರೆ ಎಂದು ಭಾವಿಸಿದ್ದೇನೆ. ನಾಳೆ ಏನಾದ್ರೂ ವ್ಯತಿರಿಕ್ತವಾದರೆ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ನನ್ನ ನಾಯಕತ್ವದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಪಕ್ಷ ಸಹ ನನಗೆ ಎಲ್ಲರೀತಿಯ ಗೌರವದ ಸ್ಥಾನ ನೀಡಿದೆ. ಅದಕ್ಕಾಗಿ ಭಾರತೀಯ ಜನತಾ ಪಕ್ಷಕ್ಕೆ ಚಿರಋಣಿಯಾಗಿರುತ್ತೇನೆ ಎಂದರು.

ನಾನು ಏಳನೇ ಬಾರಿ ಸ್ಪರ್ಧಿಸುವ ಸಂದರ್ಭದಲ್ಲಿಯೂ  ಜನರ ಸ್ಪಂದನೆ ಉತ್ತಮವಾಗಿದೆ ಜನರು ಅತೀ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸುವುದಾಗಿ ಹೇಳಿದ್ದರು. ಎರಡು ದಿನಗಳ ಹಿಂದೆ ನಡ್ಡಾ ಅವರು ಕರೆ ಮಾಡಿ ದೆಹಲಿಗೆ ಬರುವಂತೆ ಕರೆದಿದ್ದರು. ನಾನು ದೆಹಲಿಗೆ ಹೋಗಿ ಚರ್ಚೆ ಮಾಡಿದ್ದೇನೆ.

ನಡ್ಡಾ ಅವರಿಗೆ ಇನ್ನೊಂದು ಬಾರಿ ಅವಕಾಶ ಕೇಳಿದ್ದೇನೆ. ನನಗೆ ಪಕ್ಷದಿಂದ ಟಿಕೆಟ್ ಸಿಗುವ ಭರವಸೆಯಿದೆ. ಯಡಿಯೂರಪ್ಪ ಅವರು ಕೂಡ ನಿಮ್ಮಂತ ನಾಯಕರು ಇರಬೇಕು ಅಂತ ಹೇಳಿದ್ದಾರೆ. ನಾನು ಅಭಿವೃದ್ಧಿ ಸಲುವಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ.

ಇನ್ನು ನನಗೆ ಟಿಕೆಟ್ ಸಿಗದೆ ಕಾರಣ ಟೀಕೆ ಮಾಡುವ ಅವಶ್ಯಕತೆವಿಲ್ಲ. ಟಿಕೆಟ್ ಸಿಗದ ಹಿನ್ನಲೆ ರಾಜ್ಯದ ಬೇರೆ ಬೇರೆ ಭಾಗದಿಂದ ಜನರು ಬಂದು ಭೇಟಿಯಾಗುತ್ತಿದ್ದಾರೆ. ಅವರ ಅಭಿಮಾನಕ್ಕೆ ನಾನು ಚಿರಋಣಿ ಅಧಿಕಾರ ಶಾಶ್ವತವಲ್ಲ. ಅಭಿಮಾನಿಗಳ ಪ್ರೀತಿ ವಿಶ್ವಾಸ ನನಗೆ ಮುಖ್ಯವೆಂದರು.

 

 

ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಒಬ್ಬ ಶಾಸಕನಾಗಿ ಕೆಲಸ ಮಾಡಲು ಇನ್ನೂ ಅವಕಾಶವಿದೆ. ಶೆಟ್ಟರ್‌ಗೆ ಟಿಕೆಟ್ ಇಲ್ಲಾ ಅನ್ನೋ ವಾತಾವರಣ ಯಾಕೆ ಬಂತು ಗೊತ್ತಿಲ್ಲ. ಯಾವುದೇ ಕಳಂಕ ನನ್ನ ಮೇಲೆ ಇಲ್ಲ. ‘ಬಿಜೆಪಿ ಟಿಕೆಟ್ ನೀಡಲಿ ನೀಡದಿರಲಿ, ಕಣಕ್ಕಿಳಿಯುವುದು ನಿಶ್ಚಿತ’ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸಿ, ಶಕ್ತಿ ಕೊಡುವ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಕೊಟ್ಟಿರುವ ಅವಕಾಶಕ್ಕೆ ಧನ್ಯವಾದ ಹೇಳುತ್ತೇನೆ. ಅಪೂರ್ಣ ಕೆಲಸ ಪರಿಪೂರ್ಣ ಮಾಡಲು ಮತ್ತೊಂದು ಅವಕಾಶ ಕೊಡಬೇಕು’ ಎಂದು ತಿಳಿಸಿದರು.

