News Karnataka Kannada
Thursday, May 02 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಸಾಲ ಮರುಪಾವತಿಸಿದರೂ ಬೆದರಿಕೆ ಕರೆ

He was asked to update the KYC and demanded Rs 3 lakh. Cheated
Photo Credit :

ಹುಬ್ಬಳ್ಳಿ : ಇಲ್ಲಿನ ವಿದ್ಯಾನಗರದ ಗಾವಡೆ ಅವರು ಆನ್‌ಲೈನ್‌ ಆಯಪ್‌ನಿಂದ ಪಡೆದ ₹4.26 ಲಕ್ಷ ಸಾಲಕ್ಕೆ ಬಡ್ಡಿ ಸಮೇತ ₹25 ಲಕ್ಷ ತುಂಬಿದರೂ, ಅವರಿಗೆ ಪದೇ ಪದೇ ಕರೆ ಮಾಡಿ ಹಣ ತುಂಬುವಂತೆ ಮಾನಸಿಕ ಹಿಂಸೆ ನೀಡಿ, ಫೋಟೊವನ್ನು ಅಶ್ಲೀಲ ಚಿತ್ರಕ್ಕೆ ಎಡಿಟ್‌ ಮಾಡುವುದಾಗಿ ಕರೆ ಮಾಡಿ ಬೆದರಿಸಿದ ವ್ಯಕ್ತಿಗಳ ವಿರುದ್ಧ ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾವಡೆ ಅವರು ಲೋನ್‌ಕ್ಯೂಬ್‌ ಆಯಪ್‌ನಲ್ಲಿ ₹8 ಸಾವಿರ ಲೋನ್‌ ಪಡೆದಿದ್ದರು. ಕಂಪನಿ ಅದರ ಬಡ್ಡಿ ಇಟ್ಟುಕೊಂಡು ₹4,900 ಅವರ ಖಾತೆಗೆ ಜಮಾ ಮಾಡಿತ್ತು. ಏಳು ದಿನದೊಳಗೆ ಲೋನ್‌ ಮರು ಪಾವತಿಸುವಂತೆ ತಿಳಿಸಿದಾಗ ಅವರು, ಬೇರೆ ಬೇರೆ ಆಯಪ್‌ಗಳಿಂದ ₹4.26 ಲಕ್ಷ ಸಾಲ ಪಡೆದು, ಅದನ್ನು ಮರಳಿ ಪಾವತಿಸಿದ್ದರು. ಆದರೂ ಹಣ ಪಾವತಿಸುವಂತೆ ಸಾಲ ನೀಡಿದ ಆಯಪ್‌ ಕಂಪನಿಯವರು ಕಿರುಕುಳ ನೀಡುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲೆಂದು ₹25 ಲಕ್ಷ ತುಂಬಿದ್ದರು. ಆದರೂ, ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತ, ಕುಟುಂಬ ಸದಸ್ಯರಿಗೂ ಅಸಭ್ಯವಾಗಿ ಬೈಯುತ್ತ ಫೊಟೊವನ್ನು ಅಶ್ಲೀಲ ಚಿತ್ರಕ್ಕೆ ಎಡಿಟ್ ಮಾಡಿ, ಸ್ನೇಹಿತರಿಗೆ ಕಳುಹಿಸುತ್ತೇವೆ ಎಂದು ಬೆದರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು