ಧಾರವಾಡ: ಭರ್ಜರಿ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್

ಧಾರವಾಡ : ತಾಲೂಕಿನ ಗಂಭ್ಯಾಪುರ ಗ್ರಾಮದಲ್ಲಿ ಯುವಕರೊಂದಿಗೆ ಬೈಕ್ ರಾಲಿ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್ ಮತಯಾಚಿಸಿದರು.

ನಂತರ ಮಾತನಾಡಿದ ಅವರು, ನಾನು ಕೂಡ ಬೈಕ್ ಚಲಾಯಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ತಮ್ಮಬಾಲ್ಯದಲ್ಲಿ ಬೈಕ್‌ಗಳ ಮೂಲಕ ಪ್ರಯಾಣ ಮಾಡುತ್ತಿದ್ದ ಘಟನೆಗಳನ್ನು ಯುವಕರೊಂದಿಗೆ ಹಂಚಿಕೊಂಡರು.ಯುವಕರೊಂದಿಗೆ ಮಾತನಾಡುತ್ತ ನಿತ್ಯದಲ್ಲಿ ಆಟ ವ್ಯಾಯಮಗಳ ಮೂಖಾಂತರ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಿ ಎಂದು ಹೇಳುವುದರ ಮೂಲಕ ತಮಗೆ ಮತ ನೀಡುವಂತೆ ಮನವೊಲಿಸಿದರು.

ಕ್ಷೇತ್ರದ ಅಭಿವೃದ್ಧಿ ಯುವಕರ ಮೇಲೆ ನಿಂತಿದ್ದು,ಯುವಕರು ಮನಸ್ಸು ಮಾಡಿದಲ್ಲಿ ಬದಲಾವಣೆ ಮಾಡಲು ಸಾಧ್ಯ ಸಂವಿಧಾನ, ಸಮಾಜದ ರಕ್ಷಣೆ ಮಾಡುವಂತ ವ್ಯಕ್ತಿಗಳಿಗೆ ಬೆಂಬಲಿಸಿ ಕೋಮಗಲಭೆ, ಮತಿಯ ಗಲಭೆ ಇನ್ನಿತರ ಗಲಭೆಗಳನ್ನು ಪ್ರೇರೇಪಿಸುವ ದೂರವಿದು ಸಮಾಜದಲ್ಲಿ ಶಾಂತಿ ಕದಡದೆಸರ್ಕಾರ ನಡೆಸುವ ಪಕ್ಷಕ್ಕೆ ಮತಚಲಾಯಿಸಿ ಎಂದರು.

ಗ್ರಾಮಕ್ಕೆ ಆಗಮಿಸುತ್ತಿದಂತೆ ಗ್ರಾಮಸ್ಥರು ಹೂ ತೋರಿ ಸ್ವಾಗತಿಸಿದರು. ಮಹಿಳೆಯರು ತಿಲಕವಿಟ್ಟು ಆರತಿ ಬೆಳಗಿದರು. ವಿವಿಧ ಜನಪದ ಕಲಾಮೇಳಗಳ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಈ ವೇಳೆ ಸಂತೋಷ ಲಾಡ್ ಮನೆ ಮನೆಗೆ ತೆರಳಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿದರು. ಮುಖಂಡರಾದ ಗುರು ಬೆಂಗೇರಿ, ಮಲ್ಲಕಾರ್ಜುನ ಚಿಕ್ಕಮಠ, ನಾಗರಾಜ ಮಾಳಗಿ, ಹನಮಂತ ಕಾಳೆ,ಬಸಪ್ಪ ಮಾಳಗಿ, ಫಕ್ಕಿರಪ್ಪ ದೊಡ್ಡನಿಂಗಪ್ಪನವರ, ಈಶ್ವರ ರೊಟ್ಟಿ, ಮಹಾದೇವಪ್ಪ ಬೆಂಗೇರಿ, ನಿಂಗಪ್ಪ ಅಮರಗೋಳ, ಶಂಕ್ರಪ್ಪ ಬೆಂಗೇರಿ, ವಿರಭದ್ರಯ್ಯ ಚಿಕ್ಕಮಠ, ಬಸವಣ್ಣೆಪ್ಪ ತೋಪಲಗಟ್ಟಿ, ಬಸಪ್ಪರೊಟ್ಟಿ, ಪ್ರವೀಣ ಬೆಂಗೇರಿ ಇತರರು ಉಪಸ್ಥಿತರಿದ್ದರು.

Sneha Gowda

Recent Posts

ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಯಶ್‌ ಹೀರೋಯಿನ್‌!

ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

6 hours ago

ಐದು ಮಂದಿಗೆ ವೆಸ್ಟ್ ನೈಲ್ ಜ್ವರ ಪತ್ತೆ; ಅಲರ್ಟ್ ಆದ ಸರಕಾರ

ವೆಸ್ಟ್ ನೈಲ್ ಫೀವರ್ ನ ಐದು ಪ್ರಕರಣಗಳು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.

6 hours ago

ಆಂಬುಲೆನ್ಸ್ ನೌಕರರ ಮುಷ್ಕರ ತಾತ್ಕಾಲಿಕ ಮುಂದೂಡಿಕೆ

ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಗೆ ಆಗ್ರಹಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

6 hours ago

ಬೆಂಗಳೂರಿನಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಬರ್ಬರ ಹತ್ಯೆ

ನಗರದ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

7 hours ago

ಪಕ್ಷದ ಬ್ಯಾಡ್ಜ್ ಧರಿಸಿ ಮತದಾನ; ಖೂಬಾ ವಿರುದ್ಧ ಪ್ರಕರಣ ದಾಖಲು

ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ…

7 hours ago

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

8 hours ago