ನನಗೂ ಸಿಎಂ ಆಗುವ ಯೋಗ್ಯತೆ ಇದೆ: ಸಚಿವ ಉಮೇಶ್‌ ಕತ್ತಿ

ಧಾರವಾಡ: ನನಗೂ ಸಿಎಂ ಆಗುವ ಯೋಗ್ಯತೆ ಇದೆ ಎನ್ನುವ ಮೂಲಕ ಸಚಿವ ಉಮೇಶ್‌ ಕತ್ತಿ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಮಾತನಾಡಿದ ಅವರು, ನಾನು 8 ಸಲ ಶಾಸಕ, 6 ಇಲಾಖೆ ನಿರ್ವಹಿಸಿದವನು. ನನಗೆ ಅನುಭವ ಇದೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ಕಳಂಕರಹಿತ ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಪಕ್ಷ ತೀರ್ಮಾನ ಮಾಡಿದರೆ ಮುಖ್ಯಮಂತ್ರಿ ಆಗುವ ಆಸೆ ಇದೆ. ಸಿಎಂ ಆದ ಮೇಲೆ ಪ್ರಧಾನಿಯಾಗುವ ಆಸೆಯೂ ಇರುತ್ತೆ. ಈಗ ಸದ್ಯಕ್ಕೆ ಅಖಂಡ ಕರ್ನಾಟಕದಲ್ಲಿ ಬದುಕಿದ್ದೇನೆ. ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದಾರೆ. ಉತ್ತರ ಕರ್ನಾಟಕಕ್ಕೆ ತೊಂದರೆಯಾದರೆ ಪ್ರತ್ಯೇಕತೆ ಕೂಗು ಎಬ್ಬಿಸುವೆ. ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುತ್ತೇನೆ. ತೊಂದರೆ ಆದಾಗ ಕೂಗು ಎಬ್ಬಿಸಬೇಕಾಗುತ್ತದೆ. ಉತ್ತರ ಕರ್ನಾಟಕವನ್ನು ಒಡೆಯುವ ಉದ್ದೇಶ ನನಗಿಲ್ಲ. ಅಖಂಡ ಕರ್ನಾಟಕದಲ್ಲಿದ್ದು ಅದನ್ನು ಆಳಬೇಕೆಂಬ ಉದ್ದೇಶ ನನಗಿದೆ ಎಂದು ತಿಳಿಸಿದ್ದಾರೆ.

Indresh KC

Recent Posts

ನಾಳೆ ಪ್ರಚಾರ ನಿಮಿತ್ಯ ಕಲಬುರಗಿಯ ಸೇಡಂ ತಾಲೂಕಿಗೆ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಳೆ ಸೇಡಂಗೆ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ…

4 hours ago

ಅಧಿಕಾರಕ್ಕಾಗಿ ಮಾನವಿಯತೆ ಮರೆತಿದ್ದಾರೆ ಖಂಡ್ರೆ : ಭಗವಂತ ಖೂಬಾ

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಈಶ್ವರ ಖಂಡ್ರೆ, ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೆಬೆಕೆನ್ನುವ ಉದ್ದೇಶದಿಂದ, ಮನುಷ್ಯತ್ವ, ಮಾನವಿಯತೆ ಮರೆತು ಬಿಟ್ಟಿದ್ದಾರೆ,…

4 hours ago

ಕಾಂಗ್ರೆಸ್‌ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ: ಯತ್ನಾಳ್‌

'ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ…

5 hours ago

ನಾಳೆಯಿಂದ ಪಿಯುಸಿ 2ನೇ ವಾರ್ಷಿಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಫ್ರೀ

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಏಪ್ರಿಲ್ 29 ರಿಂದ ಮೇ…

5 hours ago

ಸೆಲ್ಫಿ ತೆಗೆಯುವಾಗ ಕೆರೆಗೆ ಬಿದ್ದ ಮಗಳು : ಕಾಪಾಡಲು ಹೋದ ತಂದೆಯೂ ಸಾವು

ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳ ರಕ್ಷಣೆಗೆ ಹೋಗಿ ತಂದೆಯೂ ಸಾವನ್ನಪ್ಪಿದ ಧಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ…

5 hours ago

ಯತ್ನಾಳ್ ಬಾಯಿ, ಬೊಂಬಾಯಿ : ಸಚಿವ ಎಂ.ಬಿ‌.ಪಾಟೀಲ್ ತಿರುಗೇಟು

ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ, ಬೊಂಬಾಯಿ. ಅವ್ರು, ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ, ಮಲಗಿ ಎಚ್ಚರಾದ್ಮೇಲೆ ಒಂದು ಹೇಳ್ತಾರೆ. ಇವ್ರ ಮಾತನ್ನ…

5 hours ago