ಸಾಯಂಕಾಲದವರೆಗೆ ಕಾಯ್ದು ನೋಡುತ್ತೇನೆ. ಸಿಎಂ ನನ್ನ ಜೊತೆ ಹಲವು ವಿಚಾರಗಳ ಚರ್ಚೆ ಮಾಡಿದ್ದಾರೆ. ಕಳೆದ ಮೂರು ತಿಂಗಳಿಂದ ನನ್ನ ರಾಜಕೀಯ ಜೀವನದ ಕೆಟ್ಟ ದಿನಗಳು ಬಂದಿವೆ. ಕೆಟ್ಟ ದಿನ ಹೊರ ಹೋಗಿ ಒಳ್ಳೆ ದಿನಗಳು ಬರುತ್ತದೆ ಅನ್ನೋ ನಿರೀಕ್ಷೆಯಿದೆ. ಪ್ರಹ್ಲಾದ ಜೋಶಿಯವರು ಕೇಂದ್ರ ನಾಯಕರ ಪ್ರತಿನಿಧಿಯಾಗಿ ಬಂದಿದ್ದರು. ಅವರ ಕೇಂದ್ರ ನಾಯಕರ ಪ್ರತಿನಿಧಿಯಾಗಿ ಬಂದಿದ್ದರು.

ಅವರ ಬಳಿ ನಮ್ಮ ವಿಚಾರಗಳನ್ನು ತಿಳಿಸಿದ್ದೇವೆ, ಸಂಜೆಯವರೆಗೆ ಕಾಯಲು ಹೇಳಿದ್ದಾರೆ. ಸಂಜೆವರೆಗೆ ನೋಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಏನೇ ಆದರೂ ಚುನಾವಣಾ ಕಣದಲ್ಲಿರೋದು ನಿಶ್ಚಿತ’ ಎಂದ ಜಗದೀಶ್ ಶೆಟ್ಟರ್ ಹೇಳಿದರು.

ನಾಳೆ ಏನಾದ್ರೂ ವ್ಯತಿರಿಕ್ತವಾದರೆ ಮುಂದಿನ ತೀರ್ಮಾನ : 

Sneha Gowda

Recent Posts

ಆರ್‌ಸಿಬಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೇ ಮೈದಾನದಿಂದ ತೆರಳಿದ ಧೋನಿ..!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್​ಗಳಿಂದ…

9 mins ago

ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ಬಂದಿದೆ ಹಸಿರು ಕಳೆ

ಬೇಸಿಗೆಯ ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ವರುಣನ ಕೃಪೆಯಿಂದ ಹಸಿರು ಕಳೆ ಬಂದಿದೆ.  ಜನವರಿಯಿಂದ ಏಪ್ರಿಲ್ ತನಕವೂ ಮಳೆ ಸುರಿಯದ…

20 mins ago

ಆರ್​ಸಿಬಿಗೆ ಟ್ವೀಟ್​ ಮೂಲಕ ವಿಜಯ್​ ಮಲ್ಯ ಅಭಿನಂದನೆ

ಶನಿವಾರ ತಡರಾತ್ರಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಲಿ ಚಾಂಪಿಯನ್​…

30 mins ago

ತಾಯಿಯ ಶವದ ಜೊತೆಗೆ ನಾಲ್ಕು ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು

ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ…

36 mins ago

ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಜೀವಕ್ಕೆ ಗಂಡಾಂತರ

ಇಂದಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹೀಗೆ ರಕ್ತದೊತ್ತಡ ಸಮಸ್ಯೆ ಕಾಡುವುದಕ್ಕೆ ಕಾರಣಗಳು ಹಲವು. ಅದರಲ್ಲಿಯೂ ಮುಖ್ಯವಾಗಿ ನಮ್ಮ ಜೀವನ…

40 mins ago

ಬೆಂಗಳೂರಿನಲ್ಲಿ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚಳ ವಿದ್ಯುತ್ ಬಳಕೆ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಗೃಹ ಬಳಕೆಗೆ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚುವರಿಯಾಗಿ ಬಳಕೆಯಾಗಿದೆ.

42 mins ago