News Karnataka Kannada
Wednesday, May 01 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ರಾಜೀನಾಮೆ ಸಲ್ಲಿಕೆ ನಂತರ ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ – ಶೆಟ್ಟರ್

After submitting his resignation, he will discuss with well-wishers and take the next step: Shettar
Photo Credit : News Kannada

ಹುಬ್ಬಳ್ಳಿ: ಕಾಗೇರಿ ಅವರ ಬಳಿ ಸಮಯ ಕೇಳಿದ್ದು, ಬರಲು ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಹಾಗಾಗಿ ಶಿರಸಿಗೆ ತೆರೆಳುತಿದ್ದೇನೆ. ಈಗಾಗಲೇ ರಾಜ್ಯಾಧ್ಯಕ್ಷರ ಜೊತೆ ಮಾತಾಡಿದ್ದೇನೆ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಕೊಡುತ್ತೇನೆ. ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆಂದು ಹೇಳಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತಾನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನಾಯಕರಿಂದ ಮತ್ತೆ ಯಾವುದೇ ಕರೆ ಬಂದಿಲ್ಲ, ಕೊನೆಯ ವಿಸ್ಮಯ ನಡೆಯಲ್ಲ. ಒಂದು ಹೆಜ್ಜೆ ಮುಂದೆ ಇಟ್ಟಿದ್ದೀನಿ, ಹಿಂದೆ ಸರಿಯಲ್ಲ ಎಂದರು.

ಕಾಂಗ್ರೆಸ್ ಸೇರ್ಪಡೆ ವಿಚಾರ ಸೇರಿದಂತೆ ಎಲ್ಲಾ ಆಪ್ಷನ್ ಓಪನ್ ಇದೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಿತೈಷಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಮೋದಿ, ಅಮಿತ್ ಷಾಗೆ ಗ್ರೌಂಡ್ ಲೇವಲ್ ನಲ್ಲಿ ಏನು ನಡೀತಿದೆ ಗೊತ್ತಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿಗಳು, ಇಲ್ಲಿನ ನಾಯಕರು ಬಿಜೆಪಿ ಅಧಿಕಾರಕ್ಕೆ ತರುವುದು ಬೇಡ ಅಂತಾ ತೀರ್ಮಾನ ಮಾಡಿದಂತಿದೆ.

ಕಾಂಗ್ರೆಸ್ ನ ಮುಖಂಡರು ಯಾರೂ ಸಂಪರ್ಕಿಸಿಲ್ಲ, ಆದರೆ ಪ್ರತಿನಿಧಿ ಕಳಿಸಿದ್ದಾರೆ. ಕೆಲವರ ಹಿತಕ್ಕಾಗಿ ಬಿಜೆಪಿ ಬಲಿಕೊಡ್ತಾ ಇದ್ದಾರೆ. ಹಿರಿಯರಿಗೆ ಗೌರವ ಕೊಡದೇ ಇರುವುದು ಬಿಜೆಪಿಗೆ ಮುಳುವಾಗುತ್ತೆ. ನಾನು ಎಲ್ಲಾ ಜಾತಿ, ಧರ್ಮದ ಜನರನ್ನು ಸಮಾನವಾಗಿ ಕಂಡಿದ್ದೇನೆ. ಬಿಜೆಪಿ ಮುಖಂಡರಿಗೆ ಹಿರಿಯರ ಜೊತೆ ಮಾತಾಡುವ ಸೌಜನ್ಯವಿಲ್ಲ. ಟೇಕ್ ಇಟ್ ಗ್ರಾಂಟೆಡ್ ಎನ್ನುವ ಹಾಗೆ ಮಾತಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಪರೋಕ್ಷವಾಗಿ ವ್ಯವಸ್ಥಿತವಾಗಿ ವೀರಶೈವ ಲಿಂಗಾಯಕತರನ್ನ ತುಳಿಯುವ ಕೆಲಸವಾಗುತ್ತಿದೆ. ಹಿರಿಯ ನಾಯಕರನ್ನ ಕಟ್ಟಿ ಹಾಕುವ ಕೆಲಸಗಳನ್ನ ಮಾಡಲಾಗುತ್ತಿದೆ. ನಾನು ಕಾನೂನು ವ್ಯಾಪ್ತಿಯೊಳಗೆ ಇದ್ದೇನೆ ಹೀಗಾಗಿ ನನಗೆ ಯಾವುದೇ ಭಯವಿಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು