News Karnataka Kannada
Tuesday, April 16 2024
Cricket
ಹುಬ್ಬಳ್ಳಿ-ಧಾರವಾಡ

ಜನಪದ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ನೀಡುವ ಮೂಲ ಆಕರಗಳು

ನಮ್ಮ ನಾಡಿನ ಮೂಲ ಜನಪದ ಸಾಹಿತ್ಯ, ಸಂಸ್ಕೃತಿಗಳು ವ್ಯಕ್ತಿಯಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುತ್ತವೆ. ಅವು ಹೃದಯವಂತಿಕೆ ಬೆಳೆಸುವ ಮೂಲ ಆಕರಗಳು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು.
Photo Credit : News Kannada

ಧಾರವಾಡ: ನಮ್ಮ ನಾಡಿನ ಮೂಲ ಜನಪದ ಸಾಹಿತ್ಯ, ಸಂಸ್ಕೃತಿಗಳು ವ್ಯಕ್ತಿಯಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುತ್ತವೆ. ಅವು ಹೃದಯವಂತಿಕೆ ಬೆಳೆಸುವ ಮೂಲ ಆಕರಗಳು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಘಟಕ ಸಂಯುಕ್ತವಾಗಿ ಆಯೋಜಿಸಿದ್ದ ಜಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ, ಮಾತನಾಡಿದರು.

ಚಿತ್ರಕಲೆ, ಹಾಡು, ನೃತ್ಯ, ಜಾನಪದ ಕಲೆ, ಅಭಿನಯ, ಸಂಗೀತ ನುಡಿಸುವ ಕಲೆಗಳಿಂದ ಮನಸ್ಸು ಆಹ್ಲಾದಕರವಾಗುತ್ತದೆ. ಕೆಲಸದಿಂದ ಆಗುವ ಒತ್ತಡ ಕಡಿಮೆ ಮಾಡಿ, ಖುಷಿ, ನೆಮ್ಮದಿ ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರಲ್ಲಿ ಸಾಂಸ್ಕೃತಿಕ ಹವ್ಯಾಸಗಳು ಇರಬೇಕು ಎಂದು ಅವರು ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ ಸುಮಾರು 20 ಲಕ್ಷ ಜನರಿದ್ದಾರೆ. ಅವರಿಗೆ ಅಗತ್ಯವಿರುವ ವಿವಿಧ ಸೇವೆಗಳನ್ನು ತಲುಪಿಸಲು ಸುಮಾರು 20 ಸಾವಿರ ಸರಕಾರಿ ನೌಕರರಿದ್ದಾರೆ. ನೌಕರರ ಸಂಖ್ಯೆ ಕಡಿಮೆ ಇರುವದರಿಂದ ಸಾಮಾನ್ಯವಾಗಿ ಕಾರ್ಯ ಒತ್ತಡ, ಸೇವೆಯಲ್ಲಿ ವಿಳಂಬ ಉಂಟಾಗುತ್ತದೆ. ಆದರೂ ಜಿಲ್ಲೆಯ ನೌಕರರು ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ನೌಕರಿಗೆ ಸೇರಿದ ಬಹುದಿನಗಳ ನಂತರ ಆಟ,ಓಟದಲ್ಲಿ ಮನಸ್ಸು ಬಿಚ್ಚಿ ಮಾತಾಡುವ, ಮುಕ್ತವಾಗಿ ಭಾಗವಹಿಸುವ ಅವಕಾಶ ಕಲ್ಪಿಸುವುದು ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು. ಇದರಲ್ಲಿಯೂ ಸಹ ಧಾರವಾಡ ಜಿಲ್ಲೆಯ ನೌಕರರು ಪ್ರತಿ ವರ್ಷ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ, ಬಹುಮಾನ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ನುಡಿದರು.

ಮುಖ್ಯ ಅತಿಥಿಗಳಾಗಿದ್ದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಮಾತನಾಡಿ, ಸಾಂಸ್ಕೃತಿಕ ಕಲೆ, ನಟನೆ, ಹಾಡುಗಾರಿಕೆ ಜೀವನದ ಆರಂಭದಿಂದಲೇ ನಮ್ಮಲ್ಲಿ ಬೆಳೆದು ಬಂದಿರುತ್ತವೆ. ಸಾಂಸ್ಕೃತಿಕ ಪ್ರತಿಭೆಗಳು ಬೆಳೆದು ಬರಲು ಶೈಕ್ಷಣಿಕ ಜೀವನ ವೇದಿಕೆ ಆಗಿರುತ್ತದೆ. ಆದ್ದರಿಂದ ಶಾಲಾ ಶಿಕ್ಷಣ ಇಲಾಖೆ ಮಕ್ಕಳು ತಮ್ಮಲ್ಲಿನ ಸೂಪ್ತ ಪ್ರತಿಭೆಗಳನ್ನು ಪ್ರದರ್ಶಿಸಲು ಅನುವಾಗುವಂತೆ ಸಾಂಸ್ಕೃತಿಕ ಸ್ಪರ್ಧೆ, ಪ್ರತಿಭಾಕಾರಂಜಿ ಕಾರ್ಯಕ್ರಮಗಳನ್ನು ಸಂಘಟಿಸುತ್ತದೆ ಎಂದರು.

ಕೆಲವರಲ್ಲಿ ಸರಕಾರಿ ನೌಕರಿಗೆ ಸೇರಿದ ಮೇಲೆ ಹುದ್ದೆಗೆ ತಕ್ಕಂತೆ ಬಿಗುಮಾನ, ದೊಡ್ಡಸ್ತಿಕೆ ಮತ್ತು ರಿಜರ್ವ್ ಆಗಿ ಇರುವ ಗುಣ ಬೆಳೆಯುತ್ತವೆ. ಆದರೆ ಅಭಿನಯ, ಕಲೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ಬಂದಾಗ ಅವುಗಳನ್ನು ಬದಿಗಿಟ್ಟು ಮುಕ್ತವಾಗಿ ಬೇರೆಯುತ್ತಾರೆ. ಇದು ಸಾಂಸ್ಕೃತಿಕ ರಂಗದ ಶಕ್ತಿ ಎಂದು ಹೇಳಿ, ಅವರು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ತಪ್ಪ ಹೊಸಮನಿ ಅತಿಥಿಗಳಾಗಿ ಭಾಗವಹಿಸಿದ್ದರು. ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಾಂಸ್ಕೃತಿಕ ಕಾರ್ಯದರ್ಶಿ ಪಿ.ಬಿ. ಕುರಬೆಟ್ಟ ಸ್ವಾಗತಿಸಿದರು. ಮಲ್ಲಿಕಾರ್ಜುನ ಸೊಲಗಿ ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ ಬಾಣದ ವಂದಿಸಿದರು.

ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಯಡಳ್ಳಿ, ರಾಜ್ಯ ಪರಿಷತ್ತ ಸದಸ್ಯ ದೇವಿದಾಸ ಶಾಂತಿಕರ, ಗೌರವಾಧ್ಯಕ್ಷ ರಮೇಶ ಲಿಂಗದಾಳ, ಕಲಘಟಗಿ ತಾಲೂಕು ಅಧ್ಯಕ್ಷ ರಮೇಶ ಹೊಲ್ತಿಕೋಟಿ, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ ಹಾಗೂ ಇತರರು ಇದ್ದರು.

ಸುಮಾರು 1300 ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಪುರುಷರಿಗೆ 135 ಮತ್ತು ಮಹಿಳೆಯರಿಗೆ 101 ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು