ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ನಾನೇ: ಬಸವರಾಜ ಹೊರಟ್ಟಿ

ಧಾರವಾಡ:‌  ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ನಾನೇ. ಮೋಹನ್ ಲಿಂಬಿಕಾಯಿ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ವರಿಷ್ಠರು ನಾನೇ ಅಭ್ಯರ್ಥಿ ಎಂದು ಮೌಖಿಕವಾಗಿ ಹೇಳಿದ ಹಿನ್ನಲೆ ಚುನಾವಣಾ ತಯಾರಿ ನಡೆಸಿದ್ದೇನೆ ಎಂದರು.

ರಾಜ್ಯಮಟ್ಟದ ನಾಯಕರು ಬಿಜೆಪಿ ಅಭ್ಯರ್ಥಿ ಅಂತಲೇ ನನ್ನನ್ನು ಕರೆ ತಂದಿದ್ದಾರೆ. ಪಕ್ಷದ ಸಿದ್ಧಾಂತ, ನಿಯಮಗಳ ಪ್ರಕಾರ ನಡೆಯುತ್ತೇನೆ. ಪಕ್ಷದಲ್ಲಿ ನನಗೆ ಕಷ್ಟ ಎನಿಸಿದರೆ, ಮುಂದೆ ಚಿಂತನೆ ಮಾಡುವೆ ಎಂದರು.

ಚುನಾವಣೆ ಎಂದಾಕ್ಷಣ ಎಲ್ಲರಿಗೂ ಕಷ್ಟವೇ. ಒತ್ತಡ ಇರುವುದು ಸಾಮಾನ್ಯ. ನಾನು ಗೆದ್ದ ಬಳಿಕ 6 ವರ್ಷ ಶಿಕ್ಷಕರಿಗಾಗಿ ಕೆಲಸ ಮಾಡುವೆ. ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವೆ. ನನ್ನ ಗೆಲವು ಖಚಿತ, ಮೇ.26ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

Sneha Gowda

Recent Posts

ಸಂಧಿವಾತದ ಸಮಸ್ಯೆಗೆ ಬಿಸಿನೀರ ಬಳಕೆ ಒಳ್ಳೆಯದು!

ಕೈಕಾಲು ಎಳೆತದಂತಹ ಕಾಯಿಲೆ ಅರ್ಥಾತ್ ಸಂಧಿವಾತ ಹೆಚ್ಚು ನೀರಲ್ಲಿ ಕೆಲಸ ಮಾಡುವವರನ್ನು ಇಲ್ಲಿಲ್ಲದಂತೆ ಕಾಡುತ್ತದೆ. ಅದರಲ್ಲೂ ಶೀತ ಪ್ರದೇಶದಲ್ಲಿ ಕೆಲಸ…

7 mins ago

ಇನ್‌ಸ್ಟಾ ಲೈವ್‌ಗೋಸ್ಕರ ಕಾರಿನ ಸ್ಪೀಡ್‌ ಹೆಚ್ಚಿಸಿದ ಸ್ನೇಹಿತ : ನಾಲ್ವರ ದುರ್ಮರಣ

ಇನ್‌ಸ್ಟಾಗ್ರಾಮ್‌ ಲೈವ್‌ ಮಾಡವುದಕ್ಕಾಗಿ ಸ್ನೇಹಿತ ಕಾರಿನ ವೇಗವನ್ನು ಹೆಚ್ಚಿಸಿದ್ದು ನಂತರ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದ್ದು ನಾಲ್ವರು ಸಾವನಪ್ಪಿದ್ದು…

12 mins ago

ಮಳೆಗಾಗಿ ಕತ್ತೆಗೆ ಮದುವೆ ಮಾಡಿದ ಗ್ರಾಮಸ್ಥರು

ಮಳೆ  ಇಲ್ಲದೆ ಬರ ಪರಿಸ್ಥಿರಿ ಎದುರಾಗಿದ್ದು,  ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಲ್ಲ ಸೇರಿಕೊಂಡು ಕತ್ತೆಗಳಿಗೆ ಮದುವೆ ಮಾಡಿ ವರುಣರಾಯನಿಗಾಗಿ ಪ್ರಾರ್ಥಿಸಿದ…

19 mins ago

ಜುಲೈ ಅಂತ್ಯದ ವೇಳೆಗೆ ನಾಗಸಂದ್ರ, ಮಾದಾವರದ ನಡುವೆ ಮೆಟ್ರೋ ಆರಂಭ

ಪಂಚವಾರ್ಷಿಕ ಯೋಜನೆಯಾಗಿ ಉಳಿದಿದ್ದ ನಮ್ಮ ಮೆಟ್ರೋ ಹಸಿರು ಕಾರಿಡಾರ್​ನ ನಾಗಸಂದ್ರ ಹಾಗೂ ಮಾದಾವರದ ನಡುವಿನ 3.7 ಕಿಮೀ ಮಾರ್ಗ  ಜುಲೈ…

31 mins ago

ವೃದ್ಧನ ಅನ್ನನಾಳದಲ್ಲಿ ಸಿಲುಕಿದ್ದ ಮಟನ್ ಮೂಳೆಯನ್ನು ಹೊರತೆಗೆದ ವೈದ್ಯರು

ಎಲ್‌ಬಿ ನಗರದ ಕಾಮಿನೇನಿ ಆಸ್ಪತ್ರೆಯ ವೈದ್ಯರು 66 ವರ್ಷದ ರೋಗಿಯ ಹೃದಯದ ಬಳಿ ಅನ್ನನಾಳದಲ್ಲಿ ಸಿಲುಕಿದ್ದ ಮಟನ್ ಮೂಳೆಯನ್ನು ಯಶಸ್ವಿಯಾಗಿ…

40 mins ago

ಬಿಜೆಪಿಯು ಸಂವಿಧಾನವನ್ನು ನಾಶಪಡಿಸಲು ಬಯಸುತ್ತಿದೆ ಎಂದ ರಾಹುಲ್‌

ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ನಾಶಪಡಿಸಲು ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ…

49 mins ago