News Karnataka Kannada
Thursday, April 18 2024
Cricket
ಬಾಗಲಕೋಟೆ

ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್​ಗೆ ಕಲ್ಲೆಸೆದು ದಂಡ ಕಟ್ಟಿದ ಮಹಿಳೆ

Woman throws stones at non-stop bus on its way to Hospet
Photo Credit : News Kannada

ಹೊಸಪೇಟೆ: ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪಗೊಂಡ ಮಹಿಳೆ ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್​ಗೆ ಕಲ್ಲೆಸೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಲಿಂಗಾಪುರದಲ್ಲಿ ನಡೆದಿದೆ.

ಬಸ್ ಗೆ ಏಕೆ ಕಲ್ಲು ಹೊಡೆದೆ ಎಂದು ಬಸ್ಸಿನ ಚಾಲಕ ಮತ್ತು ನಿರ್ವಾಹಕ ಕೇಳಿದ್ದಕ್ಕೆ, ಯಾವ ಬಸ್ಸು ನಿಲ್ಲಿಸದಿದ್ದರೆ ನಾವು ಪ್ರಯಾಣ ಮಾಡುವುದು ಹೇಗೆ ಎಂದು ಮಹಿಳೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಇದರಿಂದ ಚಾಲಕ ಬಸ್ ಅನ್ನು ಪ್ಯಾಸೆಂಜರ್ ಸಮೇತ ಮುನಿರಾಬಾದ್ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾನೆ.

ಬಸ್ ಡ್ಯಾಮೇಜ್ ಹಿನ್ನೆಲೆ 5000 ರೂಪಾಯಿ ದಂಡ ಕಟ್ಟುವಂತೆ ಬಸ್ ಡಿಪೋ ಮ್ಯಾನೇಜರ್ ಖಡಕ್ ಎಚ್ಚರಿಕೆ ಕೊಟ್ಟರು. ಬಳಿಕ ಮಹಿಳೆ ಪರಿಪರಿಯಾಗಿ ಬೇಡಿಕೊಂಡು 2 ಸಾವಿರ ರೂಪಾಯಿ ದಂಡ ಕಟ್ಟಿ ಅದೇ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು