News Karnataka Kannada
Wednesday, April 17 2024
Cricket
ಬೆಳಗಾವಿ

ಟ್ಯಾಂಕರ್‌ಗೆ 1 ಸಾವಿರ ರೂ. ನೀಡಿ ಭತ್ತ ಕೃಷಿಗೆ ನೀರು ಪೂರೈಸುತ್ತಿರುವ ರೈತರು

Rs 1,000 per tanker. Farmers supplying water for paddy cultivation
Photo Credit : News Kannada

ಬೆಳಗಾವಿ: ಜೂನ್‌ ತಿಂಗಳು ಪೂರ್ಣಗೊಳ್ಳುತ್ತ ಬಂದಿದ್ದರೂ ಕರ್ನಾಟಕದಲ್ಲಿ ಮುಂಗಾರು ಮಳೆಯ ಯಾವುದೇ ಲಕ್ಷಣಗಳು ತೋರುತ್ತಿಲ್ಲ. ಜಲಾಶಯಗಳೆಲ್ಲಾ ಬರಿದಾಗುವ ಹಂತ ತಲುಪಿದ್ದು, ನೀರಿಗಾಗಿ ಹಾಹಾಕಾರ ಎದ್ದಿದೆ. ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆ ಕೃಷಿಕರಿಗೆ ನೀರಿನ ಕೊರತೆ ಎದುರಾಗಿದ್ದು, ತಾನು ಬೆಳೆದ ಬೆಳೆಗಳನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಮುಂಗಾರು ಆಗಮನದಲ್ಲಿ 15 ದಿನಗಳ ವಿಳಂಬವು ಪ್ರಾಥಮಿಕವಾಗಿ ಭತ್ತವನ್ನು ಬೆಳೆಯುವ ಬೆಳಗಾವಿ ತಾಲೂಕಿನ ರೈತರಿಗೆ ಸವಾಲಾಗಿದ್ದು, ಖಾಸಗಿ ಪೂರೈಕೆದಾರರಿಂದ ನೀರು ಖರೀದಿಸಿ ಭತ್ತದ ಕೃಷಿಗೆ ನೀರುಣಿಸಲು ಮುಂದಾಗಿದ್ದಾರೆ. ಆ ಮೂಲಕ ಹೆಚ್ಚಿದ ಬೀಜ ಮತ್ತು ಗೊಬ್ಬರದ ವೆಚ್ಚದ ಜೊತೆಗೆ ರೈತರು ನೀರಿನ ವೆಚ್ಚವನ್ನೂ ಭರಿಸಬೇಕಾಗಿದೆ.

ಇನ್ನೊಂದೆಡೆ, ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಖಾಸಗಿ ನೀರು ಪೂರೈಕೆದಾರರು ಬೆಲೆ ಏರಿಕೆ ಮಾಡಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಈಗ ರೈತರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಈ ಹಿಂದೆ 2000 ಲೀಟರ್ ನೀರು ಇರುವ ಟ್ಯಾಂಕರ್‌ಗೆ 500 ರೂ. ನೀಡುತ್ತಿದ್ದ ರೈತರು ಈಗ 1,000 ರೂ.ಗೆ ಖರೀದಿಸಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.

ಬೆಳಗಾವಿ ತಾಲೂಕಿನ ದಕ್ಷಿಣ ಭಾಗದಲ್ಲಿ ಭತ್ತದ ಕೃಷಿ ಪ್ರಧಾನವಾಗಿದ್ದು, ಅಂಗೋಲ್, ವಡಗಾವಿ, ಸುಳಗಾ, ಯಳ್ಳೂರು, ದಮನೆ, ಮಜಗಾವಿ ಮತ್ತು ಅಕ್ಕಪಕ್ಕದ ಗ್ರಾಮಗಳ ರೈತರು ಬಾಸುಮತಿ, ಸಾಯಿರಾಂ, ಶುಭಾಂಗಿ, ಸೋನಾಮಸೂರಿ ಮುಂತಾದ ಬೆಳೆ ಬೆಳೆಯುತ್ತಾರೆ. ಸೋನಾಮಸೂರಿ ಅಕ್ಕಿಯನ್ನು ವಾಣಿಜ್ಯ ಬೆಳೆ ಎಂದು ಪರಿಗಣಿಸಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು