ಧಾರವಾಡ: ಇಂದು ಜಾನುವಾರುಗಳ ವಧೆ , ಸಾಗಾಣಿಕೆ ನಿಷೇಧ

ಧಾರವಾಡ: ಜೂನ್ 29ರಂದು ಜಿಲ್ಲೆಯಾದ್ಯಂತ ಆಚರಿಸಲಾಗುವ ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವ ಕುರಿತಂತೆ ಅನಧಿಕೃತವಾಗಿ ಗೋವು, ಕರುಗಳು, ಒಂಟೆಗಳು ಮತ್ತು ಇತರೆ ಜಾನುವಾರುಗಳ ಅಕ್ರಮ ಸಾಗಾಣಿಕೆ, ವಧೆ ಮಾಡುವುದನ್ನು ತಡೆಯುವ ಕುರಿತು ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಸರ್ಕಾರದ ಆದೇಶಗಳ ಅನುಸಾರ ಚರ್ಚಿಸಿ ಗೋವು, ಕರುಗಳು, ಒಂಟೆಗಳು ಮತ್ತು ಇತರೆ ಜಾನುವಾರುಗಳ ಅಕ್ರಮ ಸಾಗಾಣಿಕೆ , ವಧೆ ಮಾಡುವುದನ್ನು ನಿಷೇಧಿಸಲಾಗಿದೆ.

ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆ, 1960ರ ಅಡಿಯಲ್ಲಿ ಯಾವುದೇ ಪ್ರಾಣಿಯ ಮೇಲೆ ಕ್ರೌರ್ಯ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಈ ಕಾಯ್ದೆಯ ಆರ್ಟಿಕಲ್ ಸಂಖ್ಯೆ-48, 48(ಎ) ಮತ್ತು 51 ಎ(ಜಿ) ರ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಧಾರವಾಡ ಜಿಲ್ಲಾ ಪ್ರಾಣಿದಯಾ ಸಂಘದ ಪದನಿಮಿತ್ತ ಸದಸ್ಯ ಕಾರ್ಯದರ್ಶಿಗಳು ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sneha Gowda

Recent Posts

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

42 mins ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

1 hour ago

ನಂಜನಗೂಡು ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ: ವಿದ್ಯಾರ್ಥಿನಿ ಬಾಂಧವ್ಯ ತಾಲೂಕಿಗೆ ಪ್ರಥಮ ‌

ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ ಬಂದಿದ್ದು, ನಂಜನಗೂಡಿನ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಬಾಂಧವ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ…

1 hour ago

ಲೋಕಸಭೆ ಚುನಾವಣೆ: ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು…

2 hours ago

ಕುಡಿಯುವ ನೀರಿನ ಸಮಸ್ಯೆ ನಿವಾರಣೆ: ಮಲಪ್ರಭಾ ಕಾಲುವೆಗೆ ಮೇ 14 ರಿಂದ 23 ರವರೆಗೆ ನೀರು

ಮೇ 14 ರಿಂದ 23 ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ,…

2 hours ago

ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್‌ ಮಾಕನೂರು ಬಂಧನ

ಎಸ್‌ಸಿ, ಎಸ್‌ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯನ್ನು ವಿಡಿಯೋ ಜಾಹೀರಾತು ಪ್ರಕಟಿಸಿತ್ತು. ಈ ವಿಡಿಯೋ…

2 hours ago