News Karnataka Kannada
Wednesday, April 24 2024
Cricket
ಬಾಗಲಕೋಟೆ

ಬಾಗಲಕೋಟೆಯ ಗೊಂದಲಿ ಪದ ಹಾಡುಗಾರನ ಗುಣಗಾನ ಮಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಲ್ಲಿ ಬಾಗಲಕೋಟೆ ಗೊಂದಲಿ ಪದ ಹಾಡುಗಾರ ವೆಂಕಪ್ಪ ಅಂಬಾಜಿ ಸುಗತೇಕರ್ ಅವರನ್ನು ಹಾಡಿ ಹೊಗಲಿದ್ದಾರೆ.
Photo Credit : News Kannada

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಲ್ಲಿ ಬಾಗಲಕೋಟೆ ಗೊಂದಲಿ ಪದ ಹಾಡುಗಾರ ವೆಂಕಪ್ಪ ಅಂಬಾಜಿ ಸುಗತೇಕರ್ ಅವರನ್ನು ಹಾಡಿ ಹೊಗಲಿದ್ದಾರೆ.

ವೆಂಕಪ್ಪ ಅಂಬಾಜಿ ಸುಗತೇಕರ್ ಬಾಗಲಕೋಟೆಯ ನವನನಗರದ ನಿವಾಸಿಯಾಗಿದ್ದು, ಮನ್‌ ಕೀ ಬಾತ್‌ ರೇಡಿಯೊ ಸರಣಿಯ 110ನೇ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ವೆಂಕಪ್ಪ ಅವರನ್ನು ಮೋದಿ ಗುಣಗಾನ ಮಾಡಿದ್ದಾರೆ.

81 ವರ್ಷದ ವೆಂಕಪ್ಪ ಸುಗತೇಕರ್ 150ಕ್ಕೂ ಹೆಚ್ಚು ಕಥೆ ಹೇಳುವ ಸಾವಿರಕ್ಕೂ ಅಧಿಕ ಗೊಂದಲಿ ಹಾಡು ಹಾಡಿದ್ದಾರೆ. ಕಳೆದ 71 ವರ್ಷದಿಂದ ಗೊಂದಲಿ ಪದ ಸೇವೆ ಮಾಡುತ್ತಾ ಬಂದಿದ್ದಾರೆ. ಕರ್ನಾಟಕ ಸರಕಾರದಿಂದ 2022 ರಲ್ಲಿ ಗೊಂದಲಿ ಪದ ಸೇವೆಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ರಾಜ್ಯ ಸರಕಾರದಿಂದ ಈ ಹಿಂದೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಯನ್ನು ವೆಂಕಪ್ಪ ಸುಗತೇಕರ್ ಪಡೆದಿದ್ದಾರೆ. ಆಕಾಶವಾಣಿ, ದೂರದರ್ಶನ ಸೇರಿದಂತೆ ರಾಜ್ಯ ಪರರಾಜ್ಯದಲ್ಲೂ ಸಾವಿರಾರು ಕಾರ್ಯಕ್ರಮ ವೆಂಕಪ್ಪ ಸುಗತೇಕರ್ ನೀಡಿದ್ದಾರೆ.

ವಂಶಪಾರಂಪರ್ಯವಾಗಿ ಬಂದ ಗೊಂದಲಿ ಪದವನ್ನು ಸಾಕಷ್ಟು ಜನರಿಗೆ ಒಂದು ರೂಪಾಯಿಯನ್ನೂ ಪಡೆಯದೆ ಜನಪದ ಹಾಡುಗಳನ್ನು ಹಾಡುವುದನ್ನು ಕಲಿಸಿದ್ದಾರೆ. ಇವರ ಸೇವೆ ಶ್ಲಾಘನೀಯವಾಗಿದೆ ಎಂದು ಪ್ರಧಾನಿ ಮೋದಿ ಹೊಗಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು