ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಖಾತೆಗೆ 7.50 ಲಕ್ಷ ಹಣ ಬಂದಿದ್ದು ನೀವೂ ವ್ಯವಹಾರ ನಡೆಸಿ ಲಾಭ ಮಾಡಿಕೊಳ್ಳಿ ಎಂದು ದುಷ್ಕರ್ಮಿಗಳಿಂದ ಪೋಸ್ಟ್ ಮಾಡಲಾಗಿದೆ.
ಜೊತೆಗೆ, ಕ್ರಿಸ್ಟಿನಾ ಪೆನಾಟೆ ಎಂಬುವವರ ಸಲಹೆ ಪಡೆಯಬಹುದು ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ತಂದೆಯ ಫೇಸ್ಬುಕ್ ಖಾತೆ ಹ್ಯಾಕ್ ಆಗಿರುವ ಮಾಹಿತಿ ನೀಡಿದ ಪುತ್ರ ಸಂಕಲ್ಪ ಶೆಟ್ಟರ್, ಯಾರೂ ಕೂಡ ಹಣ ಹಾಕಬಾರದು ಎಂದು ನೆಟ್ಟಿಗರಿಗೆ ಮನವಿ ಮಾಡಿದ್ದಾರೆ.