ಹುಬ್ಬಳ್ಳಿ-ಧಾರವಾಡ

ಧಾರವಾಡ: ಮಾಜಿ ಸಿಎಂಗೆ ಕ್ಷೇತ್ರ ಸಿಗಲಾರದಂತಹ ಪರಿಸ್ಥಿತಿ ನಿರ್ಮಾಣ – ಪ್ರಹ್ಲಾದ ಜೋಶಿ ವ್ಯಂಗ್ಯ

ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯನವರು ಈಗ ಕೋಲಾರ ಕ್ಷೇತ್ರ ಬಿಟ್ಟು ವರುಣಾದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಕ್ಷೇತ್ರವೇ ಸಿಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೇ ಕ್ಷೇತ್ರ ಸಿಗಲಾರದಂತಹ ಸ್ಥಿತಿ ನಿರ್ಮಾಣವಾಗಿರುವಾಗ ಜನರು ಆ ಪಕ್ಷದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಿ.ಟಿ.ರವಿ ಅವರು ಲಿಂಗಾಯತರ ಬಗ್ಗೆ ಹೇಳಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರವಿ ಅವರು ಲಿಂಗಾಯತರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ವೀಡಿಯೋ ಬೋಗಸ್ ಇದೆ. ಈಗಾಗಲೇ ಅದರ ಬಗ್ಗೆ ಫ್ಯಾಕ್ಟ್ ಚೆಕ್ ಆಗಿದೆ. ಕಾಂಗ್ರೆಸ್‌ನವರು ಇಂತಹ ಸುಳ್ಳು ವೀಡಿಯೋ ಬಿಟ್ಟು ಜನರನ್ನು ಮರುಳು ಮಾಡಲು ಹೊರಟಿದ್ದಾರೆ.

ಅನೇಕ ಮಾಧ್ಯಮಗಳಲ್ಲಿ ಅದು ಫೇಕ್ ಎಂದು ಬಂದಿದೆ. ಅದರ ಬಗ್ಗೆ ಚರ್ಚೆ ಅನಗತ್ಯ. ಏಕೆಂದರೆ ಸಿ.ಟಿ.ರವಿ ಪ್ರಬುದ್ಧ ರಾಜಕಾರಣಿ. ಅವರು ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅವರು ಈ ರೀತಿ ಹೇಳಲು ಸಾಧ್ಯವೇ ಇಲ್ಲ. ನಮಗೆ ಎಲ್ಲ ಸಮುದಾಯದ ಬಗ್ಗೆ ಗೌರವ ಇದೆ. ವಿಶೇಷವಾಗಿ ಲಿಂಗಾಯತರು ಹಾಗೂ ಬಸವಣ್ಣನವರ ಬಗ್ಗೆ ಗೌರವವಿದೆ ಎಂದರು.

ಶಾಸಕ ಅರವಿಂದ ಬೆಲ್ಲದ ಅವರು ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಲ್ಲದ ಅವರ ಮೇಲೆ ಇಂತಹ
ಊಹಾಪೋಹಗಳು ಮೊದಲಿನಿಂದಲೂ ಇವೆ. ಅವರು ಬೆಳಿಗ್ಗೆ ನನ್ನ ಜೊತೆ ಮಾತನಾಡಿದ್ದಾರೆ. ಅದೆಲ್ಲವೂ ಸಂಪೂರ್ಣ ಸುಳ್ಳು. ಅವರು ಯಾರನ್ನೂ ಭೇಟಿಯಾಗಿಲ್ಲ ಎಂದರು.

Ashika S

Recent Posts

ಎಸಿಯಲ್ಲಿ ಬೆಂಕಿ: ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

9 mins ago

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮೃತ್ಯು

ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

33 mins ago

ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ

ಸಾಣೂರಿನ ಲೈನ್ ಮ್ಯಾನ್  ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…

47 mins ago

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

1 hour ago

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

1 hour ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

2 hours ago