Categories: ಬೆಳಗಾವಿ

ಸ್ವಗ್ರಾಮ ತಲುಪಿದ ಸಂತೋಷ್ ಪಾಟೀಲ್ ಮೃತದೇಹ

ಬೆಳಗಾವಿ : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಅವರ ಪಾರ್ಥಿವ ಶರೀರ ಇಂದು ತಾಲೂಕಿನ ಬಡಸ ಗ್ರಾಮಕ್ಕೆ ತಲುಪಿದೆ.

ಉಡುಪಿಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್ ಪಾಟೀಲ್ ಮೃತದೇಹವನ್ನು ಉಡುಪಿಯಿಂದ ಸ್ವಗ್ರಾಮ ಬಡಸ ಗ್ರಾಮಕ್ಕೆ ತರಲಾಗಿದೆ.

ಉಡುಪಿಯಿಂದ ಮೃತದೇಹದೊಂದಿಗೆ ಬಂದಿದ್ದ ಮೃತನ ಸಹೋದರ ಬಸವನಗೌಡ ಪೊಲೀಸ್ ಆಯುಕ್ತರ ಕಚೇರಿಗೆ ಮೃತದೇಹ ಕೊಂಡೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಹೂಟ್ಟೂರು ಬಡಸ ಗ್ರಾಮಕ್ಕೆ ಮೃತದೇಹವನ್ನು ಕೊಂಡೊಯ್ಯಲಾಗಿದೆ.

ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಪರ್ಸೆಂಟೇಜ್ ಆರೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹವನ್ನು ನಿನ್ನೆ ಮಣಿಪಾಲ ಫಾರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಹಸ್ತಾಂತರ ಮಾಡಲಾಯಿತು. ಬಳಿಕ ಹವಾನಿಯಂತ್ರಿತ ಅಂಬುಲೆನ್ಸ್ ನಲ್ಲಿ ಮೃತದೇಹವನ್ನು ಬೆಳಗಾವಿಯ ಬಡಸ ಗ್ರಾಮಕ್ಕೆ ರವಾನೆ ಮಾಡಲಾಗಿದೆ.

Gayathri SG

Recent Posts

ವಕೀಲ ದೇವರಾಜೆಗೌಡ ಮತ್ತೆ 2 ದಿನ ಎಸ್‌ಐಟಿ ಕಸ್ಟಡಿಗೆ

ಜಿಲ್ಲೆಯ 5ನೇ ಸಿವಿಲ್ ಕೋರ್ಟ್‌ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು,…

8 mins ago

ಕೇರಳದಲ್ಲಿ ಭಾರೀ ಮಳೆ : ರೆಡ್ ಅಲರ್ಟ್ ಘೋಷಣೆ

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ದೇವರನಾಡು ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಶನಿವಾರ ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್…

23 mins ago

ವಿಧಾನಪರಿಷತ್ ಚುನಾವಣೆ : ನಾಮಪತ್ರ ಅಂಗೀಕಾರ,ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್

ರಾಜ್ಯ ವಿಧಾನ ಪರಿಷತ್​ಗೆ ನೈಋತ್ಯ, ಈಶಾನ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ…

45 mins ago

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ : ಫೀಲ್ಡಿಂಗ್​ ಆಯ್ಕೆ

ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​…

1 hour ago

ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಜಾರ್ಜ್

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟ ದಿಂದ…

2 hours ago

ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದು ಡಾ.ಮೋಹನ್‌ಕುಮಾರ್

ಆಸ್ಪತ್ರೆಯಲ್ಲಿ ಶುಶ್ರೂ?ಕಿಯರ ಪಾತ್ರ ಮಹತ್ವದ್ದು, ದಾದಿಯರು ಯಾ ವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲೇಗೌಡ ಜಿಲ್ಲಾ ಸ್ಪತ್ರೆ…

3 hours ago