News Karnataka Kannada
Sunday, April 14 2024
Cricket
ಹುಬ್ಬಳ್ಳಿ-ಧಾರವಾಡ

ದೇವಾಲಯ ಧ್ವಂಸ ಮಾಡಿ ಜ್ಞಾನ ವ್ಯಾಪಿ ಮಸೀದಿ ನಿರ್ಮಾಣ: ಶೋಭಾ ಕರಂದ್ಲಾಜೆ

Demolition of temple and construction of Gnan Vapi Masjid: Shobha Karandlaje
Photo Credit : News Kannada

ಹುಬ್ಬಳ್ಳಿ: ವಾರಾಣಸಿ, ಕಾಶಿ ಹಿಂದೂಗಳ ಕಾಲದಿಂದ ವೇದಗಳ ಕಾಲದಿಂದ ಪ್ರಾರ್ಥನಾ ಸ್ಥಳ ಶಿವನ ಮೊದಲ ಸ್ಥಾನ ಹಾಗೂ ಮಂದಿರವಾಗಿದೆ. ಮೊಘಲರ ಕಾಲದಲ್ಲಿ ಅಲ್ಲಿ ದಾಳಿ ನಡೆಯಿತು. ಅಲ್ಲಿರುವ ಹಲವಾರು ದೇವಾಲಯಗಳನ್ನು ಧ್ವಂಸ ಮಾಡಿ ಆ ಕಂಬಗಳ ಮೇಲೆ ಮಸೀದಿ ನೀರ್ಮಾಣ ಮಾಡಿದರು. ಕಾಶಿಯ ಜ್ಞಾನ ವ್ಯಾಪಿ ಮಸೀದಿಯೂ ಕೂಡಾ ಇದಾಗಿದೆ. ಈ ನಿಟ್ಟಿನಲ್ಲಿ ಕೋರ್ಟ್ ಜ್ಞಾನ ವ್ಯಾಪಿ ಮಸೀದಿ ಬಗ್ಗೆ ಒಂದು ಒಳ್ಳೆಯ ತೀರ್ಪು ನ್ನು ಕೊಟ್ಟಿದೆ‌ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಹಿರಿಯರು ಜ್ಞಾನ ವ್ಯಾಪಿ ಮಸೀದಿ ಯಲ್ಲಿ ಶಿವನನ್ನು ಆರಾಧನೆ ಮಾಡುತ್ತಿದ್ದರು, ಮತ್ತೇ ಆರಾಧನೆ ಮಾಡಲು ನಮಗೆ ಸಿಗುತ್ತದೆ. ಭಾರತೀಯರು ಬೇರೆ ಧರ್ಮಕ್ಕೆ ವಿರೋಧ ಮಾಡಿದವರಲ್ಲ. ಎಲ್ಲಾ ಧರ್ಮ ಒಟ್ಟಾಗಿ ಹೋದಾಗ ಶಾಂತಿಯಿಂದ ಇರಲು ಸಾಧ್ಯವಾಗುತ್ತದೆ. ಪುರಾತನ ಕಾಲದಲ್ಲಿ ಬಂದಂತಹ ನಮ್ಮ ಜಾಗವನ್ನು ಬಿಟ್ಟುಕೊಟ್ಟು ಅವರ ಜಾಗದಲ್ಲಿ ಅವರ ಪ್ರಾರ್ಥನಾ ಮಂದಿರ ಸ್ಥಾಪನೆ ಮಾಡಿದರೆ ಅವರಿಗೆ ಸಂತೋಷ, ನಮಗೂ ಸಂತಸ ವಾಗುತ್ತದೆ ಎಂದರು.

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದ ಪ್ರಕರಣ ಇಡೀ ದೇಶಕ್ಕೆ ನೋವನ್ನು ತರುವಂತಹದು. ಅಲ್ಲಿ ಜಾತಿ, ಮತ ಸಂಘರ್ಷ ಕೂಡಾ ನಡೆಯುತ್ತಿದೆದೆ. ಪಕ್ಷ ರಾಜಕಾರಣ ದೇಶವನ್ನು ಬಲ ಗೊಳಿಸುವುದಿಲ್ಲ. ಅಲ್ಲಿ ಏನು ಆಗಿದೆ ಎಂಬುದನ್ನು ಚರ್ಚೆ ಮಾಡಿ ಸಲಹೆ ಕೊಡಿ. ಕೇಂದ್ರ ಸರ್ಕಾರ ಸ್ವೀಕಾರ ಮಾಡುತ್ತದೆ ಎಂದರು. ಅದೇ ರೀತಿ ಪಶ್ಚಿಮ ಬಂಗಾಲ ಕೊಲೆ ರಾಜಕಾರಣ ಚರ್ಚೆಯಾಗಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು