News Karnataka Kannada
Sunday, April 14 2024
Cricket
ಹುಬ್ಬಳ್ಳಿ-ಧಾರವಾಡ

ಹಳೆಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರಿಗೆ ತೊಂದರೆ ಕೊಡಬೇಡಿ; ಎಚ್ಡಿಕೆ

Photo Credit :

ಹುಬ್ಬಳ್ಳಿ: ಹಳೆಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರಿಗೆ ತೊಂದರೆ ಕೊಡಬೇಡಿ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

ಇಲ್ಲಿನ ಅಂಜುಮನ್ ಸಂಸ್ಥೆಯ ನೆಹರೂ ಕಾಲೇಜಿಗೆ ಗುರುವಾರ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಗಲಭೆಯನ್ನು ನೋಡಲು ಸಾಕಷ್ಟು ಯುವಜನತೆ ಅಲ್ಲಿಗೆ ಬಂದಿದ್ದರು.

ಅವರನ್ನು ಕೂಡ ಬಂಧಿಸಲಾಗಿದೆ. ಬಂಧಿತರಿಗೆ ಅಪರಾಧ ಹಿನ್ನೆಲೆಗಳಿದ್ದರೆ ಕ್ರಮ ಕೈಗೊಳ್ಳಲಿ. ಪ್ರಕರಣಗಳು ಇಲ್ಲದಿದ್ದರೆ ಅವರನ್ನು ಪೊಲೀಸರು ಬಿಟ್ಟುಬಿಡಬೇಕು. ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಹಾಗೂ ಕಾಣದ ಕೈಗಳ ಶಕ್ತಿಯನ್ನು ಮಟ್ಟ ಹಾಕುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು’ ಎಂದು ಆಗ್ರಹಿಸಿದರು.

‘ದೊಡ್ಡ ಅನಾಹುತ ಆಗುವುದನ್ನು ಪೊಲೀಸರು ತಮ್ಮ ಸಾಮರ್ಥ್ಯದಿಂದ ತಡೆದಿದ್ದಾರೆ. ನಿಜಕ್ಕೂ ಅವರು ಅಭಿನಂದನಾರ್ಹರು. ಗಲಭೆ ಪೂರ್ವನಿಯೋಜಿತವೆಂದು ಗೊತ್ತಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಭಾಳ್ವೆಯ ವಾತಾವರಣ ಕಾಪಾಡುವಂತೆ ಮಾಡುವುದು ಎಲ್ಲ ಧರ್ಮಗಳ ಜವಾಬ್ದಾರಿ’ ಎಂದರು.

‘ಕರಾವಳಿ ಭಾಗದಲ್ಲಿ ಹಲಾಲ್ ಹಾಗೂ ಹಿಜಾಬ್ ವಿಚಾರಗಳನ್ನು ಸರ್ಕಾರ ಆರಂಭದಲ್ಲಿಯೇ ಚಿವುಟಿ ಹಾಕಬೇಕಿತ್ತು. ಆದರೆ, ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿಲ್ಲ. ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆ ನಡೆಯಲು ಕಾರಣರಾದವರು ಈಗ ಅರಾಮವಾಗಿ ಒಂದು ಪಕ್ಷದ ಮುಖಂಡರ ಜೊತೆಗೆ ಸುತ್ತಾಡುತ್ತಿದ್ದಾರೆ’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು