News Karnataka Kannada
Thursday, April 25 2024
ಹುಬ್ಬಳ್ಳಿ-ಧಾರವಾಡ

ಐರಾವತ ಬಸ್ – ಕಾರು ಮುಖಾಮುಖಿ ಢಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು

Accident Logo
Photo Credit :

ಹುಬ್ಬಳ್ಳಿ:  ತಾಲೂಕಿನ ಶಿರಗುಪ್ಪಿ ಬಳಿ  ಐರಾವತ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಕಾರು ಚಾಲಕ ಹಾಗೂ ಅವರ ತಾಯಿ ಸ್ಥಳದಲ್ಲೇ ಮೃತಪಟ್ಟು,ಐವರು ಗಾಯಗೊಂಡಿರುವ ಘಟನೆ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರು ಗುಜರಾತ್ ಮೂಲದ ಹುಬ್ಬಳ್ಳಿ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿಯಿಂದ ಹಂಪಿಗೆ ಮಹೀಂದ್ರಾ ವಾಹನದಲ್ಲಿ ಕುಟುಂಬ ಸಮೇತರಾಗಿ ಹೊರಟಿದ್ದಾಗ ಗದಗ ಕಡೆಯಿಂದ ಹುಬ್ಬಳ್ಳಿ ಕಡಗೆ ವೇಗವಾಗಿ ರಾಂಗ್ ಸೈಡ್ ನಲ್ಲಿ ಬರುತ್ತಿದ್ದ ಐರಾವತ ಬಸ್ ಢಿಕ್ಕಿ ಹೊಡೆದಿದ್ದರಿಂದ ಅವಘಡ ಸಂಭವಿಸಿದೆ.

ಗಾಯಾಳುಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಇನ್ಸ್ ಪೆಕ್ಟರ್ ರಮೇಶ ಗೋಕಾಕ ಮತ್ತು ಸಿಬ್ಬಂದಿ ತೆರಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು